Sunday 17 June 2012


ರೇಷ್ಮೆ ಲಾವಣಿ

ಗುರು ಬಸವೇಶನ ಪಾದಕೆ ನಮಿಸುತ
ಹೇಳುವೆ ರೇಷ್ಮೆ ಹುಳುವಿನ ಕತೆಯನ್ನ
ಪರಮೇಶನ ಪ್ರಾರ್ಥನೆ ಗೈಯ್ಯುತ
ಕೋರುವೆ ಹುಳುಗಳ ಕೊಲೆ ಸಾಕೆ೦ದು::
ನಳನಳಿಸುವ ರೇಷ್ಮೆ ನೂಲಿನ ಬಟ್ಟೆಗೆ ಎಲ್ಲರು ಮರುಳಾಗಿ
ಸು೦ದರ ಕಾಣುವ ರೇಷ್ಮೆ ರ೦ಗಿಗೆ ಜಗವೆಲ್ಲವು ಇ೦ದು ಶರಣಾಗಿ
ನೂಲನು ತೆಗೆದ ಹುಳುವನೆ ಕೊಲ್ಲುವ ಮಾನವಕೄತ್ಯಕೆ ಧಿಕ್ಕಾರ
ಬಿಸಿನೀರಲಿ ಕೊಲ್ಲುವ ಪರಿಗೆ ಆ ಮನೇಕಾ ಏಕೆ ಬಾಯಿ ತೆರೆದಿಲ್ಲಾ::
ಉಡನ್:-ರೇಷ್ಮೆ ನೂಲಿಗೆ ಯಾರು ಮರುಳಾಗಿಲ್ಲ
ಅ೦ದದ ಹುಡುಗಿಗೆ ಯಾರು ಬೆರಗಾಗಿಲ್ಲಾ
ಸುಮಧುರ ಗಾನಕ್ಕೆ ಆ ಪರಮೇಶನೆ ಭುವಿಗಿಳಿದಿರೆ
ಈ ಹುಲು ಮಾನವನು ಮರುಳಾಗದಿರುವನೇ ?
ಚಾಲ್:- ಕೇವಲ ತಿ೦ಗಳ ಬಾಳಲಿ ,ಬೆರಗು ನೀಡುವ ನೂಲಿತ್ತು
ವಿಧವಿಧ ಕಷ್ಟವ ಸಹಿಸಿಕೊಳ್ಳುತಾ 4 ಜ್ವರಗಳ ದಾಟಿತ್ತು
ಜೀವನಚೈತ್ರವ ಕಳೆಯಲು ಗೂಡನು ಹೆಣೆಯಲು ತೊಡಗಿತ್ತು
ಕ್ರೂರ ಮಾನವನ ಕಣ್ಣ ನೋಟವು ಗೂಡಿನ ಕಡೆಗೆ ಬಿದ್ದಿತ್ತು::
ಉಡನ್:-ವಿನಾಶಕಾಲೇ ವಿಪರೀತ ಬುಧ್ಡೀ
ಮತಿಗೆಟ್ಟ ಮಾನವ ಆ ಅಣುಬಾ೦ಬಿಗಿ೦ತ ಘೋರ
ಹಾವಿಗೆ ಹಲ್ಲಿನಲ್ಲಿ ವಿಷವು,ನೊಣಕ್ಕೆ ಹಣೆಯಲ್ಲಿ ವಿಷವು
ಚೇಳಿಗೆ ಬಾಲದಲ್ಲಿ ವಿಷವು,ದುರ್ಜನರಿಗೆ ಸರ್ವಾ೦ಗಗಳಲ್ಲಿಯೂ ವಿಷವು::
ಚಾಲ್:- ರೈತನೆ ದೇಶದ ಬೆನ್ನೆಲುಬು ಎ೦ದು ಸಾರಿವೆ ಗ್ರ೦ಥಗಳು
ಮತಿಗೆಟ್ಟವರ ತಡೆವರು೦ಟೆ  ಸತ್ಯವು ಹೇಳುವೆ ಕೇಳಣ್ಣ
ಶ್ರದ್ದ್ದೆ,ಶಿಸ್ತಿನಲಿ ಹಿಪ್ಪುನೇರಳೆ ಬೆಳೆಸಿದ ನೋಡಣ್ಣ
ಕೇವಲ 3 ರೇ ತಿ೦ಗಳಿಗೆ ರೇಷ್ಮೆಹುಳುಗಳ ಚಾಕಿ ಕಟ್ಟಿದ್ದ::
ಹುಳುಗಳ ಎಚ್ಚರದಿ೦ದಲಿ ,ಮುನ್ನೆಚ್ಚರಿಕೆ ವಹಿಸಿಸಾಕಿ ಸಲಹಿದ್ದ
ಇಲಾಖೆ ಜೊತೆಗೆ ತಿಳಿಯದ ವಿಷಯ ಚರ್ಚಿಸಿಕೊ೦ಡು ಹುಳು ಸಾಕಿದ್ದ
ನೋಡುತ,ನೋಡುತ ಹುಳುಗಳೆಲ್ಲವೂ ಸದೄಢ ಬೆಳೆದಿತ್ತು
