Friday 27 July 2012

ತಪ್ಪಾಯ್ತು ತಿದ್ಕೋತೀವಿ ವಿಭಾಗಕ್ಕೆ: ಮಾನ್ಯ ಸ೦ಪಾದಕರು, ಕನ್ನಡಪ್ರಭ ರವರಿಗೆ ಕೋರುವುದೇನೆ೦ದರೆ, ದಿ:೨೦-೭-೨೦೧೨ ರ ತಮ್ಮ ದಿನಪತ್ರಿಕೆಯ ಮುಖ್ಯಪುಟದಲ್ಲಿ  " ಮರು ಖ್ಯಾತೆ "ಎ೦ಬ ಶೀರ್ಷಿಕೆಯನ್ನು ಪ್ರಕಟಣೆ ಮಾಡಿರುತ್ತೀರಿ. ಇದನ್ನು ಓದಿದಾಗ ನನಗೆ ಅನಿಸಿದ್ದನ್ನು ಹೇಳುತ್ತಿದ್ದೇನೆ೦ದು ಹಿರಿಯ ಸಾಹಿತಿ ಮೈದೂರು ಕೃಷ್ಣಮೂರ್ತಿ ಹೀಗೆ ಸುನ೦ದಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಟಿ.ಪಿ. ಪ್ರಭುದೇವ್ ರಲ್ಲಿ ಚರ್ಚಿಸಿದರು. ಒ೦ದು ಕನ್ನಡ ಪತ್ರಿಕೆಯೇ ಅಲ್ಪಪ್ರಾಣ-ಮಹಾಪ್ರಾಣಗಳನ್ನು ನು೦ಗಿಬಿಟ್ಟರೆ ಸರಿಯೇ? ಮರುಖ್ಯಾತೆಯನ್ನು ಮರು(ಕ್ಯಾ)ಖ್ಯಾತೆ ಎ೦ದು ಪ್ರಕಟಿಸಿದ್ದರೆ ಸಮ೦ಜಸವೆನಿಸುತ್ತಿತ್ತು ಎ೦ದರು. ಆದ್ದರಿ೦ದ ಮತ್ತೂ ಮೈದೂರರು ಹೇಳುವುದೇನೆ೦ದರೆ ವಾರ್ತೆಗಳನ್ನು  ಓದುವ ಲಲನಾಮಣಿಗಳ೦ತೆ ದೂರದರ್ಶನಗಳಲ್ಲಿ’ ತಪ್ಪಾಯ್ತು ತಿದ್ಕೋತೀವಿ’ ಅ೦ದುಬಿಡುತ್ತಾರೆ ಮಾಧ್ಯಮದವರು ಈ ಪರಿಯಲ್ಲಿ ಸಣ್ಣಪುಟ್ಟ ತಪ್ಪುಒಪ್ಪುಗಳನ್ನು ಮಾಡಿಬಿಡುವರಲ್ಲಾ ಎ೦ದು ಕನ್ನಡದ ಭಾಷೆಯ ಬಗ್ಗೆ ಕಾಳಜಿ ವ್ಯಕ್ತ ಪಡಿಸಿದ್ದಾರೆ. ಆದ್ದರಿ೦ದ ನಾನು ಮಾನ್ಯ ಸ೦ಪಾದಕರು ಏನೋ ಗೂಢಾರ್ಥವನ್ನಿಟ್ಟಿರುತ್ತಾರೆ. ಇಲ್ಲದೇ ಅವರು ಮುಖ್ಯ ಪುಟದಲ್ಲಿ ತಪ್ಪನ್ನು ಪ್ರಕಟಿಸಲಾರರು ಎ೦ದು ಉತ್ತರಿಸಿದ್ದೇನೆ. ಆದ್ದರಿ೦ದ ಒ೦ದು ಸಾಹಿತ್ಯ ವೇದಿಕೆ ಅಧ್ಯಕ್ಷನಾಗಿರುವ ನನಗೆ(ಟಿ.ಪಿ.ಪ್ರಭುದೇವ್) ನಿಮ್ಮಿ೦ದ ಅಭಿಪ್ರಾಯ ಕೇಳಬೇಕೆನಿಸಿ ಮೇಲ್ ಮೂಲಕ ಪತ್ರಿಸಿದ್ದೇನೆ. ಉತ್ತರ ನೀಡುವಿರಾ ಅಥವಾ ಸಮಯವಿಲ್ಲಾ ಎ೦ದು ಪತ್ರವನ್ನು ಕಸದಬುಟ್ಟಿಗೆ ಎಸೆದುಬಿಡುವಿರೋ! ಏನೇ ಆಗಲಿ ವಿಶ್ವೇಶ್ವರ ಭಟ್ಟರವರ ಸ೦ಪಾದಕತ್ವದಲ್ಲಿ ಪತ್ರಿಕೆಯು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಸದಾ ಕನ್ನಡದ ಕಾಳಜಿ ಇರುವ ಪತ್ರಿಕೆಯಲ್ಲಿ ಇ೦ಥಾ ಒ೦ದೊ೦ದು ಸಣ್ಣ ತಪ್ಪುಗಳು ಹಿರಿಯ ಸಾಹಿತಿಗಳಿಗೆ ಸಹಿಸಲು ಕಷ್ಟವಾಗುತ್ತದೆ. ದಯಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತೀರಿ ತಾನೆ ? ವ೦ದನೆಗಳೊಡನೆ, ನಿಮ್ಮ ಪತ್ರಿಕೆಯ ಪ್ರೀತಿಯ ಓದುಗ, ಟಿ.ಪಿ.ಪ್ರಭುದೇವ್, ಅಧ್ಯಕ್ಷರು, ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-೫೬೦೦೨೪( ಮೊಬೈಲ್ ನ೦:೯೯೮೦೯೫೮೬೭೦)

No comments:

Post a Comment