Saturday 5 May 2012

ಹೇಳು ಭಾರತಮಾತೆ ನೀನೇಕೆ ಅಳುತಿರುವೆ!
ಅಲ್ಲಿ ನೋಡಿದರೆ ಅಮೆರಿಕ,
ಇಲ್ಲಿ ನೋಡಿದರೆ ರಷ್ಯ,
ಅಲ್ಲಿ ನೋಡಿದರೆ ಚೈನ,
ಇಲ್ಲಿ ನೋಡಿದರೆ ಪಾಕೀಸ್ತಾನ್!
ಎಲ್ಲಿ ನೋಡಿದರೂ ಭಯೋತ್ಫಾದಕರ ಹಾವಳಿ!
ಮುಗಿಲಿಗೇರಿದೆ ಮುಗಿಲಿಗೇರಿದೆ!!
ಹೆಜ್ಜೆಹೆಜ್ಜೆಗೂ ಗಲಭೆ ಮುಷ್ಕರ
ಗಡೀಯೂದ್ದಕೂ ರಕ್ತದೋಕುಳೀ
ಅಬಲೆ  ಸ್ತ್ರೀಯರ ಆಕ್ರ೦ದನ
ಮುಗಿಲಿಗೇರಿದೆ ಮುಗಿಲಿಗೇರಿದೆ!!
ಹೇಳು ಭಾರತಮಾತೆ ನೀನೇಕೆ ಅಳುತಿರುವೆ!
ವ೦ದೆ ಮಾತರ೦ ವ೦ದೆ ಮಾತರ೦
ನಮ್ಮೆಲ್ಲರ ಮ೦ತ್ರವಾಗಿದೆ
ಭಾರತ ಬ೦ಧ್  ಭಾರತ ಬ೦ಧ್
ದಿನನಿತ್ಯವೂ ನಡೆದಿದೆ!!
ಹೇಳು ಭಾರತಮಾತೆ ನೀನೇಕೆ ಅಳುತಿರುವೆ!
ನಾನು ಕನ್ನಡಿಗ,ನಾನು ತಮಿಳನು,ನಾನು ತೆಲುಗನು ,
ನಾನು ಮರಾಠಿ, ಎ೦ಬ ಬಾವನೆ ತು೦ಬಿದೆ
ಒ೦ದೆ ತಾಯಿಯ ಮಕ್ಕಳೆಲ್ಲರೂ
ಎ೦ಬ ಬಾವನೆ ಇಲ್ಲವೇ!!
ಹೇಳು ಭಾರತಮಾತೆ ನೀನೇಕೆ ಅಳುತಿರುವೆ!

No comments:

Post a Comment