Friday 6 July 2012

ಇ೦ದಿನ ರಾಜಕೀಯ ರಾಮಾಯಣ

ಅದೇನ್ ಮುಮ೦ ಸೀಟು ಮಹಿಮೇನೋ!
ಕರ್ನಾಟಕದ ರಾಜಕಾರಣಕೆ
ವಕ್ಕರಿಸಿರುವ ಅಮಾವಾಸ್ಯೆಯ ಮಹಿಮೇನೋ!
ಅಥವಾ ವಿಧಾನಸೌಧದ ವಾಸ್ತುಶಾಸ್ತ್ರದ ಮಹಿಮೇನೋ!
ಯಡಿಯೂರಪ್ಪನ್ ಗ್ರಹಚಾರಾನೋ ಭೂ ದಾಹಕೆ
ನ್ಯಾಯಾಲಯಕೆ ಅಲೆದಾಟ!
ಈಶ್ವರಪ್ಪನ ಹಿಡಿತವಿಲ್ಲದ ಮಾತುಗಾರಿಕೇ ಫಲವೇನೋ!
ಒ೦ದೆಡೆ ಸದಾನ೦ದರ ಅಧಿಕಾರಕ್ಕೆ ಮ೦ಗಳಹಾಡಲು ಸನ್ನಾಹ!
ಮತ್ತೊ೦ದೆಡೆ ಷಟ್ಟರ್ಗಾಗಿ ಪಟ್ಟಕಟ್ಟಲು ಸಿದ್ದರಾದ
ನಾಯಕರೆನಿಸಿದ ಮಾರಕರೋ-ಪ್ರಜಾಮಾರಕರೋ!
ಇವರಲ್ಲಿಹುದು ಮುಮ೦ ಸೀಟಿನ ವ್ಯಾಮೋಹ!
ರಾಮಚ೦ದ್ರನಿಗೂ ಬೇಕ೦ತೆ,ಗ೦ಗೆ ಕುಡಿಸಿದ ಕೃಷ್ಣನಿಗೂ ಬೇಕ೦ತೆ,
ಅಷ್ಟೇಕೆ ವಿಷಕ೦ಠನೆನಿಸಿದ ಆ ಈಶ್ವರನಿಗೂ ಬೇಕ೦ತೆ!
ಏನಿದು ಮುಮ೦ ಸೀಟಿನ ಮಹಿಮೆ!
ಏನಿದು ಪ್ರಜಾಪ್ರತಿನಿಧಿಗಳ ಫಾರ೦!
ಕೋರ೦ ಇಲ್ಲದೆ ದೇಶವನಾಳಲು ಅರ್ಹತೆ ಕೇಳು ನೀನಣ್ಣ!
ಬಾಯಿಗೆ ಬ೦ದ೦ತೆ ಹರಟಣ್ಣ!
ಜನತೆಯ ದುಡ್ಡನು ದೋಚಣ್ಣ!
ಜೈಲಿಗೆ ಹೋಗಿ ಕೂರಣ್ಣ!
ಇಷ್ಟೇ ಮೆರಿಟ್ಟು ನಿನಗಿದ್ದರೆ ಸಾಕಣ್ಣ!
ದೇಶವನಾಳುವೆ ನೀನಣ್ಣ!
ಆ ಮೆರಿಟ್ಟಿರುವ ಈಶ್ವರನು ನಡುಗಣ್ಣನು ಬಿಡದೇ
ಇನ್ನೂ ಕುಳಿತಿಹ ಏಕಣ್ಣಾ!
ಈ ನಕಲಿ ಕೃಷ್ಣರ, ನಕಲಿ ರಾಮರ, ನಕಲಿ ಈಶ್ವರರ
ರು೦ಡವೆ೦ದಿಗೇ ಚೆ೦ಡಾಡುವೆಯೋ !
ನಿನ್ನ ತ್ರಿಶೂಲವ ಮತ್ತೆ ತೆರೆಯುವ ಕಾಲವಿ೦ದೂ ಬ೦ದಿಹುದೂ!
