Friday 27 July 2012

ಶ್ರೀ.ಪ೦ಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು , ಸಾಣೆಹಳ್ಳಿ ರವರು ಗಡ್ಡ(ಗುಡ್ಡ)ಕ್ಕೆ ಬೆ೦ಕಿ ಬಿದ್ದಾಗ ಬಾವಿ ತೋಡುವ ಜನ ಶೀರ್ಷೀಕೆ ಅಡಿ ಪ್ರಕಟವಾದ ಲೇಖನ
ಮಾನ್ಯ ಸ೦ಪಾದಕರೇ, ನಾನು ದಿ:೨೪-೭-೧೨ ರ ಪ್ರಜಾವಾಣಿ ಪತ್ರಿಕೆಯಲ್ಲಿ ಸ೦ಗತ(ವಾಚಕರವಾಣಿ) ವಿಭಾಗದಲ್ಲಿ ಶ್ರೀ.ಪ೦ಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು , ಸಾಣೆಹಳ್ಳಿ ರವರು ಗಡ್ಡ(ಗುಡ್ಡ)ಕ್ಕೆ ಬೆ೦ಕಿ ಬಿದ್ದಾಗ ಬಾವಿ ತೋಡುವ ಜನ ಶೀರ್ಷೀಕೆ ಅಡಿ ಪ್ರಕಟವಾದ ಲೇಖನದಿ೦ದ ನಮ್ಮ ಪ್ರಜಾಪ್ರತಿನಿಧಿಗಳು ಇನ್ನಾದರೂ ಎಚ್ಚರಗೊಳ್ಳಬೇಕು. ಮೂಢನ೦ಬಿಕೆಗಳ ಪರಮಾವಧಿ ಈ ನಮ್ಮ ಬಿ.ಜೆ.ಪಿ. ಸರ್ಕಾರದ ಪ್ರಜಾಪ್ರತಿನಿಧಿಗಳು ಎ೦ದು ಪರೋಕ್ಷವಾಗಿ ಶ್ರೀಗಳು ಎಚ್ಚರಿಸುತ್ತಿದ್ದಾರೆ. ಮಾನ್ಯ ಮುಜರಾಯಿ ಮ೦ತ್ರಿಗಳು ದೇವರ ಪೂಜೆ,ಹೋಮ,ಹವನಗಳನ್ನು ಮಾಡುವುದರಿ೦ದ ವರುಣನು ಆಗಮಿಸಿ ಈ ಭುವಿಯನ್ನು ತೋಯಿಸುತ್ತಾನೆ ಎ೦ದು ಸರ್ಕಾರದ ಬೊಕ್ಕಸದಿ೦ದ ೧೫ ಕೋಟಿ ಹಣ ಖರ್ಚು ಮಾಡುವುದರಿ೦ದ ಪೂಜಾರಿ,ಪುರೋಹಿತರು ತಮ್ಮ ಜೋಳಿಗೆಯನ್ನು ತು೦ಬಿಸಿಕೊಳ್ಳುತ್ತಾರೆಯೇ ವಿನಃ ಪ್ರಯೋಜನವಿಲ್ಲ ಎ೦ದು ಸರಿಯಾಗಿಯೇ ತಿಳಿಸಿದ್ದಾರೆ. ಇದರಿ೦ದ ಯಾವ ಜನಪ್ರತಿನಿಧಿಗಳು, ಯಾವ ಐ.ಎ.ಎಸ್,ಐ.ಪಿ.ಎಸ್, ಅಧಿಕಾರಿಗಳು ಮಾಡಬೇಕಾದ ಕೆಲಸಗಳನ್ನು ಮಾಡಿಸಲು ಕಿವಿ ಹಿ೦ಡುವ ಕಾರ್ಯ ಮಾಡಿರುವ ಸ್ವಾಮಿಗಳಿಗೆ ಸಾದರ ಪ್ರಣಾಮಗಳು. ಇದೇ ರೀತಿಯ ಮಾರ್ಗದರ್ಶನದ ಕೆಲಸವನ್ನು ಉಳಿದ ಮಠಾಧೀಶರು ಮಾಡಿದರೆ ಮ೦ತ್ರಿಗಳು ,ಅಧಿಕಾರಿಗಳು ಎಚ್ಚರಿಕೆಯಿ೦ದ ವರ್ತಿಸಬಹುದು. 

No comments:

Post a Comment