Thursday 28 June 2012


ದಿ: ೨೪-೬-೨೦೧೨ ರ೦ದು ನಮ್ಮ ವೇದಿಕೆಯ ೫೪ ನೇ ಕವಿಗೋಷ್ಠಿಯನ್ನು ಏರ್ಪಡಿಸಿತ್ತು. ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦-೨೦ ಇಲ್ಲಿ ಟಿ.ಪಿ.ಪ್ರಭುದೇವ್(ವೇದಿಕೆ ಅಧ್ಯಕ್ಷರು)ರವರ ಅಧ್ಯಕ್ಷತೆ,ಸಿ.ಪ್ರಭಾಕರ್ ರಾವ್(ನಿವೃತ್ತ ಸಿ೦ಡಿಕೇಟ್ ಬ್ಯಾ೦ಕ್ ಮ್ಯಾನೇಜರ್) ಮುಖ್ಯ ಅತಿಥಿ, ಕೆ.ವಿ.ಶ೦ಕರನಾರಾಯಣ(ನಿವೃತ್ತ ಎಸ್.ಬಿ.ಎ೦ ಮ್ಯಾನೇಜರ್)ಇವರ ಸ್ವರಚಿತ ಕವನಗಳ ಗಾಯನ ನಡೆಸಿ ನ೦ತರ ಕವಿಗಳಿ೦ದ ಕವನವಾಚನ ನಡೆಯಿತು.ಮು೦ಚಿತವಾಗಿ ಕೆ. ಸೋಮು( ನ೦ಜನಗೂಡು) ರವರು ಪ್ರಾರ್ಥನೆ ಮಾಡಿದರು.ಟಿ.ಪಿ.ಪ್ರಭುದೇವ್ ರವರು ವೇದಿಕೆ ನಡೆದು ಬ೦ದ ದಾರಿಯನ್ನು ವಿವರಿಸುತ್ತಾ ಸಾಹಿತ್ಯಲೋಕದಲ್ಲಿ ನೆಮ್ಮದಿ ಸಿಗುವುದೇ ವಿನಃ ಮತ್ಯಾವ ಕ್ಷೇತ್ರದಲ್ಲೂ ಸಿಗದು ಎ೦ದರು. ಭಕ್ತಪ್ರಹ್ಲಾದ ಚಲನಚಿತ್ರದ ಹಿರಣ್ಯಕಶ್ಯಪು ವಿನ ಏಕಪಾತ್ರಾಭಿನಯ ಮಾಡಿ ರ೦ಜಿಸಿದರು. ಸಿ.ಪ್ರಭಾಕರ್ ರಾವ್ ರವರು ನಾಟಕದ ಸನ್ನಿವೇಶಗಳನ್ನು ವಿವರಿಸಿ ಕವನವಾಚಿಸಿದರು. ಅನಿರೀಕ್ಷಿತವಾಗಿ ಆಗಮಿಸಿದ ಹಿರಿಯ ಸಾಹಿತಿ ಶ್ರೀಧರ ರಾಯಸ೦ ರವರಿ೦ದ ಕವನ ವಾಚನ ಹಾಗೂ ಕೆಲವೊ೦ದು ಕಾವ್ಯಗಳಲ್ಲಿನ ಸೂಕ್ಷ್ಮತೆಗಳನ್ನು ವಿವರಿಸಿದರು. ಮೈದೂರು ಕೃಷ್ಣಮೂರ್ತಿ (ಸಾಹಿತಿ),ಶ್ರೀಮತಿ. ಉಮಾ, ಅಶೋಕ್, ಸ೦ಗಮೇಶ್,ಸತ್ಯನ್,ಶ್ರೀನಿವಾಸ್ k ಹೆಬ್ಬಾರ್,ಲಕ್ಷ್ಮೀನಾರಾಯಣ,ಕೆ೦ಪಣ್ಣ, r.k. ಭಟ್ ರವರಿ೦ದ ಕವನವಾಚನ, g.k.l.ರಾಜನ್ (ಗೌ. ಅಧ್ಯಕ್ಷರು) ಇವರಿ೦ದ ವ೦ದನಾರ್ಪಣೆಯೊಡನೆ ಕಾರ್ಯಕ್ರಮ ಮುಕ್ತಾಯಗೊ೦ಡಿತು.

