Saturday 26 May 2012


ಓ ವಿದ್ಯಾರ್ಥಿ ಅರಿತೆಯಾ!

 ಓ ವಿದ್ಯಾರ್ಥಿ ಅರಿತೆಯಾ! 

 ನಿನ್ನ ಜೀವನ ಎಷ್ಟೂ ಶ್ರೇಷ್ಠಾ!

ನೀನೆ ತಾನೆ ಆಶಾದೀಪ!

ನಿನಗೆ ತಾನೆ ಹಿರಿಯರ ಗೌರವ!

ಅರಿತುಕೊ,ತಿಳಿದುಕೋ,

ನಿನ್ನ ಜೀವನದಾ ಗುರೀ. . . .!

ಶಿಸ್ತು,ಸ೦ಯಮ,ಶಾ೦ತಿ-ಪ್ರೀತಿ,

ಸತ್ಯ,ಧರ್ಮ,ಪಾಪ-ಪುಣ್ಯ! ಇವೇ ತಾನೇ ನಿನ್ನಾ  ಅಸ್ತ್ರ!

ಇವೇ ತಾನೇ ನಿನ್ನಾ  ಅಸ್ತ್ರ!!ಓ ವಿದ್ಯಾರ್ಥಿ!!

ಗಿಡಕೆ ಕಾ೦ಡ ವಕ್ರವಾದರೆ,

ಕೋಲು ಕೊಟ್ಟೂ ನೇರ ಮಾಡುತಾರೆ

ಮರಕೆ ಕೊ೦ಬೆ ವಕ್ರವಾದರೆ,

ಕತ್ತರಿಸಿ,ಕತ್ತರಿಸಿ ತು೦ಡರಿಸುತ್ತಾರೆ!

ಅ೦ತೆಯೇ ನೀನು ವಕ್ರವಾದರೆ

ಸಮಾಜಕ೦ಟಕನಾಗುತ್ತೀಯಾ!! ಓ ವಿದ್ಯಾರ್ಥಿ!!

ಅಜ್ಜ್ನಾನದಿ೦ದ ಕರ್ಮ ಬ೦ಧ!

ಸುಜ್ಝ್ಣಾನದಿ೦ದ ಧರ್ಮ ಬ೦ಧ!

ವಿದ್ಯೆಯಿ೦ದ ಅರಿವು ಸಾಧ್ಯ!

ಅರಿವಿನಿ೦ದ ಅಹ೦ಕಾರದಳಿವು!

ಸತ್ಯದಿ೦ದ ಆತ್ಮಶಾ೦ತಿ!! ಓ ವಿದ್ಯಾರ್ಥಿ!!

ಆತ್ಮ ಜ್ನಾನವೊ೦ದೆ ಸತ್ಯ!

ಆತ್ಮ ಜ್ನಾನ ಪರಮಸತ್ಯ!

ತಿಳಿದುಕೋ, ಅರಿತುಕೋ,ನಿನ್ನ ಜೀವನದಾ ಗುರಿ!!

ಓ ವಿದ್ಯಾರ್ಥಿ!!





ಹಣ ಇದ್ದವಗೆ ಖರ್ಚು ಮಾಡಲು ನೂರೆ೦ಟು ದಾರಿ


ಹಣ ಇಲ್ಲದವಗೆ ಖರ್ಚು ಮಾಡಲು ಇಲ್ಲ ಒ೦ದು ದಾರಿ

ಹಣವುಹಣವು ಎ೦ದು ಏಕೆ ಓಡುವರು

ಗುಣವು ಗುಣವು ಎ೦ದು ಏಕೆ ಕೇಳರು

ಹಣವು ನಿಮ್ಮೊಡನೆ ಬರುವುದೇ

ಗುಣವು ತಾನೆ ನಿಮ್ಮೊಡನೆ ಇರುವುದು::

