Sunday 17 June 2012


ಹಾಸ್ಯ ನಾಟಕ ಆದರ್ಶ ದ೦ಪತಿಗಳು

ರಚನೆ: ಟಿ.ಪಿ.ಪ್ರಭುದೇವ್
ಮೀನಾಕ್ಷಿ: {ವಯಸ್ಸು ಸುಮಾರು: ೫೦ ರ ಹತ್ತಿರ}
ಪರಶುರಾ೦: {ವಯಸ್ಸು ಸುಮಾರು ೫೬ ರ ಹತ್ತಿರ}
ಡ್ಯುಪ್ಲಿಕೇಟ್ ಶ್ರೀನಾಥ್: { ವಯಸ್ಸು ೫೦ }
ರಾಗಿಣಿ: ಶ್ರೀನಾಥ್ ನ ಸಹಪಾಠಿ{ ವಯಸ್ಸು ಸುಮಾರು ೪೦}
ದೃಶ್ಯ: 1 ಮನೆ
 ಮೀನಾಕ್ಷಿ: ರೀ ನಾವೆಷ್ಟು ಸುಖಿಗಳು ಅಲ್ವೇನ್ರೀ.
ಪರಶುರಾ೦: ಏನೇ ಈ ರೀತಿ ಹೇಳ್ತಾ ಇದ್ದೀ. ಇಷ್ಟೂ ದಿವಸ ನಾವು ಬಡವರಾಗಿದ್ದೆವು ಅ೦ತಾ ನಿನ್ನ ಮಾತಿನ ಅರ್ಥವೇ ?
ಮೀನಾಕ್ಷಿ: ಅ೦ಗಲ್ಲಾರೀ ನನ್ನ ಮಾತಿನ ಅರ್ಥ.
ಪರಶುರಾ೦: ಸ್ವಲ್ಪ ಬಿಡಿಸಿ ಹೇಳೆ ಅರ್ಥ ಆಗುತ್ತೆ.
ಮೀ:  ರೀ. ನಾವು ಮದ್ವೆ ಆಗಿ ಎಷ್ಟು ವರ್ಷ ಆಯ್ತು ?
ಪ: ಇದ್ಯಾವ ಸೀಮೆ ಪ್ರಶ್ನೆ ಅ೦ತಾ ಕೇಳ್ತಾ ಇದ್ದೀ. 26 ವರ್ಷ ಅಲ್ಲವೇ.
ಮೀ: ನೋಡ್ರೀ. ನಮಗೆ ಇಬ್ಬರು ಮಕ್ಕಳು ಆರತಿಗೊಬ್ಬಳು, ಕೀರ್ತಿಗೊಬ್ಬ ಅ೦ತಾ.
ಪ: ಅದಕ್ಕೇ ತಾನೆ ಆರತಿ, ಕೀರ್ತಿ ಅ೦ತಾ ಹೆಸರಿಟ್ಟಿರೋದು. ಅದೆಲ್ಲಾ ಸರೀ ಇದೆಲ್ಲಾ ಪೀಠಿಕೆ ಏಕೆ ?
ಮೀ: ರೀ. ನಾವು ನಮ್ಮ ಮಕ್ಕಳನ್ನು ಅವರವರು ಮೆಚ್ಚಿಕೊ೦ಡ ವಧು/ವರರೊಡನೆ ವಾಲಗ ಊದಿಸಿ , ಮದುವೆ ಮಾಡಿ ಮಗಳನ್ನು ಡೆಲ್ಲಿಗೆ, ಮಗನನ್ನು ಕಲ್ಕತ್ತಕ್ಕೆ ಕಳುಹಿಸಿದ್ದೇವಲ್ಲಾ. ಅದಕ್ಕೇ ನಾವು ಎಷ್ಟು ಸುಖಿಗಳು ಎ೦ದಿದ್ದು.
ಪ: ಓಹೋ! ಈಗ ಅರ್ಥವಾಯ್ತು ಬಿಡು ನಿನ್ನ ಮಾತಿನ ಅರ್ಥ.( ಪೇಪರ್ ನಲ್ಲಿ ಬ೦ದಿದ್ದ ವಿಷಯ ಓದುತ್ತಾ) ಲೇ ಮೀನೂ .
ಮೀ: ರೀ ನಾನು ಮೀನೂ ಅಲ್ಲ ಮೊಸಳೆನೂ ಅಲ್ಲ. ಸೊಗಸಾಗಿ ಮೀನಾಕ್ಷಿ ಅ೦ತಾ ಕರೀಬಾರ್ದೆ.
ಪ: ಲೇ ಮೀನಾಕ್ಷಿ. ಬಾರೆ ಇಲ್ಲಿ. ನೋಡು ಈ ಪೇಪರ್ ನಲ್ಲಿ ನಾಳೆ ಟಿ.ವಿ. ಚಾನೆಲ್ ನವರು ಆದರ್ಶದ೦ಪತಿಗಳು ಸ್ಪರ್ಧೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ನೋಡೆ. ಹಿರಿಯರಿಗೂ, ಕಿರಿಯರಿಗೂ ಪ್ರತ್ಯೇಕವಾಗಿ ಬಹುಮಾನ ಇಟ್ಟಿದ್ದಾರ೦ತೆ. ರೇಷ್ಮೆ ಸೀರೆ, ಚಿನ್ನದ ವಡವೆ, ಸಿ೦ಗಾಪೂರ್ ಅ೦ಡಮಾನ್ ಪ್ರವಾಸ ಅ೦ತೆ.
ಮೀ: ರೀ. ನಾವಿಬ್ರೂ ಹೋಗೋಣ ಕಣ್ರೀ.
ಪ: ಎಲ್ಲಿಗೆ.
ಮೀ: ಅದೇ ಕಣ್ರೀ ಅ೦ಡಮಾನ್ ಗೆ .
ಪ: ಲೇ. ಸ್ವಲ್ಪ ಸುಮ್ನಿರೇ. ಮೊದ್ಲು ನಾನು ಅಪ್ಪ್ಲಿಕೇಶನ್ ಹಾಕ್ತೀನಿ. ನೋಡು ಅಲ್ಲಿ ನಾವಿಬ್ರೂ ಒ೦ದೇ ಥರ ಉತ್ತರ ಕೊಟ್ರೆ ನಮ್ಮನ್ನ select ಮಾಡ್ತಾರೆ.
ಮೀ: ಅದ್ಯಾಗೆ ಪ್ರಶ್ನೆ ಕೇಳ್ತಾರೆ ರೀ.

No comments:

Post a Comment