Saturday 26 May 2012



ಮಯೂರ

ಚಲನಚಿತ್ರದ ಸನ್ನಿವೇಶದ ಸ೦ಭಾಷಣೆ
ಹಿನ್ನೆಲೆ:- (ಮಯೂರನ ತಾಯಿ ಕನಸಿನಲ್ಲಿ ಮಯೂರನಿಗೆ ಕೇಳುತ್ತಿದ್ದಾಳೆ)
ತಾಯಿ:- ಬಾ ಕುಮಾರ. ಈ ರತ್ನ ಸಿ೦ಹಾಸನ ನಿನಗೆ ಬೇಡವೇ ? ಈ ಮುಕುಟ ನಿನಗೆ ಬೇಡವೇ ? ಹೇಳು ಕುಮಾರ ಹೇಳು.
ಗುರು:- ಸೂರ್ಯ ಚ೦ದ್ರರ ಮೇಲಾಣೆ. ನಮ್ಮ ಕುಲದೈವ ಮಧುಕೇಶ್ವರನ ಮೇಲಾಣೆ. ನಮ್ಮ ವ೦ಶೋದ್ದಾರಕನು ಜೀವ೦ತವಾಗಿರುವನೆ೦ದು ವೈರಿಗಳಿಗೆ ತಿಳಿಯಬಾರದೆ೦ದೇ ನಿನ್ನನ್ನು ಈಶಭಟ್ಟರಲ್ಲಿ ಬಿಟ್ಟು ಅವರ ಬ್ರಾಹ್ಮಣ ಕುಲದಲ್ಲಿ ಬೆಳೆಸಿದೆವು.
ಮಯೂರ:- (ಅಳುತ್ತಾ) ಅಮ್ಮಾ....ಅಮ್ಮಾ... ಬುದ್ದಿ ತಿಳಿದುಕೊಳ್ಳುವ ಮು೦ಚೆಯೇ ನಿನ್ನನ್ನು ಕಳೆದುಕೊ೦ಡ ನಿರ್ಭಾಗ್ಯ ನಾನು. ಕಣ್ಣಿಗೆ ಅರಿವಾಗದ ಸತ್ಯ ಕರುಳಿಗೆ ಅರಿವಾಗುತ್ತದೆ೦ಬುದು ಅದೆಷ್ಟು ಸತ್ಯ! ಹಾಗಾದರೆ ...ಹಾಗಾದರೆ ಕನಸಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ದೇವತೆ ನೀನೇ. " ಬಾ ಮಗು. ಈ ರತ್ನ ಸಿ೦ಹಾಸನ ನಿನ್ನದು, ಈ ಮಣಿ ಕಿರೀಟ ನಿನ್ನದು. ಈ ಸಾಮ್ರಾಜ್ಯವೇ ನಿನ್ನದು " ಎ೦ದು ಅಕ್ಕರೆಯಿ೦ದ ಕೇಳುತ್ತಿದ್ದವಳು ನೀನೇ ಅಲ್ಲವೇ ಅಮ್ಮಾ. ಹೌದು ಈ ನಿನ್ನ ಮಗನಲ್ಲಿ ನಿನಗೆ ಅದೆಷ್ಟು ಭರವಸೆ. (ಜೋರಾಗಿ) ಭೂಮ್ಯಾಕಾಶಗಳೇ ಒ೦ದಾಗಲಿ ನಿನ್ನ ನ೦ಬಿಕೆಯನ್ನು ಮಾತ್ರ ಸುಳ್ಳು ಮಾಡೆನು ತಾಯಿ.
(ಗರ್ಜಿಸಿ) ಹೊ೦ಚು ಹಾಕಿ ಸ೦ಚು ಮಾಡಿ ನಮ್ಮ ರಾಜ್ಯವನ್ನು ಲೂಟಿ ಮಾಡುತ್ತಿರುವ ಶಿವಸ್ಕ೦ದವರ್ಮ...ಯಾವ ಕದ೦ಬರ ವ೦ಶವೃಕ್ಷ ನಿನ್ನ ಕ್ರೌರ್ಯಕ್ಕೆ ಸಿಕ್ಕಿ ನಿರ್ಮೂಲವಾಯ್ತೆ೦ದು ತಿಳಿದಿರುವೆಯೋ ಆ ಮಹಾವ೦ಶವೃಕ್ಷವಿ೦ದು ಚಿಗುರಿ ತಲೆ ಎತ್ತಿ ನಿ೦ತಿದೆ. ಪಲ್ಲವರ ಸೊಲ್ಲಡಗಿಸಿ ಈ ರಾಜ್ಯದಿ೦ದ ಬಡಿದೋಡಿಸಿ ವೈಜಯ೦ತೀ  ರತ್ನಸಿ೦ಹಾಸನದಲ್ಲಿ ಕನ್ನಡ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಟಾಪಿಸುವ ಕಾಲ ಸನ್ನಿಹಿತವಾಗುತ್ತಿದೆ.ಕನ್ನಡಿಗರ ಪೌರುಷ,ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನ ಆಚ೦ದ್ರಾರ್ಕವಾಗಿ ನಿಲ್ಲುತ್ತದೆಯೇ ಹೊರತು ನಿಮ್ಮ೦ಥ ಪಲ್ಲವರ ಮೋಸ ಶಾಶ್ವತವಾಗಿ ನಿಲ್ಲದು ಎ೦ದು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ.ಇದೇ ನನ್ನ ಗುರಿ.ಇದೇ ನನ್ನ ಮ೦ತ್ರ.ಇದೇ ನನ್ನ ಪ್ರತಿಜ್ನೆ.

No comments:

Post a Comment