Tuesday 1 May 2012


ಮೌನವೇ ಆಭರಣ ಮುಗುಳ್ನಗೆ ಶಶಿಕಿರಣ(ಧಾಟಿಯಲ್ಲಿ)

ರೇಷ್ಮೆಯೇ ಉಸಿರಾಗಿ ಬಡತನ ಬದುಕಾಗಿ!
ಶ್ರಮವೇ ದಿನವೆಲ್ಲಾ ಕನಸೇ ನನಗೆ೦ದೂ!
ಬೆವರನು ಹರಿಸಿ ಸೊಪ್ಪನು ಬೆಳೆಸಿದೆ!
ತೆವರನು ಕಟ್ಟಿ ನೀರನು ಹಾಯ್ಸಿದೆ!
ಹೆಚ್ಚಿಗೆ ದುಡಿದರೆ ನೀ ನೀಡುವುದೇನು ?
ಬೆಚ್ಚನೆ ಹೊದಿಕೆ,ತ೦ಗಲು ತಡಿಕೆ,ತಿನ್ನಲು ಖಾಲಿ ಮಡಿಕೆ!
ಏತಕೋ ರೈತಗೆ ಸ೦ಕಷ್ಟವು ಆ ಶಿವನೇ ಬಲ್ಲ!

No comments:

Post a Comment