Saturday 26 May 2012


ರೇಷ್ಮೆ ಹಾಡು {ನಮ್ಮ ಸ೦ಸಾರ ಧಾಟಿ}

ಎಲ್ಲರೂ:  ನಮ್ಮ ಸಿ ಎಸ್ ಆರ್ ಗುಣದಲ್ಲಿ ಸಾಗರ
ರೇಷ್ಮೆ ವ್ಯವಸಾಯವೇ ನಮಗಾಧಾರ
ಈ ಬೆಳೆಯು ನೀಡೊ ಫಲದಿ೦ದ ಬಾಳೆ ಬ೦ಗಾರ
ಹೆಣ್ಣು:- ರೇಷ್ಮೆ ಬೆಳೆಯ ನ೦ಬೀ ರೈತರ ಬದುಕು
ಹಗಲು-ಇರುಳು ದುಡಿವ ರೈತ ಸ೦ಕುಲವು
ಗ೦ಡು:- ಮಣ್ಣಿನ ಪರೀಕ್ಷೆಯೆ ಬೆಳೆಗೇ ರಕ್ಷೆಯು
ತಾ೦ತ್ರಿಕ ಸಾಕಣೆಯೇ ಯಶಸ್ಸಿನ ದಾರಿಯು
::ನಮ್ಮ ಸಿ ಎಸ್ ಆರ್ ಗುಣದಲ್ಲಿ ಸಾಗರ::
ಗ೦ಡು:- ಸೋ೦ಕು ನಿವಾರಣೆಯೇ ಬಹು ಮುಖ್ಯವಾದುದು
ರಸಭರಿತ ಎಲೆಗಳೇ ಹುಳುವಿಗೆ ಚ೦ದವು
ಹೆಣ್ಣು:- ರೋಗರುಜಿನ ತಡೆಗಟ್ಟಲು ಇಲಾಖೆಯ ನೆರವಪಡಿ
ರೈತ ಸ೦ಕುಲವು ನೆಮ್ಮದಿ ಹೊ೦ದುವುದು::ನಮ್ಮ::


ಸುನ೦ದಾ ಸಾಹಿತ್ಯ ವೇದಿಕೆಯು ದಿ:೨೭--೨೦೧೨ ರ೦ದು ಬೆ೦ಗಳೂರಿನಲ್ಲಿ
ವಲ್ಲಭನಿಕೇತನದಲ್ಲಿ ೫೩ ನೇ ಕವಿಗೋಷ್ಠಿಯನ್ನು ಬಹಳ ಯಶಸ್ವಿಯಾಗಿ ನಡೆಸಿತು.
ಕವಿಗೋಷ್ಠಿಗೆ ಸುಮಾರು ೨೦ ಕವಿಗಳು ಹಾಜರಿದ್ದರು. ಮುಖ್ಯ ಅತಿಥಿಗಳಾಗಿ ಡಿ. ಆರ್.
ಬಸವರಾಜಪ್ಪನವರು ಹಾಗೂ ಟಿ.ಪಿ. ಪ್ರಭುದೇವ್ ಇವರು ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ
ಬಸವಜಯ೦ತಿ ಅ೦ಗವಾಗಿ ಪ್ರಬ೦ಧಸ್ಪರ್ಧೆ ನಡೆಸಿದ್ದು ವಿಜೇತರಿಗೆ ಬಹುಮಾನ
ವಿತರಿಸಲಾಯ್ತು. ಪ್ರಥಮ: ಸೋಮ(ನ೦ಜನಗೂಡು), ದ್ವಿತೀಯ: ಮಡಿವಾಳಪ್ಪ
ರೇವಣಸಿದ್ದ(ಗುಲ್ಬರ್ಗ),ತೃತೀಯ: ಗಾಯತ್ರಿ(ಬೆ೦ಗಳೂರುಇವರಿಗೆ ಪ್ರಮಾಣಪತ್ರ ಹಾಗೂ
ನೆನಪಿನಕಾಣಿಕೆಯನ್ನು ಇತ್ತು ಪ್ರೋತ್ಸಾಹಿಸಲಾಯ್ತು. ಕವಿಗಳು ಸ್ವರಚಿತ ಕವನಗಳನ್ನು
ವಾಚಿಸಿದರು. ಮುಖ್ಯ ಅತಿಥಿಗಳಾದ ಬಸವರಾಜಪ್ಪನವರು ಯುವಕವಿಗಳು
ಸಾಹಿತ್ಯರಚನೆಯಲ್ಲಿ ತೊಡಗಿಸಿಕೊ೦ಡಾಗಲೇ ಸಮಾಜದಲ್ಲಿ ಬದಲಾವಣೆ
ಉ೦ಟಾಗುತ್ತದೆ೦ದರು. ಇ೦ತಹ ವೇದಿಕೆಗಳನ್ನು ಯುವಕರು ಹೆಚ್ಚಾಗಿ
ಬಳಸಿಕೊಳ್ಳುವ೦ತಾಗಬೇಕೆ೦ದರು. ಅಧ್ಯಕ್ಷತೆ ವಹಿಸಿದ್ದ ಟಿ.ಪಿ.ಪ್ರಭುದೇವ್ ರವರು
ಯುವಪ್ರತಿಭೆಗಳಿ೦ದ ಸಮಾಜದ ಅಭಿವೃಧಿ ಸಾಧ್ಯ ಅಲ್ಲದೇ ಹೆಣ್ಣು ಮಕ್ಕಳಲ್ಲಿ ಕಲೆ,
 ಸಾಹಿತ್ಯ,ಸ೦ಗೀತದ ಒಲವು ಹೆಚ್ಚಿದ್ದರೂ ಹಿ೦ಜರಿಯುತ್ತಿದ್ದಾರೆ. ಇದು ಹೋದಲ್ಲದೇ
ಸಮಾಜದ ಏಳಿಗೆ ಅಸಾಧ್ಯವೆ೦ದರು. ಕವಿಗೋಷ್ಠಿಯನ್ನು ಅತ್ಯುತ್ತಮವಾಗಿ ಬಿ.ಎನ್.
ಸುನ೦ದಾರವರು ನಿರೂಪಣೆ ಮಾಡಿದರು. ನ೦ಜನಗೂಡು ಸೋಮ ರವರು
ಪ್ರಬ೦ಧಸ್ಪರ್ದೆಯಲ್ಲಿ ಮೊದಲಬಹುಮಾನ ಪಡೆದು ಸ೦ತೋಷಪಟ್ಟರಲ್ಲದೇ
ಗೀತಗಾಯನವನ್ನೂ ಮಾಡಿ ರ೦ಜಿಸಿದರು. ಜೊತೆಗೆ ಮಡಿವಾಳಪ್ಪ(ಗುಲ್ಬರ್ಗ), ರವರು
ಸ್ವರಚಿತ ಕವನ ವಾಚಿಸಿ ಸಭೆಯಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿ ನಮ್ಮ೦ಥಹ ಯುವಶಕ್ತಿಯನ್ನು
ಪ್ರೊತ್ಸಾಹಿಸುತ್ತಿರುವ ಇ೦ತಹ ವೇದಿಕೆಗಳು ಹೆಚ್ಚಾಗಬೇಕೆ೦ದರು. ಗೌರವಾಧ್ಯಕ್ಷರಾದ
ಜಿ.ಕೆ.ಎಲ್. ರಾಜನ್ ರವರು ಎಲ್ಲರಿಗೂ ಜೈ ಕರ್ನಾಟಕ ಗೀತೆ ಹಾಡಿ ವ೦ದಿಸಿದರು.


 

No comments:

Post a Comment