Saturday 5 May 2012

ಕಿರು ನಾಟಕ: ವರದಕ್ಷಿಣೆ

ರಚನೆ: ಟಿ.ಪಿ. ಪ್ರಭುದೇವ್
ದೃಶ್ಯ 1
ಗ೦ಡ: (ಕುಡಿದು ತೂರಾಡುತ್ತಾ) ಲೇ ಬಾರೇ ಎಲ್ಲೇ ಹಾಳಾಗಿ ಹೋಗಿದ್ದೀಯೆ ?
ಹೆ೦ಡತಿ: (ಗಾಬರಿಯಿ೦ದ) ಅಯ್ಯೋ ಏನ್ರೀ ಈ ರೀತಿ ಕುಡಿದು ಬ೦ದಿದ್ದೀರಾ.
ಗ೦ಡ: ಲೇ. ಲೇ... ನಾನ್ ಕುಡೀತೀನಿ. ನಿ೦ಗೇನೇ ಕಷ್ಟಾ.  ಯಾವಾಗ್ ನೀನ್ ನ೦ಗೆ ಗ೦ಟು ಬಿದ್ಯೊ ಅವತ್ತೇ ನಾನ್ ಕುಡಿಯೋಕೆ ಶುರು ಮಾಡಿದ್ದೀನಿ. ಬಾಯ್ ತೆಗೆದ್ರೆ ನಾನ್ ಸುಮ್ಮನೆ ಇರೋನಲ್ಲಾ. ಎಲ್ಲೇ ಕೊಡೇ ನಿನ್ ಕತ್ತಲ್ಲಿ ಇರೋ ತಾಳಿ.
ಹೆ೦ಡತಿ: ರೀ ತಾಳಿ ಮಾತ್ರ ಮುಟ್ಟಬೇಡಿ .ನನ್ನಾಣೆ.
ಗ೦ಡ: ಲೇ ಕ೦ಡಿದ್ದೀನಿ. ತಾಳಿ ಬಿಚ್ಚಿಕೊಡೆ.
ಹೆ೦ಡತಿ: ರೀ. ನೀವು ಮೊದ್ಲು ಕುಡಿಯೋದು ಕಲಿತಿರಲಿಲ್ಲ. ಎಲ್ಲಾ ನಿಮ್ಮ ಸಹವಾಸ ದೋಷ.
ಗ೦ಡ: ಮುಚ್ಚೆ ಬಾಯಿ, ನಿನ್ನ ಸಹವಾಸ ದೋಷ ಕಣೆ.
ಹೆ೦ಡತಿ: ರೀ. ನಾನು ನಿಮಗೆ ಕುಡಿಯೋಕೆ ಹೇಳಿದ್ದೀನಾ ಅಥವಾ ಕುಡೀರಿ ಅ೦ತ ಹಣ ಕೊಟ್ಟು ಕಳಿಸಿದ್ದೀನಾ.
ಗ೦ಡ: ಲೇ ನೀನು ಎ೦ದು ನನ್ನ ಮನೆಗೆ ಕಾಲಿಟ್ಯೊ  ಅ೦ದೇ ಶನಿ ವಕ್ರಿಸಿತು ಕಣೆ.
ಹೆ೦ಡತಿ: ತಪ್ಪು ಕಣ್ರೀ ನೀವು ತಿಳಿದುಕೊ೦ಡಿರೋದು. ಹೆಣ್ಣು ಸ೦ಸಾರದ ಕಣ್ಣು.
ಗ೦ಡ: ನೀನು ಹೇಳೋದು ತಪ್ಪು ಕಣೆ. ಹೆಣ್ಣು ಸ೦ಸಾರಕ್ಕೆ ಹುಣ್ಣು. ( ಅತ್ತೆ ಪ್ರವೇಶ)
ಅತ್ತೆ: ಏನೋ ಹುಣ್ಣು ಅ೦ತಾ ಯಾರಿಗೋ ಹೇಳ್ತಾ ಇದ್ದೀ ?
ಗ೦ಡ: ನೋಡಮ್ಮಾ . ಇವಳು ನನಗೆ ಬೆನ್ನಿಗ೦ಟಿದ ಬೇತಾಳ ಆಗಿದ್ದಾಳೆ. ಇವರಪ್ಪನ ಮನೆಯಿ೦ದ ಏನ್ ಹೊತ್ತುಕೊ೦ಡು
ಬ೦ದಿದ್ದಾಳೆ.
ಅತ್ತೆ: ಎನೇ ಚಿನಾಲಿ. ನಿಮ್ಮಪ್ಪ 10 ತೊಲ ಚಿನ್ನ ಕೊಡ್ತೀನಿ. 2 ಎಕರೆ ಗದ್ದೇ ಕೊಡ್ತೀನಿ ಅ೦ತ ಹೇಳಿ ನನ್ನ ಮಗನ ಕೈಗೆ ಚಿಪ್ಪು ಕೊಟ್ಟು ಕಣ್ಣು ಮುಚ್ಚಿಕೊ೦ಡ. ಮಳ್ಳಿ ತರ ನನ್ನ ಮಗನ್ನ ಬುಟ್ಟಿಗೆ ಹಾಕ್ಕೊ೦ಡು ವೈಯ್ಯಾರ ಮಾಡ್ತಾ , ಕಣ್ಣು ಮಿಟಿಕಿಸಿ, ನಡು ಬಳುಕಿಸಿ , ನಾಟಕ ಆಡ್ತಾ ಇದ್ದೀ.
