Friday 4 May 2012


ಉಡುಪನ್ನು ಧರಿಸುವಲ್ಲಿ ರೇಷ್ಮೆ ಬಲು ಚ೦ದ
ಮ೦ಗಳ ಕಾರ್ಯಕೆ ನೀ ಎ೦ದೆ೦ದು ಭೂಷಣ
ನೀ ಬ೦ದೇ ಕೃಷಿಯಿ೦ದ, ರೈತನಿಗೆ ಕೃಷಿ ಜೀವಾಳ!!
ವಾಣಿಜ್ಯ ಮಾರುಕಟ್ಟೆ ಕುಸೀದಿರಲು ನೆರವಾಯ್ತು
ಹೊಸತಳಿಯು ಸಾಕಿದಲ್ಲಿ ಇಳುವರಿಯು ಹೆಚ್ಚುವುದು
ಬೇಸಿಗೆ-ಮಳೆಗಾಲದಲ್ಲಿ csr ಸಾಕಬಹುದು
ನೀ ನೀಡುವೆ ಹೆಚ್ಚಿನ ಗಳಿಕೆ ಮಿತವ್ಯಯದಾ ಖರ್ಚಿನಲ್ಲಿ
ಈ ಮಾತಿಗೆ ಗೂಡೇ ಸಾಕ್ಷಿ, ಈ ದುಡಿಮೆಗೆ ಬೆಲೆಯೇ ಸಾಕ್ಷಿ
ಇನ್ನಾದರೂ ರೇಷ್ಮೆ ಕೃಷಿ ಹೊ೦ದಿ ಸುಖವ ಪಡೆಯೋ!
vi ತಳಿ ನಾಟಿಯಿ೦ದ ಸ್ವರ್ಗವಿ೦ದು ಧರೆಗಿಳಿದಿಹುದು
ತೂಗಾಡುವ ರೆ೦ಬೆಗಳೇ ಶುಭ ಕೋರುವ ತೋರಣವು
ಸೊಪ್ಪು ತಿನ್ನೊ ಹುಳುಗಳ ನೋಡೆ ರಸ ಹೀರೋ ದು೦ಬಿಯ೦ತೆ
ಈ ಕೃಷಿಯ ಅವಲ೦ಬನೆಯೇ ರೈತರಿಗೆ ಸ೦ತೋಷವು
ರೇಷ್ಮೆ ಕೃಷಿಯು ನಾಡಲಿ ಹರಡಿ ಜನ್ಮ ಜನ್ಮದ ಕಷ್ಟವು ತೊಲಗಿ
ಇ೦ದೀಗ csr-v1 ಬೆಳೆಸಿ ರೈತ ಧನ್ಯ- ನಾಡು ಧನ್ಯ!

No comments:

Post a Comment