ಹೊನ್ನ-ಮಣ್ಣ-ಹೆಣ್ಣು ಬಾಕರ
ತರೆತರೆದು ಚ೦ಡಿಗೌತಣ ಮಾಡೊ ಕಾಲ ಬ೦ದಿಹುದೂ!!

 ಸಮಕಾಲೀನ ರಾಜಕಾರಣ ಮತ್ತು ಜಾತಿ ಸಮೀಕರಣ


ದಿ:3-7-2012 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಆರ್. ಇ೦ದಿರಾ ರವರು " ಸಮಕಾಲೀನ ರಾಜಕಾರಣ ಮತ್ತು ಜಾತಿ ಸಮೀಕರಣ " ಶೀರ್ಷಿಕೆಯಡಿ ನಮ್ಮ ಸಮಾಜದ ಜನನಾಯಕರು ಸಾರ್ವಜನಿಕ ಬದ್ಧತೆಯನ್ನು ಪೂರಾ ಮರೆತಿದ್ದಾರೆ. ಮಠಮಾನ್ಯಗಳು,ಜಾತಿಸ೦ಘಟನೆಗಳು ಜಾತಿಯ ಬೇರುಗಳನ್ನು ಮತ್ತಷ್ಟು ಹರಡುತ್ತಿವೆ.ಈ ರೀತಿ ಸಮಾಜದಲ್ಲಿ ಜಾತಿ ಮತ್ತು ರಾಜಕೀಯ ವ್ಯವಸ್ಥೆಗಳು ದೇಶದ ಆರೋಗ್ಯವನ್ನೇ ಹದಗೆಡಿಸಿಬಿಡುತ್ತಿವೆ ಎ೦ದು ಬಹಳ ಮಾರ್ಮಿಕವಾಗಿ ಲೇಖನದಲ್ಲಿ ವಿವರಿಸಿದ್ದಾರೆ. ನಿಜ ಅವರ ಸಾಮಾಜಿಕ ಕಳಕಳಿ,ಕಾಳಜಿ ನಿಜಕ್ಕೂ ಮೆಚ್ಚತಕ್ಕದ್ದು. ಆದರೆ ಇ೦ದು ಜಾತಿ ಮತ್ತು ರಾಜಕಾರಣ ಒ೦ದೇ ನಾಣ್ಯದ ಎರಡು ಮುಖವಾಗಿವೆ. ಯಾವ ಕ್ಷೇತ್ರದಲ್ಲಿ ಜಾತಿ ಇಲ್ಲ ಹೇಳಿ ? ರಾಜಕೀಯ,ಶೈಕ್ಷಣಿಕ,ಧಾರ್ಮಿಕ,ಔದ್ಯೋಗಿಕ,ಆರ್ಥಿಕ,ಇತ್ಯಾದಿ ಎಲ್ಲಾ ಕ್ಷೇತ್ರದಲ್ಲಿ ಜಾತಿಯೇ ಪ್ರಾಮುಖ್ಯ ಸ್ಥಾನ ಪಡೆದಿರುವುದರಿ೦ದ ಜಾತಿ ರಾಜಕಾರಣ ಪೆಡ೦ಭೂತವಾಗಿ ಮೆರೆಯುತ್ತಿದೆ. ನಮ್ಮ ದೇಶದ ಸ೦ವಿಧಾನದಲ್ಲಿ ಅಲ್ಪಸ೦ಖ್ಯಾತರನ್ನು ಓಲೈಸಲು, ಮತಬ್ಯಾ೦ಕಿಗಾಗಿ ಸಣ್ಣಪುಟ್ಟ ಸಮುದಾಯಗಳಿರುವ ಜನತೆಯಲ್ಲಿ ಬಹುಸ೦ಖ್ಯಾತ ಸಮುದಾಯದ ಜನರಿರುವ ಗು೦ಪುಗಳು ಜಾತಿ ರಾಜಕಾರಣವನ್ನು ಮಾಡುತ್ತಾ ನಮ್ಮ ದೇಶದ ರಾಜಕೀಯ ಸುವ್ಯವಸ್ಥೆಗೆ ಕೊಡಲಿ ಪೆಟ್ಟನ್ನು ನೀಡಲು ಹೊರಟಿವೆ. ಇ೦ದಿರಾರವರು ಹೇಳಿರುವ೦ತೆ ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯು ಬಹಳ ಗಟ್ಟಿಯಾಗಿರುವುದರಿ೦ದಲೇ ಇ೦ದಿಗೂ ಪ್ರಪ೦ಚದಲ್ಲಿಯೇ ನಮ್ಮ ದೇಶವು ಮಾದರೀ ಜಾತ್ಯಾತೀತ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹೊ೦ದಿದ ಅಗ್ರದೇಶವೆನಿಸಿರುವುದರಲ್ಲಿ ಎರಡುಮಾತಿಲ್ಲ. ಆದರೂ ನಾವು ಇ೦ದು ವಿಧ್ಯಾವ೦ತರಾಗಿದ್ದರೂ ಪ್ರಶ್ನೆಯನ್ನು ಹಾಕುವ ಪರಿಪಾಠ ಸಾಲದು. ಮಹಿಳೆಯರಲ್ಲಿ ಅನ್ಯಾಯವಾದರೂ ಇನ್ನೂ ಹಿ೦ಜರಿಕೆ ಸ್ವಭಾವವಿದೆ. ಮೌಢ್ಯತೆಯನ್ನೆ ಬ೦ಡವಾಳಮಾಡಿಕೊ೦ಡು ಸಮಾಜವನ್ನೇ ಹಾಳುಮಾಡತಕ್ಕ ಖದೀಮರು ಬೆಳೆಯಲು ನಮ್ಮ ದೇಶದ ಜನರಲ್ಲಿರುವ ದೈವೀಕತೆ,ಮಾನವೀಯತೆ,ಔದಾರ್ಯತೆ ಗುಣಗಳೇ ಕಾರಣವೆ೦ದರೆ ಅಡ್ಡಿಯಿಲ್ಲ. ಆದ್ದರಿ೦ದ ಇನ್ನಾದರೂ ನಮ್ಮ ಜನತೆಯಲ್ಲಿ ಶೌರ್ಯತೆ,ವೈಚಾರಿಕತೆ,ಬುದ್ಧಿವ೦ತಿಕೆಗಳು  ಹೆಚ್ಚಿದಾಗ ಸಮಾಜವು ಇನ್ನೂ ಒಗ್ಗಟ್ಟಾಗಿ ಪ್ರಜಾಪ್ರಭುತ್ವದ ಬೇರುಗಳು ಇನ್ನೂ ಆಳವಾಗಿ ಬೆಳೆದು ಜಗತ್ತಿಗೇ ಕಣ್ದೆರೆಸುವ ಭಾರತವಾದೀತು. ಇಲ್ಲದಿದ್ದಲ್ಲಿ ಭುವಿಗೆ ನಾವೆಲ್ಲಾ ಭಾರವಾದೇವು!

 ರೈಲ್ವೆ ಬೋಗಿಗಳಲ್ಲಿ ಭಿಕ್ಷೆ ಬೇಡುವ ಪರಿ


ಪ್ರತಿನಿತ್ಯ ರೈಲಿನಲ್ಲಿ ಹೋಗುವ ಪ್ರಯಾಣಿಕರು,ಸರ್ಕಾರಿ ನೌಕರರಿಗೆ,ಕೂಲಿಕಾರರಿಗೆ ಆಗುವ ತೊ೦ದರೆಗಳನ್ನು ರೈಲ್ವೆ ಇಲಾಖೆಯವರು ಗಮನಿಸುತ್ತಿಲ್ಲವೇ ಎ೦ಬ ಸ೦ಶಯ ನಮಗೆ ಉ೦ಟಾಗುತ್ತಿದೆ. ಕಾರಣವೇನೆ೦ದರೆ ಅಲ್ಪಸ೦ಖ್ಯಾತ ಲೈ೦ಗಿಕ ಕಾರ್ಯಕರ್ತರು ರೈಲ್ವೆ ಬೋಗಿಗಳಲ್ಲಿ ಭಿಕ್ಷೆ ಬೇಡುವ ಪರಿ ನೋಡಿದರೆ ಎ೦ತಹವರಿಗೂ ಕನಿಕರದ ಜೊತೆಗೆ ಕ್ರೂರತೆಯೂ ಕ೦ಡು ಬರುತ್ತದೆ. ಹಣ ಕೊಡದಿದ್ದವರನ್ನು ಅವರು ಹೀಯಾಳಿಸುವುದು ನೋಡಲು ಬಹು ಹಿ೦ಸೆಯಾಗುತ್ತದೆ.
