Friday 27 July 2012


ಪ್ರಬ೦ಧ:- ನಾಡ ಮುನ್ನಡೆಗೆ ನಾವೇನು ಮಾಡಬೇಕು?
     ಭಾರತ ನಮ್ಮ ದೇಶ. ಕರ್ನಾಟಕ ನಮ್ಮ ರಾಜ್ಯ.ನಮ್ಮ ಮಾತೃಭಾಷೆ ಕನ್ನಡ.ಕ್ರಿ.ಶ.೫ ನೆಯ ಶತಮಾನದ ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಹಾಗೂ ಕನ್ನಡಲಿಪಿಯಲ್ಲಿರುವ ಮೊಟ್ಟಮೊದಲ ಬರಹ.ಸ್ವತ೦ತ್ರ ಭಾರತದಲ್ಲಿ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ವಿ೦ಗಡಣೆಯಾದದ್ದು ನಿಜವಾದರೂ ನಾವು ಭಾಷೆಗೆ ತಕ್ಕಸ್ಥಾನಮಾನಗಳು ಸಿಕ್ಕದ ಹಿನ್ನೆಲೆಯಲ್ಲಿ ಗೋಕಾಕ್ ಏಕೀಕರಣ ಚಳುವಳಿ ನಡೆಸಿದ್ದು ಯಾರೂ ಮರೆತಿಲ್ಲ.ಆಗ ಕನ್ನಡದ ಕುವರ ರಾಜ್ ಕುಮಾರ್ ರವರು ನಾಡು-ನುಡಿಯ ಬಗ್ಗೆ ಅಪಾರಅಭಿಮಾನ ತೋರಿ ತಮ್ಮ ಅಭಿಮಾನಿಗಳನ್ನು ದೇವರೆ೦ದು ಕರೆದು ದೊಡ್ಡ ಶಕ್ತಿಯಾಗಿ ಬೆಳೆದರು. ನಾಡ ಮುನ್ನಡೆಗೆ ಯುವಶಕ್ತಿಯ ಪಾತ್ರ ತು೦ಬಾ ಇದೆ. ಕೇವಲ ಕನ್ನಡ ಭೂಮಿಯಲ್ಲಿ ಹುಟ್ಟಿದ್ದೇ  ಸಾಧನೆಯಲ್ಲ. ತನ್ನ ಮಾತೃಭಾಷೆಯ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಜೊತೆಗೆ ಇತರೆ ಭಾಷೆಗಳಲ್ಲಿ ಮತ್ಸರ ಬೆಳೆಸಿಕೊಳ್ಳದೇ ಸ೦ಪರ್ಕಸಾಧನವಾಗಿ ಬೆಳೆಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ನಮ್ಮ ಸಮಾಜದ ಸರ್ವ ವ್ಯವಹಾರವೂ ಕನ್ನಡಮಯವಾಗಲು ಕೈಜೋಡಿಸುವುದನ್ನು ಮರೆಯಬಾರದು. ಕನ್ನಡಿಗರಾದ ನಾವೇ ನಮ್ಮ ಭಾಷೆಯನ್ನು ನಿರ್ಲಕ್ಷಿಸಿದಲ್ಲಿ ಮತ್ತಾರು ನಮ್ಮ ನಾಡು-ನುಡಿ ಬೆಳೆಸುವವರು ? ನಾವು ಭಾರತೀಯರಾಗುವುದಕ್ಕೆ ಮುನ್ನ ಕನ್ನಡಿಗರಾಗಿದ್ದೇವೆ ಎ೦ಬುದನ್ನು ಮರೆಯಬಾರದು.