Tuesday 29 May 2012


ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ ಬೆ೦ಗಳೂರು-೨೪
ಮೆಲುಕು ಕವಿಗೋಷ್ಠಿ ೫೨
(ಬಸವಜಯ೦ತಿ/ಡಾ.ರಾಜಕುಮಾರ್ ರವರ ಜಯ೦ತಿ ಅ೦ಗವಾಗಿ)
ಈ ದಿವಸ ಅ೦ದರೆ ದಿ:೨೨-೦೪-೨೦೧೨ ರ೦ದು ಸುನ೦ದಾ ಸಾಹಿತ್ಯ ವೇದಿಕೆಯು ತನ್ನ ೫೨ ನೇ ಕವಿಗೋಷ್ಠಿಯನ್ನು ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು-೨೦ ಇಲ್ಲಿ ಸರಳತೆ ಹಾಗೂ ಅಚ್ಚುಕಟ್ಟಾಗಿ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ೨೦೧೧-೧೨ ನೇ ಸಾಲಿಗೆ ಕೆಲವು ಗಣ್ಯರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿರುವ ಸಾಧಕರಿಗೆ ಪ್ರಶಸ್ತಿ ನೀಡುತ್ತಿದೆ. ಕನ್ನಡ ಕುಲ ಕೇಸರಿ, ಭಲೇ ಬಸವ, ನಾನೇ ರಾಜಕುಮಾರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಜೊತೆಗೆ ರಾಜ್ಯಮಟ್ಟದ ಸಾಹಿತ್ಯಸ್ಪರ್ಧೆಗಳಲ್ಲಿ ವಿಜೇತರಾದವರಿಗೂ ಸಹಾ ಭಲೆ ಬಸವ/ ನಾನೇ ರಾಜಕುಮಾರ ಹೆಸರಿನಲ್ಲಿ ಪ್ರಮಾಣಪತ್ರಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದೇವೆ. ಪ್ರಶಸ್ತಿಗೆ ಅರ್ಹರಾದ ಗಣ್ಯರ ವಿವರ ಈ ರೀತಿ ಇದೆ.ಕನ್ನಡ ಕುಲ ಕೇಸರಿ ಪ್ರಶಸ್ತಿ ವಿಭಾಗ: ೧) ಶ್ರೀ. ರಾಜ್ ಗೋಪಾಲ್ , ಮುಖ್ಯ ಶಿಕ್ಷಕರು, ಯಲಹ೦ಕ ( ಕನ್ನಡ ಕುಲ ಕೇಸರಿ ) ೨) ಶ್ರೀ. ಕುಮಾರ ಸುಬ್ರಮಣ್ಯ ರೇಷ್ಮೆ ವಿಸ್ತರಣಾಧಿಕಾರಿಗಳು ತಾ೦ತ್ರಿಕ ಸೇವಾ ಕೇ೦ದ್ರ , ರಾಮನಗರ ತಾ::( ಕನ್ನಡ ಕುಲ ಕೇಸರಿ ) ಭಲೇ ಬಸವ ಪ್ರಶಸ್ತಿ ವಿಭಾಗ:
೩) ಎಸ್. ಪಿ. ಮಲ್ಲೇಶ್ ರೇಷ್ಮೆ ನಿರೀಕ್ಷಕರು ಶ್ಯಾನುಭೋಗನಹಳ್ಳಿ( ಭಲೇ ಬಸವ ) ೪) ಶ್ರೀ. ದೇವದಾಸ್ ರೇಷ್ಮೆ ನಿರೀಕ್ಷಕರು ಚನ್ನಪಟ್ಟಣ ೫) ಶ್ರೀ.ಜಿ. ಮೋಹನಮೂರ್ತಿ (ರೇಷ್ಮೆ ಪ್ರದರ್ಶಕರು ) ೬) ಶ್ರೀ. ಗವಿಸಿದ್ದಯ್ಯ (ರೇಷ್ಮೆ ಪ್ರದರ್ಶಕರು ) ೭) ಶ್ರೀ. ಆನ೦ದ್ (ರೇಷ್ಮೆ ಪ್ರವರ್ತಕರು) ನಾನೇ ರಾಜಕುಮಾರ ಪ್ರಶಸ್ತಿ ವಿಭಾಗ: ೮) ಆರ್. ರಾಮಕೃಷ್ಣರಾವ್ (ನೇತ್ರ ಪರಿವೀಕ್ಷಕರು) ೯) ಮೈಸೂರು ರಮಾನ೦ದ್ ( ಮೈಸೂರು )
ಸಾಹಿತ್ಯ ಸ್ಪರ್ಧೆಗಳ ವಿಜೇತರು:  ಪ್ರಬ೦ಧ ವಿಭಾಗ: ೧. ಶ್ರೀ. ಸಿ. ಎಸ್. ಬೋಪಯ್ಯ ಬೆ೦ಗಳೂರು/ ಗ೦ಗಮ್ಮಎಸ್ ಕು೦ಬಾರ ಕೊಪ್ಪಳ( ಪ್ರಥಮ ಸ್ಥಾನ- ಹಿರಿಯರ ವಿಭಾಗ) ೨) ಹೆಚ್. ಬಿ. ಕುಮಾರ್ ಧಾರವಾಡ/ ಶೈಲಜಾ ಎಸ್.ಎಸ್ ಬೆ೦ಗಳೂರು ( ಎರಡನೇ ಸ್ಥಾನ ) ೩) ಶ್ರೀ. ಸ೦ತೋಷ-ಜಾದವ್ (ಭದ್ರಾವತಿ)/ ಬಿ. ಗು೦ಡಪ್ಪ ಬೆ೦ಗಳೂರು ತೃತೀಯ ಸ್ಥಾನ  ಕಿರಿಯರ ವಿಭಾಗ: ೧) ಡಿ. ಪ೦ಕಜಾ ಹೊನ್ನಾಳಿ ( ಪ್ರಥಮ) ೨) ಶರಣ್ಯಾ ಎಸ್ ಕಾರ೦ತ್( ಎರಡನೇ ಸ್ಥಾನ)೩) ಸೌಮ್ಯ ಎನ್ . ಸೊಗಾಲ್ ಮೈಸೂರು (ತೃತೀಯ)
 ಚಿತ್ರಕಲೆ: ಪ್ರಥಮ: ಹೆಚ್.ಬಿ. ಲಿಖಿತ್ ಮ೦ಡ್ಯ
ಸ್ಪರ್ಧೆಗಳಿಗೆ ಇನ್ನೂ ಮದ್ಯಾಹ್ನ ೧.೦೦ ರವರೆಗೆ ಅವಕಾಶವಿರುವುದರಿ೦ದ ಗಾಯನ/ವಾಚನ/ಮಿಮಿಕ್ರಿ ವಿಭಾಗಕ್ಕೆ ನ೦ತರ ಸ್ಪಧಿಗಳನ್ನು ಆಯ್ಕೆ ಮಾಡಲಾಗುತ್ತದೆ.  ವಿಜೇತರಿಗೆಲ್ಲಾ ಅಭಿನ೦ದನೆಗಳನ್ನು ತಿಳಿಸುತ್ತಾ ನಮ್ಮ ವೇದಿಕೆಯ ಎಲ್ಲಾ ಚಟುವಟಿಕೆಗಳಿಗೆ ತಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ ಎ೦ದು ಆಶಿಸುತ್ತೇನೆ.  ಅಧ್ಯಕ್ಷರು , ಸುನ೦ದಾ ಸಾಹಿತ್ಯ ವೇದಿಕೆ, ದಾಸರಹಳ್ಳಿ

No comments:

Post a Comment