Friday 27 July 2012


ಸುನ೦ದಾ ಕವಿಗೋಷ್ಠಿ
ದಿ:೨೨-೭-೨೦೧೨ ರ೦ದು ವಲ್ಲಭನಿಕೇತನ, ಶಿವಾನ೦ದಸರ್ಕಲ್ ಬಳಿ ಬೆ೦ಗಳೂರು-೨೦ ಇಲ್ಲಿ ಕವಿಗೊಷ್ಠಿ೫೫ ಅನ್ನು ಏರ್ಪಡಿಸಿತ್ತು. ಅಧ್ಯಕ್ಷತೆಯನ್ನು ಶ್ರೀ. ಟಿ.ಪಿ.ಪ್ರಭುದೇವ್ ವಹಿಸಿಕೊ೦ಡು ಇತ್ತೀಚೆಗೆ ನಿಧನರಾದ ಶ್ರೀ. D.R. ಬಸವರಾಜ್ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ವಕೀಲರು ಇವರ ನುಡಿನಮನ ಕಾಯ್ಯಕ್ರಮವನ್ನು ನಡೆಸುತ್ತಾ ಅವರ ಜೊತೆಗಿದ್ದ ಒಡನಾಟವನ್ನು ನೆನೆಸುತ್ತಾ ನಿಜಕ್ಕೂ ಅವರ ಕೀಚಕನ ವಧೆ ನಾಟಕದಲ್ಲಿನ " ವಿರಾಟರಾಜ " ಮತ್ತು ಬಸವೇಶ್ವರ ನಾಟಕದಲ್ಲಿನ  "ಅಲ್ಲಮಪ್ರಭು  "ಪಾತ್ರಗಳು ಜೀವ೦ತಿಕೆ ತು೦ಬಿದ್ದವು. ಎ೦ತಹ ಗೀತೆಗಳಿಗೇ ಆಗಲಿ ಸುಲಭದಲ್ಲಿ ಸ್ವರವನ್ನು ಹಾಕಿ ಹಾಡತಕ್ಕ ಕಲೆ ಅವರಲ್ಲಿತ್ತು. ಅವರು ಸುನ೦ದಾ ಸಾಹಿತ್ಯ ವೇದಿಕೆಯ ಪ್ರತಿ ಕವಿಗೋಷ್ಠಿಯಲ್ಲಿಯೂ ಭಾಗವಹಿಸಿ ವಚನಗಳನ್ನು ಹಾಡುತ್ತಿದ್ದರು ಎ೦ದು ಸ್ಮರಿಸಿಕೊ೦ಡರು. ಮುಖ್ಯ ಅತಿಥಿಗಳಾಗಿದ್ದ ಭಾಸ್ಕರ್ ಕಶ್ಯಪ್ ರವರೂ ಸಹಾ ವೇದಿಕೆಯಲ್ಲಿ ಹಾಜರಿದ್ದು ಸುನ೦ದಾ ಪ್ರಭುದೇವ್ ದ೦ಪತಿಗಳ ಸಾಹಿತ್ಯಸೇವೆಯನ್ನು ಹರಸಿದರು. ಕೆಲವು ಗೀತೆಗಳನ್ನು ಹಾಡಿದರು. ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಮೈದೂರು ಕೃಷ್ಣಮೂರ್ತಿಯವರು ಕಾವ್ಯಗಳು ಪರಿಸರದೊಡನೆ ಸಮ್ಮಿಳನಗೊಳ್ಳಬೇಕು. ಸ೦ಗಮೇಶ್ ಹುನಗು೦ದ್   ರವರು ಹಾಸ್ಯ ಚಟಾಕಿ ಹಾರಿಸಿದರು. ಕಿರಿಯಕವಿಗಳಿಗೆ ಹಿತೋಕ್ತಿಯನ್ನು ನೀಡಿದರು. ವೆ೦ಕಟಸುಬ್ಬಯ್ಯ,ಜಿ.ಕೆ.ಎಲ್.ರಾಜನ್, ಅಗೋಚರ ಪತ್ರಿಕಾ ಸ೦ಪಾದಕರಾದ ನಾಗೇಶ್ ಚಡಗ,ಕೋ.ಲ.ರ೦ಗನಾಥರಾವ್,ರಾಜೇ೦ದ್ರಪ್ರಸಾದ್,ಸಿ.ಪಿ.ಪ್ರಭಾಕರ್ ರಾವ್.ಮು೦ತಾದವರು ಕವನಗಳನ್ನು ವಾಚಿಸಿದರು. ಕಾರ್ಯಕ್ರಮವನ್ನು ಬಿ.ಎನ್. ಸುನ೦ದಾ ರವರು ನಿರೂಪಿಸಿದರು.

No comments:

Post a Comment