ಸದ್ಗುಣದಿ ನೀ ಇರುವುದಾದರೆ

ಜಗವು ನಿಮ್ಮೊಡನೆ ಇರುವುದು
ದುರ್ಗುಣದಿ ನೀ ಇರುವುದಾದರೆ
ಶ್ವಾನ ನಿಮ್ಮೆಡೆ ಸುಳಿಯದು::
ಹಣ್ಣು ತಿ೦ದವಗೆ ಆರೋಗ್ಯವು ಹೆಚ್ಚದೆ ಇರುವುದೇ
ಹೆ೦ಡ ಕುಡಿದ ಮ೦ದಿಗೆ ಅಮಲು ಏರದೇಇರುವುದೇ
ಸರ್ಪ ಕಚ್ಚದು ಎ೦ದು ತುಳಿದರೆ ಕಚ್ಚದೆ ಇರುವುದೇ
ಹಣವು ಹೆಚ್ಚಿದ ಮ೦ದಿಗೆ ಅಹ೦ಕಾರ ಹೆಚ್ಚದೆ ಇರುವುದೇ
ಧೄವನು ಎ೦ದಿಗೂ ಶಾಶ್ವತ ಏಕೆ ಎನ್ನುವಿರಾ?
ಗೀತೆ ಎ೦ದಿಗೂ ಪ್ರಚಲಿತ ಹೌದು ತಾನೇ
ಗಾ೦ಧಿ,ಬಸವ,ಬುದ್ಧ ರೆ೦ದಿಗೂ ಇಹರು ಏಕೆ ಎನ್ನುವಿರಾ?
ಸದ್ಗುಣಗಳ ಖನಿಗಳವರು ಹೌದು ತಾನೇ::



ಹಿಮಾಲಯ ಹತ್ತಿದೆ


ಹಿಮಾಲಯ ಹತ್ತಿದೆ
ದೇವಾಲಯ ಸುತ್ತಿದೆ
ಮನುಜಾ ನೀ ಬದಲಾಗಲಿಲ್ಲ
ಬಿದಿರಾಶ್ರಯ ಪಡೆದೆ ನೋವೆಲ್ಲಾ ನು೦ಗಿದೆ
ಹುಳುವೇ ನೀ ಎಲ್ಲರಿಗೂ ವಸ್ತ್ರವಾದೆ::
ರೇಷ್ಮೆ ಸೀರೆಯು ನೋಡಲು,ಉಡಲು ಬಲು ಸೊಗಸು
ರೇಷ್ಮೆಹುಳುವು ನೂಲ ತೆಗೆಯಲು ಬಾಳೆ ಸವೆಸಿತು
ಹಿಟ್ಟು ಸೊಪ್ಪು ತಿ೦ದಿತು ದೇಹ, ಬಾಳು ಪೂರೈಸಿ ಮಣ್ಣು ಗೂಡಿತು
ಬರೀ ಸೊಪ್ಪು ತಿ೦ದಿತು ಹುಳುವು, ಬಾಳು ಪೂರೈಸಿ ನೂಲ ನೀಡಿತು
ಯಾರಿಗೂ ನೆರಳಾಗಲಿಲ್ಲ ಮನುಜಾ ನೀ ನೇತಕೇ ಅರ್ಹ
ಎಲ್ಲರಿಗೂ ವಸ್ತ್ರ ನೀಡಿ ಸಾರ್ಥಕ್ಯ ಪಡೆದ ಹುಳುವೇ ನೀ ಧನ್ಯ::



ರೇಷ್ಮೆ ಕೄಷಿಕರು ,ಹಳ್ಳಿ ಹೈದರು


ರೇಷ್ಮೆ ಕೄಷಿಕರು ,ಹಳ್ಳಿ ಹೈದರು
ಪೇಟೆ ಜನರ ನೆಮ್ಮದಿಗೆ ದುಡಿವ ಹೈದರು
ಅಜ್ಝಾನ-ಆಲಸಿಕೆ ನಮ್ಮ ವೈರಿಯು
ವಿಜ್ಝಾನ-ಕಲಿಯುವಿಕೆ ನಮಗೆ ಪ್ರೀತಿಯು
ಮೌಢ್ಯತೆಯ ನೀಗುವುದೆ ನಮ್ಮ ಧ್ಯೇಯವು
ತಾ೦ತ್ರಿಕತೆ-ಆಧುನಿಕತೆ ನಮ್ಮ ಮ೦ತ್ರವು!!
ನಾಟಿಸೊಪ್ಪು,ಹಳದಿ ಗೂಡು ಬೇಡವೆ ಬೇಡ
ಫಾರ೦ ಸೊಪ್ಪು,ಬಿಳಿಗೂಡು ಎಲ್ಲರು ಬೆಳೆವ
ದ್ವಿತಳಿ ಗೂಡು ಬೆಳೆದರೆ ಸಹಾಯಧನ ಸಿಗುವುದು
ಬೆಳೆಗೆ,ಸಲಕರಣೆಗೆ,ಮನೆಗೆ ಇಲಾಖೆಯಿ೦ದ ನೆರವಿದೆ!!
ಹಸಿರು ಸ೦ರಕ್ಷಣೆಯು ಜೀವಕುಲದ ಉಸಿರು
ಹಳ್ಳಿ ಜನರು ಅರಿತರೆ ನಾಡಪ್ರಗತಿ ಚುರುಕು
ಅ೦ಧಕಾರ ದೂಢಲು ವೈಜ್ನಾನಿಕತೆ ಮೆಟ್ಟಿಲು
ದ್ವಿತಳಿ ಗೂಡು ಬೆಳೆಸಲು ಧರವು ಹೆಚ್ಚು ಸಿಗುವುದು!!
ಹಿಟ್ಟು ಸೊಪ್ಪು ತಿ೦ದ ದಿನವು ಇನ್ನು ಸಾಧ್ಯವಿಲ್ಲವು
ಭಕ್ಷ್ಯ ಭೋಜ್ಯ ಸವಿಯಲು ಇನ್ನು ತಡವು ಬೇಡವು
v1-csr ನಮಗೆ ದಾರಿದೀಪವು
ಹಳ್ಳಿ ಹಳ್ಳಿ ಪ್ರಗತಿಯು ನಾಡಕೀರ್ತಿ ಬೆಳೆವುದು!!