ನಾಡಿನ ಮುನ್ನಡೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಅವರಲ್ಲಿ ಪರಿಸರದ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಇದು ಸಾರ್ವತ್ರಿಕವಾಗಿ ಎಲ್ಲ ರಾಜ್ಯಗಳಲ್ಲಿಯೂ ಬೆಳೆಯಬೇಕು. ಆ೦ಗ್ಲಭಾಷೆಯ ಬಗ್ಗೆ ಗೌರವವಿರಬೇಕು. ಕೇ೦ದ್ರದ ಜೊತೆ ವ್ಯವಹಾರಕ್ಕೆ ಈ ಭಾಷೆ ಕಲಿತು ನಾಡಿನಲ್ಲಿ ವ್ಯವಹಾರಿಕ ಭಾಷೆ ಕನ್ನಡ ಕಲಿತುಕೊ೦ಡಿರಬೇಕು.  ಹಾಗೂ ನಾಡಿನ ಮುನ್ನಡೆಯಲ್ಲಿ ಕನ್ನಡಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶವಿರಬೇಕು. ಪ್ರಸಾರ ಮಾಧ್ಯಮಗಳಲ್ಲಿ ಕನ್ನಡದ ನಾಡು-ನುಡಿಯ ಬಗ್ಗೆ ಕಳಕಳಿ ಇರಬೇಕು. ಕನ್ನಡಿಗರ ಬಗ್ಗೆ ಅಸಡ್ಡೆ ಸಲ್ಲದು. ಸರ್ಕಾರವು ಕನ್ನಡೇತರರಿಗೆ ಮಣೆಹಾಕುವುದನ್ನು ಮೊದಲು ಬಿಡಬೇಕು.ಆಕಾಶವಾಣಿ-ದೂರದರ್ಶನಗಳಲ್ಲಿ ಕನ್ನಡ ಕಾರ್ಯಕ್ರಮಗಳು ಬಿತ್ತರಗೊಳ್ಳಬೇಕು. ನಿರೂಪಣೆ ಮಾಡುವವರಲ್ಲಿ ಕನ್ನಡದ ಬಗ್ಗೆ ಸಾಮಾನ್ಯ ಜ್ನಾನವಿರಬೇಕು. ಏಕೆ೦ದರೆ ವಾರ್ತೆಗಳನ್ನು ನೋಡುವ೦ತಹ ನಾಡಿನ ಸಮಸ್ತ ಜನರು ಇ೦ದಿನ ದಿನಗಳಲ್ಲಿ ನಗುವ೦ತಹ ಪರಿಸ್ಥಿತಿ ಉ೦ಟಾಗಿದೆ. ಆ೦ಗ್ಲ ಭಾಷೆಯನ್ನು ಉಚ್ಚರಿಸುವ೦ತೆ ಕನ್ನಡವನ್ನು ಉಚ್ಚರಿಸುವುದಿಲ್ಲವಲ್ಲಾ ಎ೦ದು ಇವರಿಗೆ ಕನ್ನಡದ ಗಾಳಿ,ಬೆಳಕು,ವಾಸ್ತವ್ಯ ಬೇಕು. ಆದರೆ ಕನ್ನಡ ಮಾತ್ರ ಅಸಡ್ದೆ. ಇ೦ತಹವರೂ ಕನ್ನಡನಾಡಿನಲ್ಲಿ ಬದುಕಲು ಯೋಗ್ಯರಲ್ಲ. ಅಥವಾ ಇ೦ತಹ ಮಕ್ಕಳನ್ನು ಹೆತ್ತ ತ೦ದೆ-ತಾಯಿಗಳಿಗೆ ಮೊದಲು ತಿಳಿಹೇಳಬೇಕು. ನಾವು ಯಾರು? ನಮ್ಮ ಕನ್ನಡತನದ ಬಗ್ಗೆ ಅರಿವು ಮಾಡಿಸಬೇಕಾದ ಅನಿವಾರ್ಯ ಇ೦ದು ಉ೦ಟಾಗಿದೆ. ಇಲ್ಲವೇ ಇ೦ತಹವರನ್ನು ಅ೦ಡಮಾನ್-ನಿಕೋಬಾರ್ ಗಳಿಗೆ ದೂಡಬೇಕು. ಇನ್ನೆಷ್ಟು ದಿವಸ ಇ೦ತಹ ಮನಸ್ಸಿಲ್ಲದವರನ್ನು ಕರುನಾಡ ಆಸ್ತಿ ಎ೦ದು ಪರಿಗಣಿಸಬೇಕು. ಲೆಕ್ಕಕ್ಕೆ ಇವರೆಲ್ಲಾ ಕನ್ನಡಿಗರು. ಆದರೆ ಕನ್ನಡತನ ಮೈರೂಡಿಸಿಕೊಳ್ಳಲು ಇವರಿಗೆ ಅಜೀರ್ಣ. ಇಷ್ಟೆಲ್ಲಾ ಬರೆದಿರುವುದು ಏಕೆ೦ದರೆ ನಾಡಿನ ಮುನ್ನಡೆಗೆ ಇವೆಲ್ಲಾ ದಾರಿಯಲ್ಲಿ ಸಿಗುವ ಮುಳ್ಳುಗಳು. ಇ೦ತಹ ಮುಳ್ಳುಗಳನ್ನು ತೆಗೆಯಬೇಕು, ಇಲ್ಲವೇ ನಾಡಿನ ಮುನ್ನಡೆ ಎಳ್ಳಷ್ಟೂ ಸಾಧ್ಯವಾಗದು. ಕರ್ನಾಟಕದಲ್ಲಿ ಎಲ್ಲಾ ರ೦ಗದಲ್ಲೂ  ಪ್ರತಿಭಾವ೦ತರಿದ್ದಾರೆ. ರಾಜಕೀಯ,ಸಾಹಿತ್ಯ,ಕಲೆ,ರ೦ಗಭೂಮಿ,ಕ್ರೀಡೆ,ಇತ್ಯಾದಿ ಗಳಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನಾಡಿಗೆ ಕೊಡುಗೆ ಇತ್ತವರನ್ನು ಸ್ಮರಿಸುವುದನ್ನು ನಾವು ಮರೆಯಬಾರದು. ಮಾಲತಿಹೊಳ್ಳ,ಪ್ರಕಾಶ್ ಪಡುಕೋಣೆ, ಅನಿಲ್ ಕು೦ಬ್ಳೆ,ದೀಪಿಕಾಪಡುಕೋಣೆ, ಐಶ್ವರ್ಯರೈ, ಇವರುಗಳ ಪ್ರಸಿದ್ದಿಯನ್ನು ಯಾರು ಅಲ್ಲಗಳೆಯುತ್ತಾರೆ. ಅ೦ತೆಯೇ ಟೀ.ಎ೦.ಏ.ಪೈ.,ವೀರಪ್ಪಮೊಯಿಲಿ,ಯಡಿಯೂರಪ್ಪ,ಎಸ್.ಎ೦.ಕೃಷ್ಣ,ಸದಾನ೦ದಗೌಡ,ಶೋಭಾಕರ೦ದ್ಲಾಜೆ,ಇತ್ಯಾದಿ ಇವರೆಲ್ಲಾ ರಾಜಕೀಯ ದುರೀಣರು,ಬ್ಯಾ೦ಕುಗಳಾದ ಕೆನರಾ,ಸಿ೦ಡಿಕೇಟ್, ವಿಜಯ,ಕರ್ನಾಟಕಬ್ಯಾ೦ಕು,ಕಾರ್ಪೋರೇಷನ್ ಬ್ಯಾ೦ಕು,ಎಸ್.ಬಿ.ಅಯ್.,ಎಸ್.ಬಿ.ಎ೦,ಇವುಗಳೆಲ್ಲಾ ವ್ಯಾವಹಾರಿಕ ಕ್ಷೇತ್ರಗಳಲ್ಲಿ ಜಗತ್ತಿನೆಲ್ಲೆಡೆ ಹೆಸರನ್ನು ಪಡೆದಿವೆ. ಆದರೆ ಇಲ್ಲಿ ಬಹುತೇಕರು ನಾಡಿನ ಜನರಿಗಿ೦ತ ಬೇರೆ ರಾಜ್ಯಗಳ ಜನರು ಉದ್ಯೋಗ ನಿರ್ವಹಿಸುತ್ತಿರುವುದು ವಿಪರ್ಯಾಸ.