ಅ೦ತೆಯೇ ಎಲ್ಲ ಅ೦ಗಾ೦ಗಗಳೂ ಸರಿಯಿದ್ದೂ ಕೆಲಮ೦ದಿ ಭಿಕ್ಷೆ ಬೇಡುವ ಸೋಗಿನಲ್ಲಿ ಭಿಕ್ಷೆ ಬೇಡಿ ಪ್ರಯಾಣಿಕರನ್ನು ಗೋಳುಹೊಯ್ಯುತ್ತಾರೆ. ಮತ್ತೆ ಕೆಲವರು ಹಾಡುಗಳನ್ನು ಹಾಡುತ್ತಾ ,ಪ್ರಯಾಣಿಕರಲ್ಲಿ ಕನಿಕರವಾಗುವ೦ತೆ ನಟಿಸಿ ಹಣವನ್ನು ಕೇಳುವ ಪರಿ ಏಕೆ ರೈಲಿನಲ್ಲಿ ಈ ರೀತಿಯ ಜನರು ತಮ್ಮ ದೈನ೦ದಿನ ಜೀವನ ನಡೆಸಲು ಪ್ರಯಾಣಿಕರನ್ನು ,ಮಹಿಳೆಯರನ್ನು,ಕೂಲಿಕಾರರನ್ನು ದೋಚುತ್ತಿದ್ದಾರಲ್ಲಾ. ಇದಕ್ಕೆ ರೈಲ್ವೆ ಇಲಾಖೆಯು ಇ೦ತಹವರನ್ನು ನೋಡಿಯೂ ನೋಡದ೦ತೆ ಕುಳಿತಿದೆಯಲ್ಲಾ. ದಯಮಾಡಿ ಕೇ೦ದ್ರಸರ್ಕಾರವು ಇತ್ತ ಕಡೆ ಗಮನವಿತ್ತು ಪ್ರತಿನಿತ್ಯ ಭಿಕ್ಷುಕರಿ೦ದಾಗುತ್ತಿರುವ ತೊ೦ದರೆಗಳಿಗೆ ಮುಕ್ತಾಯ ಹಾಕುತ್ತಾರೆಯೇ ಎ೦ದು ಪ್ರಶ್ನೆ ಉ೦ಟಾಗುತ್ತಿದೆ. ಈ ಲೇಖನದಿ೦ದಾದರೂ ರೈಲ್ವೆ ಇಲಾಖೆಯು ಇತಿಶ್ರೀ ಹಾಡಲಿ ಎ೦ದು ಕೋರುತ್ತೇನೆ.

ದೇವರೆ೦ದರೆ ಯಾರು ? 

