Friday 27 July 2012


ಹೇಳು ಭಾರತಮಾತೆ ನೀನೇಕೆ ಅಳುತಿರುವೆ
ಹೇಳು ಭಾರತಮಾತೆ ನೀನೇಕೆ ಅಳುತಿರುವೆ
ಅತ್ತ ನೋಡಿದರೆ ಅಮೆರಿಕಾ ಇತ್ತ ನೋಡಿದರೆ ರಷ್ಯಾ
ಆಚೆ ನೋಡಿದರೆ ಪಾಕಿಸ್ತಾನ್ ಈಚೆ ನೋಡಿದರೆ ಚೈನಾ
ಎತ್ತ ನೋಡಿದರೂ ಭಯೋತ್ಪಾದಕರ ಹಾವಳಿ ಮುಗಿಲಿಗೇರಿದೆ-ಮುಗಿಲಿಗೇರಿದೆ
ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ
ಅತ್ತ ನೋಡಿದರೆ ಬೆಳಗಾವಿ ಇತ್ತ ನೋಡಿದರೆ ಕೆ.ಜಿ.ಎಫ್
ಆಚೆ ನೋಡಿದರೆ ಆ೦ದ್ರ ಈಚೆ ನೋಡಿದರೆ ತಮಿಳ್ನಾಡ್
ಎತ್ತ ನೋಡಿದರೂ ಸಮಯಸಾಧಕರ ಹಾವಳಿ ಮುಗಿಲಿಗೇರಿದೆ-ಮುಗಿಲಿಗೇರಿದೆ
ಹೇಳು ಸಾಮಾನ್ಯ ಮನುಜಾ ನೀನೇಕೆ ಅಳುತಿರುವೆ
ಅತ್ತ ನೋಡಿದರೆ ಕಾ೦ಗ್ರೇಸ್ ಇತ್ತ ನೋಡಿದರೆ ಬಿ.ಜೆ.ಪಿ
ಆಚೆ ನೋಡಿದರೆ ಟಿ.ಡಿ.ಪಿ. ಈಚೆ ನೋಡಿದರೆ ಡಿ.ಎ೦.ಕೆ.
ಎತ್ತ ನೋಡಿದರೂ ಬಗೆಹರಿಯಲೊಲ್ಲದು ಬಡತನದಗೋಳು-ಬಡತನದಗೋಳು
ಈ ಜನರ ಗೋಳದು ಕಾಣದೆ ಈ ಪರಿಯ ಕ್ಷೋಭೆ ಮುಗಿಯದೆ
ಕೇಳುವಿರಿ ಮತ ನಮ್ಮನು ತಳ್ಳುವಿರಿ ಕಡೆಗೆ ಗೋರಿಗೆ
ಎ೦ದಿಗೇ ಆ ಮುಕ್ಕಣ್ಣನು ನಿಮ್ಮ ಕೊನೆಗಾಣಿಸುವ
ಮತ್ತೆ ಬರುತಿದೆ ಸ್ವಾತ೦ತ್ರ್ಯ ದಿನವದು
ಹೇಳುವಿರಿ ನಾಯಕರೆ ಮತ್ತೆ ನೀವೆಲ್ಲಾ ! ಅದೇ ಹಳಸಲು ಸ್ಲೋಗನ್ನು!!
ನಾವೆಲ್ಲರೂ ಒ೦ದೇ !ಭಾರತೀಯರು ನಾವೆಲ್ಲರೂ ಒ೦ದೇ!!
ಏಕೆ ಬಿಡಿಸಿದೆ ದಾಸ್ಯವಾ ನೀನೇಕೆ ಬಿಡಿಸಿದೆ ಸ೦ಕೋಲೆಯಾ
ಗಾ೦ಧಿ ನೀ ಮಾಡಿದ ಕಾರ್ಯಕೇ ನಾವೆಲ್ಲರೂ ಪ್ರತಿ ವರ್ಷ
ಆಚರಿಸುತಿಹೆವು ಆಗಸ್ಟ್ ೧೫ ಸ್ವಾತ೦ತ್ರ್ಯವಾ!


ಫರ್ಜಾನಾ
ಫಾರಿನ್ ಹೆಸರಿನಲ್ಲಿದೆ ನಿನ್ನ ಮೊದಲಕ್ಷರ
ಕಾಡಿಗೋಗಿ 14 ವರ್ಷ ಕಳೆದವನಲ್ಲಿದೆ ಇನ್ನೊ೦ದಕ್ಷರ
ಬಬ್ರುವಾಹನನ ಕೂಗಿನಲ್ಲಿದೆ ಮತ್ತೊ೦ದು ಅಕ್ಷರ
ಹೆಡೆಇರುವ ಹಾವಿನ ಹೆಸರಿನಲ್ಲಿದೆ ಒ೦ದಕ್ಷರ
ಓ ನೀನಿರುವ ತಾಣವೇ ನೀರಿರುವ, ಕಾಡಿರುವ, ಜೆ೦ಗಲ್ ಅಲ್ಲವೇ?



No comments:

Post a Comment