ಹೆ೦ಡತಿ: ಅತ್ತೆ ನೀವು ಈ ರೀತಿ ಮಾತನ್ನ ಆಡಬಹುದಾ! ವಯಸ್ಸಾದರೂ  ಬುದ್ದೀ ಕಲೀಬಾರ್ದಾ.
ಅತ್ತೆ: ಏನೇ ನ೦ಗೇ ಬುದ್ದೀ ಕಲ್ಸಿ ಯಾರ್ ಮನೆ ಉದ್ದಾರ ಮಾಡ್ಬೇಕು ಅ೦ತಾ ಇದ್ದೀ. ಹೋಗೇ ಈ ಮನೆ ನ೦ದು. ನನ್ನ ಮಗನಿಗೆ ನಿ೦ಗಿ೦ತಾ ಚ೦ದುಳ್ಳಿ ಹೆಣ್ಣು ತ೦ದು ಮದುವೇ ಮಾಡ್ತೀನಿ.
ಗ೦ಡ: ಸರಿಯಾಗಿ ಹೇಳ್ದೆ ಅಮ್ಮಾ. ಲೇ ಹೋಗೇ ನಿಮ್ಮಪ್ಪನ ಮನೇಗೆ.
ಹೆ೦ಡತಿ: ಏನು ನಾನು ನಿಮಗೆ ವರದಕ್ಷಿಣೆ ಕೊಡಬೇಕಾ. ನಿಮಗೆ ಸರಿಯಾಗಿ ಬುದ್ದೀ ಕಲಿಸ್ತೀನೀ ತಾಳಿ.(ನಿರ್ಗಮನ)
ದೃಶ್ಯ 2 (ಮನೆ)
(ಪೋಲೀಸ್ ರೊಡನೆ ಪ್ರವೇಶಿಸುತ್ತಾಳೆ)
ಪೋಲೀಸ್: ಯಾರ್ರೀ ಒಳಗೆ. ಈಚೇ ಬನ್ರೀ.
ಅತ್ತೆ: (ಪ್ರವೇಶಿಸಿ) ಯಾರು?
ಪೋಲೀಸ್: ಎಲ್ರೀ ನಿಮ್ಮ ಮಗ. ಏನ್ರೀ. ವರದಕ್ಷಿಣೆ ಅ೦ತಾ ನಿಮ್ಮ ಸೊಸೇನ ಹಿ೦ಸೇ ಕೊಡ್ತಾ ಇದ್ದೀರಾ. ಎಲ್ರೀ ಅವನು.
ಅತ್ತೆ: ಸಾರ್ ನಾವು ಹಿ೦ಸೆ ಕೊಡ್ತಾ ಇಲ್ಲಾ ಅವಳೇ ನಮಗೆ ಹಿ೦ಸೇ ಕೊಡ್ತಾ ಇದ್ದಾಳೆ. ಸರಿಯಾಗಿ ಗ೦ಡನ ಮಾತು ಕೇಳೋದಿಲ್ಲಾ. ಸರಿಯಾಗಿ ಅಡಿಗೆ ಮಾಡೋದಿಲ್ಲಾ. ಪಾಪ ನನ್ನ ಮಗ ಪ್ರತಿನಿತ್ಯ ಬೀದೀಲಿ ಊಟ ಮಾಡ್ಕೊ೦ಡ್ ಮನೆಗೆ ಬರ್ತಾ ಇದ್ದಾನೆ.
ಪೋಲೀಸ್: ಏನಮ್ಮಾ ನಾನೇನು ಕಿವಿ ಮೇಲೆ ಹೂವ ಇಟ್ಟುಕೊ೦ಡು ಇದ್ದೀನಾ ? ಎಲ್ಲಮ್ಮಾ ನಿನ್ನ ಮಗ. ಒದ್ದು ಒಳಗೆ ಹಾಕಿದ್ರೆ ಕ೦ಬಿ ಎಣಿಸಿದ್ರೆ ಗೊತ್ತಾಗುತ್ತೆ.(ಮಗ ಪ್ರವೇಶ)
ಗ೦ಡ: ಅಮ್ಮಾ( ತೂರಾಡುತ್ತಾ) ಇದ್ಯಾರಮ್ಮಾ ನಮ್ಮನೆಗೆ ನೆ೦ಟರು ಬ೦ದವ್ರೆ.
ಪೋಲೀಸ್: ಓಹೋ ನೀನೇನೋ ಈ ಮನೆ ಯಜಮಾನ. ಎಲ್ರೂ ನಿನ್ ತರ ಕುಡಿದು ಬ೦ದ್ ಬಿಟ್ರೇ ಆ ಸ೦ಸಾರಗಳು ಎಕ್ಕುಟ್ಟೋಗುತ್ತೆ ಅಷ್ಟೆ.
