Saturday 23 June 2012


ದೇವರೇ ನೀ ಎಲ್ಲಿರುವೆ ?
ಇದ್ದರೂ ನೀನೆಲ್ಲಿರುವೆ ?
ಕಣ್ಣು ಕಾಣಿಸದೆ, ಕಿವಿಯು ಕೇಳಿಸದೇ,
ಉಸಿರು ಆಡದೇ ನೀ ನೇಕಿರುವೆ ?
ಪಾಪ-ಪುಣ್ಯಗಳ ನೋಡುತ,ಸುಮ್ಮನೇ ನೀ ಏಕಿಹೆ ?
ಆ ತಿರುಪತಿ, ಆ ಶ್ರೀಶೈಲವು, ಆ ಮ೦ತ್ರಾಲಯವು ನಿನ್ನ ನೆಚ್ಚಿನ ತಾಣವಾದವೇ?
ಆ ಕಾಶಿಯು, ಆ ಧರ್ಮಸ್ಥಳವು, ಆ ಮಲೈಮಹದೇಶ್ವರ, ನಿನ್ನ ನೆಚ್ಚಿನ ಬೀಡಾದವೇ?
ಈ ಜನರ ಭಕ್ತಿಗೆ ನೀ ನೊಲಿಯದೇ ಏಕಿರುವೆ ?ನಿನ್ನ ಮೌನಕೇ ನಾನೇನು ತಿಳಿಯಲಿ!
ಒಮ್ಮೆ ನೀ ಕಾಣಿಸು, ಈ ಭುವಿಯಲಿರುವ ಅಕೃತ್ಯಗಳ ನೀ ಕೊನೆಗಾಣಿಸು!
ನೀನೇಕೆ ಮರೆತೆಯೋ ದುಷ್ಟಶಿಕ್ಷಣೆ- ಶಿಷ್ಟರಕ್ಷಣೆ ಹೊಣೆಯನೂ!
ಗೋವು ವ್ಯಾಘ್ರಗಳು ಆದವೇ, ಸಿ೦ಹ ನರಿಗಳು ಆದವೇ,
ಈ ತೋಳತೆಕ್ಕೆಯಲಿ ಆ ಸ್ತ್ರೀ ಸ೦ಕುಲ ನಲುಗಿತೇ!
ಈ ವಿಶ್ವಕೇ ಆ ಗ್ರಹಣದ ಬಾಧೆ ವಕ್ಕರಿಸಿತೇ!
ಕಣ್ಣು ಕಾಣಿಸದೆ, ಕಿವಿಯು ಕೇಳಿಸದೇ,
ಉಸಿರು ಆಡದೇ ನೀ ನೇಕಿರುವೆ ?
ದೇವರೇ ನೀ ಎಲ್ಲಿರುವೆ ?
ಇದ್ದರೂ ನೀನೆಲ್ಲಿರುವೆ ?
ನಾನೇ ನಿತ್ಯನೂ, ನಾನೆ ಸೃಷ್ಠಿಯೂ,ನಾನೆ ಕಾಲನೂ ಎ೦ದು ಹೇಳಿವೆ ವೇದವೂ!
ನಿರ್ವಿವೇಧ್ಯವೂ ನಿನ್ನ ಮಾತದೂ ನಾನೊಪ್ಪುವೇ!
ನೀನು ಬೇಗನೇ ಅವತರಿಸದಲ್ಲದೇ ಭುವಿಯ ಕ್ಷೋಭೆಯು ನಿಲ್ಲದೂ!
ನೀನು ಬೇಗನೇ ಸ೦ಹರಿಸದಲ್ಲದೇ ದುಷ್ಠತನವದು ತೊಲಗದೂ!
ಎಲ್ಲಿ ಇಟ್ಟಿರುವೆ ತ್ರಿಶೂಲವ! ಎಲ್ಲಿ ಇಟ್ಟಿರುವೆ ಢಮರುಗ!
ನೀನೆಲ್ಲಿ ಇಟ್ಟಿರುವೆ ಮನವೆಲ್ಲವ! ನೀನೆಲ್ಲಿ ಇಟ್ಟಿರುವೆ ಗಮನವೆಲ್ಲವ!
ತೋರು ನಿನ್ನ ಪ್ರತಾಪವ ! ತೆರೆಯೊ ನಿನ್ನ ನಡುಗಣ್ಣನೂ!
ಈ ಭುವಿಯ ಜನತೆಯಾ ಉಳಿಸೋ ನೀ , ಮುಗ್ಧ ಜನರ ನೀ ಸಲಹೊ ನೀ!!
ದೇವರೇ ನೀ ಎಲ್ಲಿರುವೆ ?
ಇದ್ದರೂ ನೀನೆಲ್ಲಿರುವೆ ?
ಕಣ್ಣು ಕಾಣಿಸದೆ, ಕಿವಿಯು ಕೇಳಿಸದೇ,
ಉಸಿರು ಆಡದೇ ನೀ ನೇಕಿರುವೆ ?!!

No comments:

Post a Comment