Wednesday 30 May 2012


ಕನ್ನಡ ನಾಡಿನ ಚ೦ದದ ರೇಷ್ಮೆ

ಕನ್ನಡ ನಾಡಿನ ಚ೦ದದ ರೇಷ್ಮೆಯ ನೂಲನು ನೀಡಿದ ರೇಷ್ಮೆ ಹುಳುವಿನಾ
ಚರಿತೆಯ ನಾನು ಹಾಡುವೇ !!
ಕನ್ನಡ ನಾಡಿನ ಹೆಮ್ಮೆಯ ರೇಷ್ಮೆ ವಿಶ್ವಧರ್ಜೆಯ ಗುಣಮಟ್ಟದ ರೇಷ್ಮೆ!
ಆರ್ಥಿಕ ಸ೦ಕಟ ಬದಿಗೆ ಸರಿಸಿದ! ರೈತ ಸ೦ಕುಲ ಪಾರು ಮಾಡಿದಾ
ಕಾರುಣ್ಯ ತೋರಿದ ಈ ರೇಷ್ಮೆ ! ರೈತರ ಬ೦ಧು ಸಿರಿ ರೇಷ್ಮೆ!!
ಚಾಕಿ ಹ೦ತದಿ ಸೂಕ್ಷ್ಮದಿ ಬೆಳೆದು! ಜ್ವರಗಳ ದಾಟಿ ಬೆಳವಣಿಗೆ ಹೊ೦ದಲು!
ರೈತರೆಲ್ಲರು ಸತತ ದುಡಿಯಲು ಹುಳುಗಳು ನೂಲನು ಸೂಸಿದವು!
ಬಡರೈತನ ಚಿ೦ತೆ ದೂಡಿದವು::ಕನ್ನಡನಾಡಿನ::
ಮಾರುಕಟ್ಟೆಗೆ ಗೂಡು ತ೦ದರು!ರೇಷ್ಮೆ ಗೂಡನು ಹರಾಜಿಗಿಟ್ಟರು!
ಬಿಡ್ಡುದಾರರು ಪೈಪೋಟಿಗಿಳಿದರು! ಹೆಚ್ಚಿನ ಬೆಲೆಗೆ ಕೂಗಿದರು!
ಸಾಕಿ ಸಲಹಿದ ರೈತನು ಕೂಡಲೆ ಗೂಡನು ಅವರಿಗೆ ಮಾರಿದೆನು!
ಹಣದೊಡನೆ ತೄಪ್ತಿಯಲಿ ಹಿ೦ತಿರುಗಿದನು!!
ಕೂಡಲೆ ಗೂಡನು ಕೊ೦ಡವನವನೂ! 
ಆ ಚ೦ದದ ಗೂಡುಗಳನ್ನು ಹಬೆಗೆ ಹಾಕಿದ!
ಮತ್ತೆ ಚರಕಕೆ ಹಾಕಿ ನೂಲನೂ ಹೊರಗೆ ತೆಗೆದ!
ಗೂಡನು ಕೊಟ್ಟ ಪ್ಯೂಪಾವನ್ನು ಯಮಪುರಿಗೆ ಅಟ್ಟಿದ!
ಯಾರವನು ? ಯಾರವನು ?
ಸ್ವಾರ್ಥ ಸಾಧಕ ಈ ಮನುಜಾ:: ಕನ್ನಡ ನಾಡಿನ::
ಮಾನವತೆಯ ಬಲಿಗೈದ ಈತನು
ತ್ಯಾಗ ಮಾಡಿದ ರೇಷ್ಮೆ ಹುಳುವನೂ
ಬದುಕಿಡೀ ಸತತ ದುಡಿಯುತಾ
ವಸ್ತ್ರ ನೀಡಿದ ಕೀಟಜನ್ಯವ
ಸ್ಮರಿಸಿ ಎಲ್ಲರೂ ಅನವರತ!! ಕನ್ನಡ ನಾಡಿನ!!

No comments:

Post a Comment