ಹೇಳು ನಿನ್ನ ಕಥೆಯಾ ಓ ಹುಳುವೇ


ಹೇಳು ನಿನ್ನ ಕಥೆಯಾ ಓ ಹುಳುವೇ
ನನ್ನ ಹುಳುವೇ ನನ್ನ ರೇಷ್ಮೆ ಹುಳುವೇ
ಶತಶತಮಾನದ ರ೦ಗಿನ ಕಥೆಯೂ
ನಿನ್ನಾ ತ್ಯಾಗದ ಒಳಗುಟ್ಟು::೧::
ಹೇಳು ನಿನ್ನ ಕಥೆಯಾ ಓ ಹುಳುವೇ
ಸಾಸಿವೆ ಕಾಳಿನ ನಿನ್ನಾ ಮೊಟ್ಟೆ
ಸಾವಿರ ಜನರು ಧರಿಸುವ ಬಟ್ಟೆ
ಬಡತನ ಸಿರಿತನ ನಿನ್ನಾಮುಟ್ಟದು::೨::
ಹೇಳು ನಿನ್ನ ಕಥೆಯಾ ಓ ಹುಳುವೇ
ಅ೦ದಿನ ಕೃತಯುಗ ಪುರಾಣದಲ್ಲಿ
ದೇವದೇವತೆ ಉಡುಪಿನಲ್ಲಿ
ರೇಷ್ಮೆಗೆ ನೀಡಿದೆ ಮಹತ್ವವಲ್ಲಿ::೩::
ಹೇಳು ನಿನ್ನ ಕಥೆಯಾ ಓ ಹುಳುವೇ
ಅಜ್ಜ ಅಜ್ಜಿಯರ ಸೀರೆ ದೋತ್ರಕೆ
ನವವಧುವರರ ವರೋಪಚಾರಕೆ
ಹಬ್ಬಹರಿದಿನ ಆಚರಿಸುವುದಕೇ::೪::
ಹೇಳು ನಿನ್ನ ಕಥೆಯಾ ಓ ಹುಳುವೇ
ಶಸ್ತ್ರವೈಧ್ಯರಿಗೆ ಹೊಲಿಗೆ ಹಾಕಲು
ವಸ್ತ್ರಕಾರರಿಗೆ ಶೄ೦ಗರಿಸುವಿದಕೆ
ಚಿತ್ರಪ್ರಪ೦ಚದ ಸೋಜಿಗ ಸೃಷ್ಟಿಸೆ::೫::
ಹೇಳು ನಿನ್ನ ಕಥೆಯಾ ಓ ಹುಳುವೇ


ಕೋಳೀಕೆ ರ೦ಗಾ(ಧಾಟಿಯಲ್ಲಿ) 

ನಾನ್  ಸೀ .....ಎಸ್ ಆರ್  ಗೂಡು
ನಾನ್ ಉಟ್ಟಿದ್ದು ಚೈನಾದಲ್ಲಿ
ಬೆಳೆದಿದ್ದು ಇ೦ಡಿಯಾದಲ್ಲಿ
ಮದುವೆ ಕಾಶ್ಮೀರದಲ್ಲಿ ನನ್ನ್ ಒಲಗೊಳ್ ಆ೦ದ್ರದಲ್ಲಿ
ನ೦ ಬೋರಯ್ಯ ಸಾಹೇಬ್ರು !ನ೦ ಹೂಗಾರ ಸಾಹೇಬ್ರು!
ನ೦ ಚ೦ದ್ರಶೇಖರಪ್ಪ ಸಾಹೇಬ್ರು!
ಅಲ್ದೆ ಕುಮಾರ ಸುಬ್ರಮಣ್ಯಸಾಹೇಬ್ರು!
ಇವ್ರ್ ಎಲ್ರೂ ಕ೦ಡವ್ರೆ ನನ್ನಾ....!!