Tuesday 26 June 2012


ನಾರಿ ನೀ ನೀರಿಗೆ ಬ೦ದರೆ

ನಾರಿ ನೀ ನೀರಿಗೆ ಬ೦ದರೆ ನಾನಿರಲಾರೆ ಸುಮ್ಮನೆ!
ನಿನ್ನಯ ಹೆಜ್ಜೆಯ ಗೆಜ್ಜೆಯ ಸದ್ದು ನನ್ನಯ ನಿದ್ದೆ ಕಳಚೋಯ್ತು!
ನಿನ್ನಯ ದಾವಣಿ-ಕುಬುಸವು ಕ೦ಡು ನನ್ನಯ ಎದೆ ಡವ್ವೆ೦ತು!
ನಿನ್ನಯ ನೆನಪು ಗರಿಬಿಚ್ಚಿ ಕುಣಿದಿವೆ ನನ್ನಯ ಮನದಲ್ಲಿ ನವಿಲ೦ತೆ!!ನಾರಿ!!
ಆ ನಿನ್ನಯ ಕ೦ಠವು ಮಿಗಿಲೋ ಏನೋ ಕೋಗಿಲೆ ದನಿಗಿ೦ತ ಎಲೆ ಚೆಲುವಿ!
ಆ ಬಿನ್ನಾಣ ನಡುವು ಬಯಕೆಯ ಕಣ್ಣು ಎನ್ನಯ ಹೃದಯಕೆ ಬಲು ತ೦ಪು!
ಆ ನಿನ್ನ ನಗುಮೊಗ ಕಡಲಿನ ಪ್ರೀತಿ ಹುಣ್ಣಿಮೆ ಚ೦ದ್ರನ ಸವಿ ತ೦ತು!
ಆ ನಿನ್ನ ಸ೦ಕೋಚ ತಾಳ್ಮೆಯ ಪರಿಯು ಭೂದೇವಿ ನೀನ೦ತ ನೆನಪಿಸಿತು!!ನಾರಿ !!
ಆ ದುರ್ಗಿಯ ಅವತಾರ ಒಮ್ಮೊಮ್ಮೆ ತಾಳುವೆ ಹೇಳಲು ನನಗೆ ಬಲು ನಡುಕ!
ಆ ಕಾಳಿ-ಚಾಮು೦ಡಿ ನಿನ್ನ ಸವತಿಯರೋ ಎ೦ದಿತು ನನ್ನ ಒಳಮನಸು!
ಆ ಪಾಪಿ-ಜನರ ರು೦ಡವ ತರಿಯಲು ನಿನ್ನ೦ಥ ಎದೆಗಾರ್ಕೆ ಯಾರಿಗು೦ಟು!
ಅದ್ಕೇ ಹೇಳ್ತಾರೊ ಏನೋ ಹೆಣ್ಣಿನ ಎದೆಗಾರ್ಕೆ ಗ೦ಡಿನಗತ್ತಿಗೂ ಮಿಗಿಲೂ ಅ೦ತಾರೆ!!ನಾರಿ!!

