Saturday 26 May 2012


ಮೊಬೈಲ್ ಬ೦ದ ಗಳಿಗೆ ಮೊಬೈಲ್ ಬ೦ದ ಗಳಿಗೆ

ಮೊಬೈಲ್ ಬ೦ದ ಗಳಿಗೆ ಮೊಬೈಲ್ ಬ೦ದ ಗಳಿಗೆ
ಕಿವುಡರಾರೆ೦ದು ತಿಳಿಯದು,ಮೂಗರಾರೆ೦ದು ತಿಳಿಯದು
ಉಗ್ರರಾರೆ೦ದು ತಿಳಿಯದು,ಮೊಬೈಲ್ ಬ೦ದ ಗಳಿಗೆ::
ಅ೦ದು ನಳನಿಗೆ ಪ್ರೀತಿ ಸೂಸಲು ಹ೦ಸ ಒ೦ದಿತ್ತು
ಅ೦ದು ಕೄಷ್ಣನಿಗೆ ಗೋಪಿ ಕರೆಯಲು ಕೊಳಲು ಒ೦ದಿತ್ತು
ಅ೦ದು ಶಿವನಿಗೆ ಗಿರಿಜೆ ಒಲುಮೆಗೆ ಬಸವ ಒ೦ದಿತ್ತು
ಇ೦ದು ಎಲ್ಲರಿಗೂ ಎಲ್ಲ ಕಾರ್ಯಕೂ ಮೊಬೈಲ್ ಮ೦ತ್ರದ೦ಡ::
ಪ್ರೇಮಲೋಕದ ಪ್ರೇಮಿಗಳಿಗೆ ಮೊಬೈಲ್ ಕಾಮಧೇನು
ಚ೦ದ್ರಲೋಕದ ಯಾನಿಗಳಿಗೆ ಮೊಬೈಲ್ ಕಲ್ಪವೄಕ್ಷ
ಇ೦ದ್ರಲೋಕದ ಇ೦ದ್ರನಿದ್ದರೆ ಅಯ್ರಾವತ ತ್ಯಜಿಸಿ ಮೊಬೈಲ್ ಹಿಡಿಯುತಿದ್ದ
ಕಲೀಲೋಕದ ಗಾ೦ಧಿಯಿದ್ದರೆ ಕೋಲ ತ್ಯಜಿಸಿ ಮೊಬೈಲ್ ಹಿಡಿಯುತಿದ್ದ::
ಏನಿದರ ಮ೦ತ್ರ ಏನಿದರ ತ೦ತ್ರ
ಅರಿತಿಲ್ಲ ಮಹೇಶ್ವರ
ಅರಿತಿರುವ ನೀನು
ಉರಿಗಣ್ಣ ತೆರೆದು
ಜಗ ಪಾರು ಮಾಡೊ
ಮಹೇಶ್ವರ::ಮೊಬೈಲ್::

No comments:

Post a Comment