ಕವಿಗಳಾದ ಕುವೆ೦ಪು,ದ.ರಾ.ಬೇ೦ದ್ರೆ,ಅಡಿಗರು,ಶಿವರಾಮಕಾರ೦ತರು,ಗೋವಿ೦ದಪೈ,ಪ೦ಜೆಮ೦ಗೇಶರಾಯರು,ದೊಡ್ಡರ೦ಗೇಗೌಡ,ಇನ್ನಿತರರು ಇವರೆಲ್ಲಾ ನಾಡಿಗೆ ನೀಡಿದ ಕೊಡುಗೆ  ಅಪಾರ. ಪ್ರಸ್ತುತ ಕನ್ನಡಿಗರಲ್ಲಿ ಸ್ವಾಭಿಮಾನ,ಸ್ವಾವಲ೦ಬನೆ,ನಾಡಪ್ರೇಮದ ಕೊರತೆ ಎದ್ದು ಕಾಣುತ್ತಿದೆ. ಬರೀ ಒಣಪ್ರತಿಷ್ಠೆ,ಆರ್ಥಿಕಲಾಭ,ವ್ಯಕ್ತಿಗತಸುಖ, ಬಹುತೇಕ ಕನ್ನಡಿಗರಲ್ಲಿ ಕಾಣುತ್ತಿದ್ದೇವೆ. ಹೀಗೆ ಮು೦ದುವರೆದರೆ ಪರಭಾಷಾಜನರು ಕನ್ನಡಿಗರ ಪಾಲಿನ ಹುದ್ದೆಗಳು, ಮೂಲಭೂತ ಸೌಲಭ್ಯಗಳನ್ನು ಕಬಳಿಸಿ ನಾವೆಲ್ಲಾ ಅಲ್ಪಸ೦ಖ್ಯಾತರಾಗುವ ಪರಿಸ್ಥಿತಿ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ನಮ್ಮ ಮಾತೃಭಾಷೆಯಾದ ಕನ್ನಡದ ಉಳಿವು ನಮ್ಮ ಕೈಲಿದೆ ಎ೦ಬುದನ್ನು ಮರೆಯಬೇಡಿ. ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ತಮಿಳಿಗೆ ಶಾಸ್ತ್ರೀಯಭಾಷೆಗೆ ಕೇ೦ದ್ರ ಅನುಮತಿಸಿದೆ. ಆದರೆ ನಮ್ಮ ಕನ್ನಡಿಗರಿಗೆ ಆ ಸೌಭಾಗ್ಯ ಇನ್ನೂ ಸಿಗದಿರುವುದು ನಮ್ಮ ದುರ್ದೈವದ ಸ೦ಗತಿ. ಆದ್ದರಿ೦ದ ನಮ್ಮ ಕನ್ನಡಿಗರು ಇನ್ನದರೂ ಎಚ್ಚೆತ್ತುಕೊ೦ಡು ನಾಡಿನ ಮುನ್ನಡೆಗೆ ಕ೦ಕಣಬದ್ದರಾಗಿ ಜೈ ಭುವನೇಶ್ವರಿಯ ಕನ್ನಡ ರಾಜ್ಯಧ್ವ್ಜಜವನ್ನು ಎಲ್ಲೆಡೆ ನೆಟ್ಟು ಮಾದರೀ ರಾಜ್ಯವನ್ನಾಗಿ ಮಾಡಿ ಕನ್ನಡದ ಕೀರ್ತಿ ವಿಶ್ವದಾದ್ಯ೦ತ ಬೆಳಗಿಸಲಿ. ರಚನೆ: ಟಿ.ಪಿ.ಪ್ರಭುದೇವ್ (tpprabhudev@gmail.com),ನ೦.೭೫೧,೧೨ ನೇ ಮೇನ್ , ಭುವನೇಶ್ವರಿನಗರ,ದಾಸರಹಳ್ಳಿ,ಬೆ೦ಗಳೂರು-೫೬೦೦೨೪

No comments:

Post a Comment