Monday 2 July 2012


ಮರಕ್ಕೆ ಬಾಯಿ ಬೇರೆ೦ದು
ಮರಕ್ಕೆ ಬಾಯಿ ಬೇರೆ೦ದು
ತಳಕ್ಕೆ ನೀರೆರೆದರೆ  ಮೇಲೆ ಪಲ್ಲವಿಸಿತ್ತು ನೋಡ
ಲಿ೦ಗಕ್ಕೆ ಬಾಯಿ ಜ೦ಗಮವೆ೦ದು ಉಣಬಡಿಸಿದರೆ
ಸಕಲಪಡಿಪದಾರ್ಥ ನೀಡಿತ್ತದು ನೋಡ
ಆ ಜ೦ಗಮನ ಹರನೆ೦ದು ಕಾಣದೇ
ನರನೆ೦ದು ಕ೦ಡೆಯಾದರೆ
ಘೋರನರಕ ತಪ್ಪದು ಕಾಣಾ
ಕೂಡಲಸ೦ಗಮದೇವಾ!
ರೇಷ್ಮೆಹುಳುವೆ ನಿನಗೆ ಸೊಪ್ಪು ಆಹಾರವೆ೦ದು
ಪ್ರತಿನಿತ್ಯ ಉಣಿಸಿದರೆ ನೀ ಕಡೆಗೆ ನೂಲ
ಹೆಣೆದು ಕೊಟ್ಟೆಯಲ್ಲಾ
ಆ ನೂಲಿನಿ೦ದ ಬಗೆಬಗೆಯ ವಸ್ತ್ರ ತಯಾರಿಸಿ
ನಾ ಖುಷಿ ಪಟ್ಟೆನಲ್ಲಾ! ಆ ಹುಳುವ ಬಿಸಿಹಬೆಯಲ್ಲಿ
ಬೇಯಿಸಿ ನೂಲತೆಗೆವ ನಮ್ಮ ಆ ಪ್ರಭುದೇವ ಸುಮ್ಮನೆ
ಬಿಡುವನೇ! ಇನ್ನಾದರೂ ಆ ಹುಳುಗಳ ಜೀವ೦ತ ಬೇಯಿಸುವ
ಬದಲು ಸರಿಯಾದ ಮಾರ್ಗ ಹುಡುಕದಿದ್ದರೇ ಆ ಮುಕ್ಕಣ್ಣ ಸುಮ್ಮನೇ
ಬಿಡುವನೇ ! ತಿಳಿದಿರುವ ನಾವ್ ಅನಾಗರೀಕತೆಯಿ೦ದ ವರ್ತಿಸಿದರೇ
ಆ ರಾಕ್ಷಸರಿಗಿ೦ತ ಬಲುಕಟುಕರು ಅಲ್ಲವೇ ?

No comments:

Post a Comment