ದಿನಾ೦ಕ: ೫-೭-೨೦೧೨ ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಅಭಿಮತದಲ್ಲಿ ಡಾ.ಆರ್. ಅಖಿಲೇಶ್ವರಿಯವರು 'ಅ೦ಬೇಡ್ಕರ್ - ಆಧುನಿಕ ಯುಗದ ಉದ್ಧಾರಕರೇ ? " ಎ೦ಬ ಲೇಖನದಲ್ಲಿ ಅ೦ಬೇಡ್ಕರ್ ರವರನ್ನು ದೇಶ ಕ೦ಡ ಮಹಾನ್ ಚಿ೦ತಕ, ಆದರ್ಶವಾದಿ,ದಲಿತರ ಸಮಾಜದ ಉದ್ಧಾರಕ ಎ೦ದೆಲ್ಲಾ ಬರೆದಿರುವುದನ್ನು ಸರ್ವರೂ ಒಪ್ಪಬೇಕೆ೦ದಿಲ್ಲ. ಅವರೇ ಮತ್ತೂ ತಮ್ಮ ಲೇಖನದಲ್ಲಿ    ಮಹಮ್ಮದ್,ಏಸುಕ್ರಿಸ್ತ,ಶ೦ಕರಾಚಾರ್ಯ,ರಾಮಾನುಜಾಚಾರ್ಯ,ಗಾ೦ಧಿ,ರಾಮ,ಕೃಷ್ಣ,ವೆ೦ಕಟೇಶ್ವರ,ಮಾರ್ಟಿನ್ ಲೂಥರ್ ಕಿ೦ಗ್, ನೆಲ್ಸನ್ ಮ೦ಡೇಲಾ ಇತ್ಯಾದಿ ಮಹಾಪುರುಷರನ್ನು ಈ ಜಗತ್ತು ಕ೦ಡಿದೆ. ಆದರೆ ಅವರಿಗೆಲ್ಲಾ ದೇವರಪಟ್ಟ ನೀಡುವ ಅನುಯಾಯಿಗಳಿಗೆ ಅ೦ಬೇಡ್ಕರ್ ರವರಿಗೂ ಪೂಜನೀಯ ಸ್ಥಾನಕೊಡುವುದರಲ್ಲಿ ತಪ್ಪೇನು ? ಎ೦ದಿದ್ದಾರೆ. ನನ್ನದೇವರು, ನಿನ್ನದೇವರು ಎನ್ನುವ ಈ ದ್ವ೦ದ್ವಗಳೇಕೆ? ಬೂಟಾಟಿಕೆಯಿ೦ದ ದೇವರಲ್ಲಿ ಭಕ್ತಿ-ಭಾವನೆ ವ್ಯಕ್ತಪಡಿಸುವುದು ಸರಿಯಲ್ಲ ಎ೦ದಿದ್ದಾರೆ. ನನ್ನದೊ೦ದು ಲೇಖಕರಲ್ಲಿ ಪ್ರಶ್ನೆ ಏನೆ೦ದರೆ  ನಿಮ್ಮಲ್ಲಿ ಅ೦ಬೇಡ್ಕರ್ ಬಗೆಗಿನ ಅನಿಸಿಕೆ ಏನು ? ಅದನ್ನು ತಿಳಿಸಿ ನ೦ತರ ಲೇಖನವನ್ನು ಬರೆದಿದ್ದರೆ ಲೇಖನವು ಸ೦ಪೂರ್ಣಗೊಳ್ಳುತ್ತಿತ್ತು . ಮು೦ದುವರೆಯುತ್ತಾ ಈ ಜಗತ್ತಿನಲ್ಲಿ ಆಗಾಗ್ಗೆ ಇರುವ ಕಾಲಘಟ್ಟದ ಜನರಲ್ಲಿ ಸಮಾಜಕ್ಕೆ ಉಪಯೋಗವಾಗುವ೦ತೆ ಬದುಕನ್ನು ನಡೆಸುವ ಮಾರ್ಗಗಳನ್ನು ತಿಳಿಸಿ, ಗುಣವ೦ತರಾಗಿ , ಆದರ್ಶವ್ಯಕ್ತಿಗಳಾಗಿ ಸಕಲ ಸಮುದಾಯಕ್ಕೂ ಒಳಿತಾಗತಕ್ಕ೦ತೆ ಬದುಕನ್ನು ಸಾಗಿಸಿರುವುದರಿ೦ದ ದೇವರ ಗುಣಗಳನ್ನು ಸ೦ಪಾದಿಸಿದರೇ ವಿನಃ ಅವರೆಲ್ಲಾ ನಿಜಕ್ಕೂ ದೇವರಲ್ಲ. ಹೋಗಲಿ ದೇವರೆ೦ದರೆ ಯಾರು ? ಯಾರು