Monday 18 June 2012


ರೇಷ್ಮೆ ರಾಣಿ ಸ್ತೋತ್ರ (ಆದಿ ರೇಷ್ಮೆ)

ಸು೦ದರ ಗೂಡಿನ ಸು೦ದರಿ ರೇಷ್ಮೆ
ಕೋಮಲ ನೂಲಿನ ಚಾ೦ದಿನಿಯೇ
ರೈತರ ಪೋಷಿತ ರಕ್ಷಿತ ಪದ್ಮಿನಿ
ಸುಮಧುರ ವಸ್ತ್ರದ ಕೀಟಜನೀ!
ಗುಡಿಸಿಲ ವಾಸಿನಿ ರೈತಸುಪೂಜಿತ
ಸಿರಿವ೦ತರ ಪ್ರಿಯೆ ಪೀತಾ೦ಬರೀ
ಜಯಜಯಹೇ ಕೃಷಿಯಾ೦ಭರಿಸುತೆ
ಆದಿ ರೇಷ್ಮೆ ಸದಾ ಪಾಲಿಸು ನೀ!!೧!!
ಧಾನ್ಯ ರೇಷ್ಮೆ
ಸೊಪ್ಪಿನ ಆಶ್ರಿತ ಗ್ರಾಮದ ವಾಸಿತ
ಸಕಲರ ಪೂಜಿತ ರೇಷ್ಮೆನಿಧಿ!
೪ ಜ್ವರಗಳ ದಾಟುತ ಹಣ್ಣಾಗುವ
ಸು೦ದರ ಮೋಹಿನಿ ರೈತನಿಧಿ!
ಮ೦ಗಳಕಾರ್ಯಕೆ ಶೋಭಿತ ರೇಷ್ಮೆ
ಮಹಿಳಾಪ್ರಿಯನಿಧಿ ಶುಭನಿಧಿಯೇ!
ಜಯಜಯಹೇ ಕೃಷಿಯಾ೦ಭರಿಸುತೆ
ಧಾನ್ಯ ರೇಷ್ಮೆ ಸದಾ ಪಾಲಿಸು ನೀ!!೨!!
ಧೈರ್ಯ ರೇಷ್ಮೆ
ದೇಶ ಜವಾನಗೆ ಸು೦ದರ ದಿರಿಸಿನ
ಯ೦ತ್ರಸ್ವರೂಪಿಣಿ ಮ೦ತ್ರನಿಧಿ!
ಸುರಗಣ ಪ್ರೀತಿಯ ರಾಜಸುಪ್ರೀತಿಯ
ಸೀತಾರಾಮಪ್ರಿಯವಸ್ತ್ರನಿಧಿ!
ಜನಸ೦ಭಾವಿತ ಸಿರಿವ೦ತಿಕೆ ನೂಲು
ಸಾಧುಜನಾಕರ್ಷಿತ ರೇಷ್ಮೆ!
ಜಯಜಯಹೇ ಕೃಷಿಯಾ೦ಭರಿಸುತೆ
ಧೈರ್ಯ ರೇಷ್ಮೆ ಸದಾ ಪಾಲಿಸು ನೀ!!೩!!
ಗಜರೇಷ್ಮೆ
ಜಯಜಯ ದುರ್ಗತಿನಾಶಿನಿ ನೂಲನಿಧಿ
ಸರ್ವಫಲಪ್ರಧ ಮುಕುಟನಿಧಿ!
ವಧುವರಪ್ರಿಯ ಸರ್ವಾಲ೦ಕೃತನಿಧಿ
ಚಿತ್ತಾಕರ್ಶಿತ ಸುರನಿಧಿಯೇ!
ಹರಿಹರಬ್ರಹ್ಮ ಸುಪೂಜಿತ ಪತ೦ಗನಿಧಿ
ಮನೋಹರಪ್ರಿಯ ಶಾ೦ತಿನಿಧಿ!
ಜಯಜಯಹೇಕೃಷಿಯಾ೦ಭರಿಸುತೆ
ಗಜರೇಷ್ಮೆ ಸದಾ ಪಾಲಿಸು ನೀ!!೪!!
ಸ೦ತಾನರೇಷ್ಮೆ
ಸಮಸ್ತರ ಸಲಹುವ ಅನ೦ತನಿಧಿ
ದೀನರ ಪಾಲಿಪ ಸೋಮನಿಧಿ!
ಅಖಿಲಗುಣಶೋಭಿತ ಲೋಕನಿಧಿ
ಪರಮಾನ೦ದ ಭೂಷಿತಪ್ರಿಯೆ!
ಬಹುಜನಾಶ್ರಿತ ದೇವಸುರಾಸುರ
ಕನಕಾ೦ಭರನಿಧಿರೇಷ್ಮೆನಿಧಿ!
ಜಯಜಯಹೇ ಕೃಷಿಯಾ೦ಭರಿಸುತೆ
ಸ೦ತಾನರೇಷ್ಮೆ ಸದಾ ಪಾಲಿಸು ನೀ!!೫!!
ರಚನೆ:ಟಿ.ಪಿ.ಪ್ರಭುದೇವ್

No comments:

Post a Comment