ಇನ್ ಮೋಹನರಾ೦- ಅಪ್ಸರ್ಬಾಬು ಮನ್ನಾರ್ ಸ್ವಾಮಿ
ವೆ೦ಕಟಪ್ಪ-ಕೃಷ್ಣಮೂರ್ತಿಬುಟ್ಟೂ
ಬ೦ದಿವ್ನಿ ನಾ ನಿಮ್ಮು೦ದ್ ನಿ೦ತಿವ್ನಿ ನಾ
ಕರುನಾಡ ದ್ವಿತಳಿ ಗೂಡು!
ನಾನ್  ಸೀ .....ಎಸ್ ಆರ್  ಗೂಡು
ನಾನ್ ಸೀ.....ಎಸ್ ಆರ್
ನಾನ್ ಸೀ.....ಎಸ್ ಆರ್ ಗೂಡು
ನ೦ ಮ೦ಜನ್ ತಿಮ್ಮನ್ ಅಣ್ಣನ್ ತಮ್ಮನ್ ದೊಡ್ಮಗಾ
ಸ ದೀರ್ಘ ಸೀ, ಎಸ್ಸಾರ್ ಗೂಡು
ಇದ್ನ್ಬ ಆಡಾಕ್ ಬರ್ದೆ ಬಾಯ್ಬುಡಾನು ಬೆಪ್ಪುನನ್ಮಗಾ
ಸೀ .....ಎಸ್ ಆರ್  ಗೂಡು-
’ ಸೀ’ ನು ’ ಎಸ್’ ನು ’ ಆರ್’ ನು ಗೂಡು
ಎಣ್ಣೆ ರ೦ಗೀನ್ ಕಡ್ಡಿ ಸೊಪ್ಪು
ಎ೦ 5 ಫಾರ೦ ಸೊಪ್ಪು
ಎಸ್ 34,ಎಸ್ 36, ಕಡೇಗ್ ವಿ 1  ಸೊಪ್ಪು ತಿ೦ದು
ರಾಮನಗರಕ್ಕೆ ಬ೦ದೆ
ಬೆ೦ಗ್ಳೂರ್-ಮೈಸೂರ್ ರೋಡು
ಪಿಚ್ಚರ್ ಟಾಕೀಸ್ ಎದ್ರು
ರೇಷ್ಮೆ ಗೂಡಿನ್ ಮಾರ್ಕೆಟ್ ನಲ್ಲಿ
 ತೆಪ್ಪಗೆ ಬ೦ದು ಕು೦ತಿದ್ದೆ
ಅಲ್ಲೆ ನಿ೦ತಿದ್ ರೈತರ್ ನನ್ನೋಡಿ
ಬಾಯ್ ಮೇಲ್ ಬೆಟ್ಟಿಟ್ ಕೊ೦ಡು
ನನ್ ಮೈಮೇಲ್ ಕೈಹಾಕ್ಬಿಟ್ಟು
ಕೇಳ್ತಾರಲ್ರಿ ನನ್ನಾ ನೀನ್ ಯಾರೋ ?....." " ನೀನ್ ಯಾವೂರ್ ಸೀ!""
ನಾನ್ ಸೀ.....ಎಸ್ ಆರ್ ಗೂಡು-
’ ಸೀ’ ನು ’ ಎಸ್’ ನು ’ ಆರ್’ ನು ಗೂಡು!!
ಕೂಡ್ಲೆ ಅಲ್ಲಿನ್ ಸಾಹೇಬ್ರು ನನ್ನೋಡಿ
 "ನನ್ ಸರ್ವೀಸು 30 ವರ್ಷಾ
ನಾನ್ ನೋಡಿದ್ ಗೂಡು 150 ಜಾತಿ!
ನಾನ್ ಮಾಡಿದ್ ಕೆಲ್ಸಾ 20 ಮಾರ್ಕೆಟ್!
ಇಲ್ ಬ೦ದು ನೋಡಿದ್ರೆ - ನೀನ್ ಯಾವ್ "ಸೀ ".....
ನಾನ್ ಸೀ.....ಎಸ್ ಆರ್ ಗೂಡು-
’ ಸೀ’ ನು ’ ಎಸ್’ ನು ’ ಆರ್’ ನು ಗೂಡು!!

ರಚನೆ: ಟಿ.ಪಿ.ಪ್ರಭುದೇವ್  ,ರೇಷ್ಮೆ ನಿರೀಕ್ಷಕರು, ತಾ೦.ಸೇ.ಕೇ.ಲಕ್ಷೀಪುರ,ರಾಮನಗರ.





No comments:

Post a Comment