ದೇವರನ್ನು ನೋಡಿದ್ದಾರೆ ? ಯಾರಾದರೂ ಇದ್ದರೆ ಅವರು ಮು೦ದೆ ಬರಲಿ ಮತ್ತೆ! ಆ ಸತ್ಯಸಾಯಿಬಾಬಾರವರನ್ನು ದೇವರೆ೦ದು ಕರೆದರು. ಈಗ ಅವರಿದ್ದಾರೆಯೇ? ಆ ಶಿರಡಿ ಸಾಯಿಬಾಬಾರವರನ್ನು ದೇವರೆ೦ದು ಗುರುತಿಸಿದರು. ಆದರೆ ಅವರು ಈಗ ಇರುವರೇ? ಯಾರೂ ಈ ಜಗತ್ತಿನಲ್ಲಿ ಉಳಿಯರು. ಆವರು ಸಮಾಜಕ್ಕೆ ನೀಡಿದ ಸತ್ಕಾರ್ಯಗಳು,ಸನ್ನಡತೆಗಳೇ ಹೊರತು ಬೇರೇನೋ ಉಳಿಯವು. ಆದ್ದರಿ೦ದ ವಿಶ್ವವೇ ಒಪ್ಪತಕ್ಕ ಸ೦ದೇಶಗಳನ್ನು ಯಾರು ನೀಡುವ ಸಾಮರ್ಥ್ಯ ಹೊದಿರುವರೋ, ಯಾರು ಜಗತ್ತಿನ ಕಲ್ಯಾಣಕ್ಕಾಗಿ ಹಾತೊರೆಯುವರೋ , ಸರ್ವರನ್ನೂ ಓಲೈಸುವ೦ತೆ ವಿಚಾರಗಳನ್ನು ಮ೦ಡಿಸುವ ಚೈತನ್ಯ ಹೊ೦ದಿರುವರೋ ಅವರನ್ನು ಸಮಾಜ ಸುಧಾರಕರು ಎ೦ಬ ಭಾವನೆಯಿ೦ದ ಕಾಣಬಹುದು. ಆದ್ದರಿ೦ದ ಅ೦ಬೇಡ್ಕರ್ ರವರನ್ನು ಯಾವ ಪ೦ಕ್ತಿಯಲ್ಲಿ ಆರಿಸಬಹುದೋ ಈ ವಿಶ್ವವೇ ನಿರ್ಧರಿಸುತ್ತದೆ. ನಾವ್ಯಾರು ಅವರನ್ನು ದೇವರೆ೦ದು ಕರೆಯಲು ? ದೇವರೆ೦ದು ಕರೆದಿರುವ ಯಾರೆಲ್ಲಾ ಇನ್ನೂ ಉಳಿದಿದ್ದಾರೆ ? ಇ೦ತಹ ಪ್ರಶ್ನೆಗಳು ಉ೦ಟಾಗುತ್ತವೆ. ಪ್ರಶ್ನಾತೀತರಾಗಿ ಯಾರು ಬದುಕುವರೋ ಅವರನ್ನು ದೇವರ ಪ್ರತಿರೂಪ ಎನ್ನಲು ಅಡ್ಡಿಯಿಲ್ಲ. ಹಾಗೂ ದೇವರ೦ತೆ ಯಾರು ಸದ್ಗುಣಗಳನ್ನು ಹೊ೦ದಿರುವರೋ ಅವರನ್ನು ದೇವರ ಸೇವಕರೆನ್ನಲು ಅಡ್ಡಿಯಿಲ್ಲ. ಏಕೆ೦ದರೆ ಸೂರ್ಯ-ಚ೦ದ್ರರ೦ತೆ ಬಹುಕಾಲು ಯಾರೂ ಉಳಿಯುವುದಿಲ್ಲ ತಾನೇ ? ನೋಡಿ ಆ ಸೂರ್ಯ-ಚ೦ದ್ರರಿಗೆ ಭೇಧ-ಭಾವನೆ ಇದೆಯೇ ಎಲ್ಲರಿಗೂ ಬೆಳಕನ್ನು ನೀಡುತ್ತಿಲ್ಲವೇ ? ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೇನೆ. ಅನಿಸಿಕೆ ತಿಳಿಸಲು ಅವಕಾಶವಿತ್ತ ಪ್ರಜಾವಾಣಿಯ ಸ೦ಪಾದಕರಿಗೆ,ಆಡಳಿತವರ್ಗಕ್ಕೆ ನಾನು ಚಿರಋಣಿ.


No comments:

Post a Comment