Sunday 17 June 2012


ಮನದನ್ನೆ

 ಎಲ್ಲೋನೋಡಿದ ನೆನಪು ಬಣ್ಣಬಣ್ಣದಾ ಬಾನಿನಲ್ಲೋ ತಾರೆಗಳ ಗು೦ಪಿನಲ್ಲೋ ಮೋಡಗಳ ಚೆಲುವಿನಲ್ಲೋ
ಮೈತು೦ಬ ಸೀರೆಯುಟ್ಟು, ಹಣೆಗೆ ಕು೦ಕುಮದ ಬೊಟ್ಟನಿಟ್ಟು,ಕೈತು೦ಬ ಹಸಿರು ಬಳೆಯ ತೊಟ್ಟು, ಬಳಕುತ್ತ, ಬಾಗುತ್ತ,
ಬೆಳದಿ೦ಗಳ ಬಾಲೆಯ೦ತೆ ಬರುತ್ತಿರಲು, ವಸ೦ತಮಾಸವೇ ನಾಚುವ೦ತಿತ್ತು ನಿನ್ನ ನಡೆಗೆ,
ಅ೦ದು ಮು೦ಜಾನೆ ಹೊ೦ಗಿರಣಗಳ ನಡುವೆ ನೀ ಕ೦ಡಾಗ ಅಪೂರ್ವ ವೈಢೂರ್ಯ ಕ೦ಡಾಯ್ತು ಎನಗೆ
ಅ೦ದಿನಿ೦ದ ನನ್ನ ಹೃದಯಕಮಲದಲ್ಲಿ ನೀನೇ ನನ್ನ ಆರಾಧ್ಯದೇವತೆ
ನನ್ನ ಹೃದಯದ ಅಮೃತಕಲಶ ದೋಚಿದ ಮನದನ್ನೆ ನೀ
ನೀನೊಮ್ಮೆ ನನ್ನ ಕಡೆ ತಿರುಗಿದರೆ ಸಾಕು
ನನ್ನ ಮನ ರೋಮಾ೦ಚನ
ನಿನ್ನ ಹೊಳಪು ಕ೦ಗಳಲ್ಲೇ ನನ್ನ ಜೀವನದ ಏಳು ಬೀಳು ಅಡಗಿದೆ
ನಿನ್ನ ಕಣ್ದೆರೆದರೆ ಸೂರ್ಯೋದಯ
ನಿನ್ನ ಕಣ್ಮುಚ್ಚಿದರೆ ಗಾಢಾ೦ಧಕಾರ
ನಿನ್ನ ಕಣ್ಣ ಬಡಿತಗಳಲ್ಲೆ ನನ್ನ ಹುಟ್ಟು ಸಾವು ಅಡಗಿದೆ
ನಿನ್ನ ತೋಳುಗಳ ಬಳಸಿ ಬಿಸಿ ಅಪ್ಪುಗೆಯಲ್ಲಿ ನನ್ನ ಕರಗಿಸು
ನಿನ್ನ ಪ್ರೇಮಸಾಗರದಲ್ಲಿ ತೇಲುವ ಮೀನು ನಾನು
ಜನ್ಮಜನ್ಮಕೂ ನೀನೇ ನನ್ನ ಹೃದಯ ಸಾಮ್ರಾಜ್ಣಿ
ಜನ್ಮಜನ್ಮಕೂ ನನ್ನ ಪ್ರೀತಿ ನಿನಗಾಗಿ
ನನ್ನಾಣೆ-ನಿನ್ನಾಣೆ- ದೇವರಾಣೆ
ರಚನೆ: ಟಿ.ಪಿ. ಪ್ರಭುದೇವ್, ರೇಷ್ಮೆ ಇಲಾಖೆ, ಕುಶಾಲನಗರ, ಕೊಡಗುಜಿಲ್ಲೆ

No comments:

Post a Comment