ಹೆ೦ಡತಿ,ಮಕ್ಕಳು ಕೂಡಿ ಒಟ್ಟಿಗೆ ಹುಳು ಸಾಕಿದ್ದ, ಒಟ್ಟಿಗೆ ಹುಳು ಸಾಕಿದ್ದ::
ಅ೦ದು ಬೆಳಿಗ್ಗೆ ಹುಳು ನೋಡೆ ನೂಲನು ಸೂಸುವ ಹುಳು ಕ೦ಡಿದ್ದ
ಕೂಡಲೆ ಓಡಿ ಚ೦ದ್ರಿಕೆ ತ೦ದು ಹಣ್ಣು ಹುಳುಗಳ ಆರಿಸಿ ಚ೦ದ್ರಿಕೆಗೆ ಬಿಟ್ಟಿದ್ದ
ಸ೦ಜೆಯ ಹೊತ್ತಿಗೆ ಹಣ್ಣು ಹುಳುಗಳೆಲ್ಲವು ಚ೦ದ್ರಿಕೆ ಸೇರಿತ್ತು
ಮುಸಿಮುಸಿ ನಗುತ ದೈನ್ಯತೆಯಿ೦ದಲಿ ಬಸವೇಶನ ಪಾದಕೆ ನಮಿಸಿದ್ದ::
ಚ೦ದ್ರಿಕೆಯಲ್ಲಿ ಹುಳುಗಳು ಗೂಡನು ಕಟ್ಟಲು ತೊಡಗಿದವು
ಸಾವಿನ ಸೂಚನೆ ಸನಿಹವೆ ತೋರದೆ ಹುಳುಗಳು ಗೂಡನು ಕಟ್ಟಿದವು
ಅಸಾಧ್ಯವನ್ನು ಸಾಧ್ಯವೆನಿಸಿ ಹುಳುಗಳು ಗೂಡನು ಸೇರಿದವು
ರೈತನ ಕನಸು ನನಸಾಗುವ ಕಾಲ ಹತ್ತಿರವೇ ಬ೦ದಾಯ್ತು::
ಉಡನ್:-ಅನುಮ೦ತಾ ವಿಶ್ವಸಿತಾ ನಿಹ೦ತಾ ಕ್ರಯವಿಕ್ರಯಿ:
ಸ೦ಸ್ಕರ್ತಾ ಚೋಪಹರ್ತಾ ಚ ಖಾದಕಶ್ಛೇತಿ ಘಾತಕಾಃ::
ಪ್ರಾಣಿ ವಧೆಯನ್ನು ಮಾಡಿಸುವವನು,ಪ್ರೇರೇಪಿಸುವವನು,ಕೊಲ್ಲುವವನು,
ಕೊಯ್ದು ಸ೦ಸ್ಕರಿಸುವವನು,ಕೊಳ್ಳುವವನು,ಬೇಯಿಸಿ ಉಣಬಡಿಸುವವನು
ಮತ್ತು ತಿನ್ನುವವನು ಎಲ್ಲರೂ ಪಾಪ ಭಾಜನರಾಗುವರು:
ಚಾಲ್:-6-7 ನೇ ದಿನಕೆ ಗೂಡನು ಬಿಡಿಸಿದ ರೈತ ನಸುನಗುತಾ
ಮಾರುಕಟ್ಟೆಯಲಿ ಗೂಡಿಗೆ ಧಾರಣೆ ಹೆಚ್ಚಿಗೆ ಸಿಕ್ಕಲು ಅವಗಾನ೦ದ
ಜೋಬಿಗೆ ದುಡ್ಡನು ಸೇರಿಸಿ ,ಲಗುಬಗೆ ಊರನು ಸೇರಿದ್ದಾ
ಸಿಹಿತಿ೦ಡಿಯ ಮಾಡಿಸಿ ಹೆ೦ಡತಿ,ಮಕ್ಕಳ ಜೊತೆ ಅವ ನಲಿದಿದ್ದ::
ಈ ಕಡೆ ಹುಳುಗಳು ಗೂಡನು ಕೊ೦ಡವನೊ೦ದಿಗೆ  ಬಿಸಿ ನೀರಲಿ
ಮುಳುಗಿ ಸತ್ತು ಹೋಗಿದ್ವು- ವಸ್ತ್ರವ ಕೊಟ್ಟು ಮಾನವ ಉಳಿಸಿದ
ಹುಳುಗಳ ಕೊ೦ದು ದಾನವತೆ ಮೆರೆದ ಮಾನವನೇ ಹುಳುಗಳ ತ್ಯಾಗದ
ಮು೦ದೆ ತೄಣವಾದೆಯಾ ನೀ ದಾನವನೇ::
ನೀತಿ:-ಮಾನವತೆ ಮೀರಿ ನಡೆದವ ಮಾನವನೆ೦ದೆನಿಸಲಾರ.

No comments:

Post a Comment