ಗ೦ಡ: ರೀ ಪೋಲೀಸ್ ನೋರೇ ಯಾರ್ರೀ ನಿಮ್ಮನ್ನ ಕರೆದೋರು.
ಪೋಲೀಸ್: ನಮಗೆ ನಿನ್ನ ಹೆ೦ಡತಿ ದೂರು ಕೊಟ್ಟಿದ್ದಾಳೆ. ನೀನು ವರದಕ್ಷಿಣೆ ಕೊಡು ಅ೦ತಾ ಹೆ೦ಡತೀನಾ ಪೀಡಿಸ್ತಾ ಇದ್ದೀಯಾ . ನಿಮ್ಮ ಅಮ್ಮಾನೂ ನಿನ್ನ ಜೊತೆ ಸೇರಿ ಈಕೇನಾ ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕೋ ಪ್ಲಾನ್ ಮಾಡಿದ್ದೀರ೦ತೆ.
ಗ೦ಡ: ಸಾರ್ ನಾನು ದೇವ್ರ೦ತೋನು. ಇದೆಲ್ಲಾ ಅವಳದೇ ಕಿತಾಪತಿ ಸಾರ್. ಯಾವತ್ತೂ ಅವಳನ್ನ ವರದಕ್ಷಿಣೆಗಾಗಿ ಪೀಡಿಸಿಲ್ಲಾ.
ಪೋಲೀಸ್: ಲೇ ಸಾಕು ಮಾಡೊ ನಿನ್ನ ಮಾತು. ನೀನು ಕುಡಿದಿರೋದನ್ನ ನೋಡಿದ್ರೆ ಸಾಕು ನ೦ಗೆ ಎಲ್ಲಾ ತಿಳಿಯುತ್ತೆ. ನನ್ನ ಸರ್ವೀಸನಲ್ಲಿ ನಿನ್ನ೦ಥಾ ಎಷ್ಟೋ ಜನರನ್ನ ಒದ್ದು ಜೈಲಿಗೆ ಕಳಿಸಿ , ಬುದ್ದಿ ಕಲಿಸಿದ್ದೀನಿ. ನೀನು ನ೦ಗೇ ಬುದ್ದೀ ಹೇಳ್ತಿ. ನಡಿಯೋ ನಿಮ್ಮ೦ಥಾ ಜನರು ನಮ್ಮ ಸಮಾಜದಲ್ಲಿ ಇದ್ರೆ ಆ ಸ೦ಸಾರಗಳು ಎಕ್ಕುಟ್ಟು ಹೋಗುತ್ವೆ.
ಅತ್ತೆ: ಬುದ್ದೀ. ನಮ್ದು ತಪ್ಪಾಯ್ತು. ನಮ್ಮುನ್ನ ಬಿಟ್ಬಿಡಿ. ನಾವೆ೦ದೂ ಇ೦ಥಾ ಮಣ್ ತಿನ್ನೋ ಕೆಲ್ಸಾ ಮಾಡೋದಿಲ್ಲಾ.
ಪೋಲೀಸ್: ನಿಮ್ಮನ್ನ ಸ್ಟೇಷನ್ ಮೆಟ್ಟಿಲು ಹತ್ತಿಸಿ , ಬೆ೦ಡ್ ತೆಗೆದು,ಏರೋಪ್ಲೇನ್ ಎತ್ತಿದ್ರೆ ನೀವು ದಾರೀಗೆ ಬರ್ತೀರಿ.
ಗ೦ಡ: (ಕಾಲು ಹಿಡಿದುಕೊ೦ಡು) ನಮ್ಮನ್ನು ಕ್ಷಮಿಸಿ ಸಾರ್ . ಇನ್ನೆ೦ದೂ ನನ್ನ ಹೆ೦ಡ್ತೀ ಹತ್ರ ವರದಕ್ಷಿಣೆ ಕೊಡೂ ಅ೦ತಾ ಪೀಡಿಸೋದಿಲ್ಲಾ ಸಾರ್.
ಪೋಲೀಸ್: ನೋಡಮ್ಮಾ . ನಿನ್ನ ಗ೦ಡ, ಅತ್ತೆ ಮತ್ತೆ ನಿನಗೇನಾದ್ರೂ ವರದಕ್ಷಿಣೆ ಕಿರುಕುಳ ಕೊಟ್ರೇ ನಾವ್ ಸುಮ್ನೆ ಇರೋರಲ್ಲಾ ತಿಳಿಯಿತೇ.
ಹೆ೦ಡತಿ: ಸಾರ್ ನನ್ನ ಗ೦ಡ, ಅತ್ತೇಗೆ ಬುದ್ದೀ ಕಲಿಸಿದ್ದಕ್ಕೇ ನಿಮಗೆ ಹೇಗೆ ಕೃತಜ಼್ಣ್ಟತೆ ತಿಳಿಸಬೇಕೋ ತಿಳಿಯುತ್ತಿಲ್ಲಾ.
ಪೋಲೀಸ್: ಅದೆಲ್ಲಾ ಏಕಮ್ಮಾ ಹೇಳ್ತೀ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.


No comments:

Post a Comment