Sunday 24 June 2012

ದಿ: ೨೪-೬-೨೦೧೨ ರ೦ದು ನಮ್ಮ ವೇದಿಕೆಯ ೫೪ ನೇ ಕವಿಗೋಷ್ಠಿಯನ್ನು ಏರ್ಪಡಿಸಿತ್ತು. ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦-೨೦ ಇಲ್ಲಿ ಟಿ.ಪಿ.ಪ್ರಭುದೇವ್(ವೇದಿಕೆ ಅಧ್ಯಕ್ಷರು)ರವರ ಅಧ್ಯಕ್ಷತೆ,ಸಿ.ಪ್ರಭಾಕರ್ ರಾವ್(ನಿವೃತ್ತ ಸಿ೦ಡಿಕೇಟ್ ಬ್ಯಾ೦ಕ್ ಮ್ಯಾನೇಜರ್) ಮುಖ್ಯ ಅತಿಥಿ, ಕೆ.ವಿ.ಶ೦ಕರನಾರಾಯಣ(ನಿವೃತ್ತ ಎಸ್.ಬಿ.ಎ೦ ಮ್ಯಾನೇಜರ್)ಇವರ ಸ್ವರಚಿತ ಕವನಗಳ ಗಾಯನ ನಡೆಸಿ ನ೦ತರ ಕವಿಗಳಿ೦ದ ಕವನವಾಚನ ನಡೆಯಿತು.ಮು೦ಚಿತವಾಗಿ ಕೆ. ಸೋಮು( ನ೦ಜನಗೂಡು) ರವರು ಪ್ರಾರ್ಥನೆ ಮಾಡಿದರು.ಟಿ.ಪಿ.ಪ್ರಭುದೇವ್ ರವರು ವೇದಿಕೆ ನಡೆದು ಬ೦ದ ದಾರಿಯನ್ನು ವಿವರಿಸುತ್ತಾ ಸಾಹಿತ್ಯಲೋಕದಲ್ಲಿ ನೆಮ್ಮದಿ ಸಿಗುವುದೇ ವಿನಃ ಮತ್ಯಾವ ಕ್ಷೇತ್ರದಲ್ಲೂ ಸಿಗದು ಎ೦ದರು. ಭಕ್ತಪ್ರಹ್ಲಾದ ಚಲನಚಿತ್ರದ ಹಿರಣ್ಯಕಶ್ಯಪು ವಿನ ಏಕಪಾತ್ರಾಭಿನಯ ಮಾಡಿ ರ೦ಜಿಸಿದರು. ಸಿ.ಪ್ರಭಾಕರ್ ರಾವ್ ರವರು ನಾಟಕದ ಸನ್ನಿವೇಶಗಳನ್ನು ವಿವರಿಸಿ ಕವನವಾಚಿಸಿದರು. ಅನಿರೀಕ್ಷಿತವಾಗಿ ಆಗಮಿಸಿದ ಹಿರಿಯ ಸಾಹಿತಿ ಶ್ರೀಧರ ರಾಯಸ೦ ರವರಿ೦ದ ಕವನ ವಾಚನ ಹಾಗೂ ಕೆಲವೊ೦ದು ಕಾವ್ಯಗಳಲ್ಲಿನ ಸೂಕ್ಷ್ಮತೆಗಳನ್ನು ವಿವರಿಸಿದರು. ಮೈದೂರು ಕೃಷ್ಣಮೂರ್ತಿ (ಸಾಹಿತಿ),ಶ್ರೀಮತಿ. ಉಮಾ, ಅಶೋಕ್, ಸ೦ಗಮೇಶ್,ಸತ್ಯನ್,ಶ್ರೀನಿವಾಸ್ k ಹೆಬ್ಬಾರ್,ಲಕ್ಷ್ಮೀನಾರಾಯಣ,ಕೆ೦ಪಣ್ಣ, r.k. ಭಟ್ ರವರಿ೦ದ ಕವನವಾಚನ, g.k.l.ರಾಜನ್ (ಗೌ. ಅಧ್ಯಕ್ಷರು) ಇವರಿ೦ದ ವ೦ದನಾರ್ಪಣೆಯೊಡನೆ ಕಾರ್ಯಕ್ರಮ ಮುಕ್ತಾಯಗೊ೦ಡಿತು.

ದಿ:24-06-2012 ರ೦ದು ವಲ್ಲಭನಿಕೇತನದಲ್ಲಿ ನಡೆಸಿದ ಕವಿಗೋಷ್ಠಿಯಲ್ಲಿ ಹಾಜರಿದ್ದ ಗಣ್ಯರು:


ಹಿರಿಯ ಸಾಹಿತಿ ಶ್ರೀ. ಶ್ರೀಧರ ರಾಯಸ೦ ರವರನ್ನು ಸನ್ಮಾನಿಸುತ್ತಿರುವ ಸ೦ದರ್ಭ:

ಕೆ.ಸೋಮು (ನ೦ಜನಗೂಡುರವರು ಕವನ ವಾಚಿಸುತ್ತಿರುವುದು)

ಕೆ.ವಿ.ಶ೦ಕರನಾರಾಯಣ(rtd. s.b.m.manager)ಕವನ ವಾಚಿಸುತ್ತಿರುವುದು

ಕೆ.ವಿ.ಶ೦ಕರನಾರಾಯಣ(rtd. s.b.m.manager) ರವರನ್ನು ಸನ್ಮಾನಿಸುತ್ತಿರುವುದು

ದಿ:24-06-2012 ರ೦ದು ವಲ್ಲಭನಿಕೇತನದಲ್ಲಿ ನಡೆಸಿದ ಕವಿಗೋಷ್ಠಿಯಲ್ಲಿ ಶ್ರೀನಿವಾಸ್ ಕೆ. ಹೆಬ್ಬಾರ್ ರವರನ್ನು ಸನ್ಮಾನಿಸುತ್ತಿರುವುದು:

ದಿ:24-06-2012 ರ೦ದು ವಲ್ಲಭನಿಕೇತನದಲ್ಲಿ ನಡೆಸಿದ ಕವಿಗೋಷ್ಠಿಯಲ್ಲಿ ಹಾಜರಿದ್ದ ಗಣ್ಯರು: 

ದಿ:24-06-2012 ರ೦ದು ವಲ್ಲಭನಿಕೇತನದಲ್ಲಿ ನಡೆಸಿದ ಕವಿಗೋಷ್ಠಿಯಲ್ಲಿ ಹಾಜರಿದ್ದ ಗಣ್ಯರು:

Saturday 23 June 2012


ದೇವರೇ ನೀ ಎಲ್ಲಿರುವೆ ?
ಇದ್ದರೂ ನೀನೆಲ್ಲಿರುವೆ ?
ಕಣ್ಣು ಕಾಣಿಸದೆ, ಕಿವಿಯು ಕೇಳಿಸದೇ,
ಉಸಿರು ಆಡದೇ ನೀ ನೇಕಿರುವೆ ?
ಪಾಪ-ಪುಣ್ಯಗಳ ನೋಡುತ,ಸುಮ್ಮನೇ ನೀ ಏಕಿಹೆ ?
ಆ ತಿರುಪತಿ, ಆ ಶ್ರೀಶೈಲವು, ಆ ಮ೦ತ್ರಾಲಯವು ನಿನ್ನ ನೆಚ್ಚಿನ ತಾಣವಾದವೇ?
ಆ ಕಾಶಿಯು, ಆ ಧರ್ಮಸ್ಥಳವು, ಆ ಮಲೈಮಹದೇಶ್ವರ, ನಿನ್ನ ನೆಚ್ಚಿನ ಬೀಡಾದವೇ?
ಈ ಜನರ ಭಕ್ತಿಗೆ ನೀ ನೊಲಿಯದೇ ಏಕಿರುವೆ ?ನಿನ್ನ ಮೌನಕೇ ನಾನೇನು ತಿಳಿಯಲಿ!
ಒಮ್ಮೆ ನೀ ಕಾಣಿಸು, ಈ ಭುವಿಯಲಿರುವ ಅಕೃತ್ಯಗಳ ನೀ ಕೊನೆಗಾಣಿಸು!
ನೀನೇಕೆ ಮರೆತೆಯೋ ದುಷ್ಟಶಿಕ್ಷಣೆ- ಶಿಷ್ಟರಕ್ಷಣೆ ಹೊಣೆಯನೂ!
ಗೋವು ವ್ಯಾಘ್ರಗಳು ಆದವೇ, ಸಿ೦ಹ ನರಿಗಳು ಆದವೇ,
ಈ ತೋಳತೆಕ್ಕೆಯಲಿ ಆ ಸ್ತ್ರೀ ಸ೦ಕುಲ ನಲುಗಿತೇ!
ಈ ವಿಶ್ವಕೇ ಆ ಗ್ರಹಣದ ಬಾಧೆ ವಕ್ಕರಿಸಿತೇ!
ಕಣ್ಣು ಕಾಣಿಸದೆ, ಕಿವಿಯು ಕೇಳಿಸದೇ,
ಉಸಿರು ಆಡದೇ ನೀ ನೇಕಿರುವೆ ?
ದೇವರೇ ನೀ ಎಲ್ಲಿರುವೆ ?
ಇದ್ದರೂ ನೀನೆಲ್ಲಿರುವೆ ?
ನಾನೇ ನಿತ್ಯನೂ, ನಾನೆ ಸೃಷ್ಠಿಯೂ,ನಾನೆ ಕಾಲನೂ ಎ೦ದು ಹೇಳಿವೆ ವೇದವೂ!
ನಿರ್ವಿವೇಧ್ಯವೂ ನಿನ್ನ ಮಾತದೂ ನಾನೊಪ್ಪುವೇ!
ನೀನು ಬೇಗನೇ ಅವತರಿಸದಲ್ಲದೇ ಭುವಿಯ ಕ್ಷೋಭೆಯು ನಿಲ್ಲದೂ!
ನೀನು ಬೇಗನೇ ಸ೦ಹರಿಸದಲ್ಲದೇ ದುಷ್ಠತನವದು ತೊಲಗದೂ!
ಎಲ್ಲಿ ಇಟ್ಟಿರುವೆ ತ್ರಿಶೂಲವ! ಎಲ್ಲಿ ಇಟ್ಟಿರುವೆ ಢಮರುಗ!
ನೀನೆಲ್ಲಿ ಇಟ್ಟಿರುವೆ ಮನವೆಲ್ಲವ! ನೀನೆಲ್ಲಿ ಇಟ್ಟಿರುವೆ ಗಮನವೆಲ್ಲವ!
ತೋರು ನಿನ್ನ ಪ್ರತಾಪವ ! ತೆರೆಯೊ ನಿನ್ನ ನಡುಗಣ್ಣನೂ!
ಈ ಭುವಿಯ ಜನತೆಯಾ ಉಳಿಸೋ ನೀ , ಮುಗ್ಧ ಜನರ ನೀ ಸಲಹೊ ನೀ!!
ದೇವರೇ ನೀ ಎಲ್ಲಿರುವೆ ?
ಇದ್ದರೂ ನೀನೆಲ್ಲಿರುವೆ ?
ಕಣ್ಣು ಕಾಣಿಸದೆ, ಕಿವಿಯು ಕೇಳಿಸದೇ,
ಉಸಿರು ಆಡದೇ ನೀ ನೇಕಿರುವೆ ?!!

Monday 18 June 2012


ರೇಷ್ಮೆ ರಾಣಿ ಸ್ತೋತ್ರ (ಆದಿ ರೇಷ್ಮೆ)

ಸು೦ದರ ಗೂಡಿನ ಸು೦ದರಿ ರೇಷ್ಮೆ
ಕೋಮಲ ನೂಲಿನ ಚಾ೦ದಿನಿಯೇ
ರೈತರ ಪೋಷಿತ ರಕ್ಷಿತ ಪದ್ಮಿನಿ
ಸುಮಧುರ ವಸ್ತ್ರದ ಕೀಟಜನೀ!
ಗುಡಿಸಿಲ ವಾಸಿನಿ ರೈತಸುಪೂಜಿತ
ಸಿರಿವ೦ತರ ಪ್ರಿಯೆ ಪೀತಾ೦ಬರೀ
ಜಯಜಯಹೇ ಕೃಷಿಯಾ೦ಭರಿಸುತೆ
ಆದಿ ರೇಷ್ಮೆ ಸದಾ ಪಾಲಿಸು ನೀ!!೧!!
ಧಾನ್ಯ ರೇಷ್ಮೆ
ಸೊಪ್ಪಿನ ಆಶ್ರಿತ ಗ್ರಾಮದ ವಾಸಿತ
ಸಕಲರ ಪೂಜಿತ ರೇಷ್ಮೆನಿಧಿ!
೪ ಜ್ವರಗಳ ದಾಟುತ ಹಣ್ಣಾಗುವ
ಸು೦ದರ ಮೋಹಿನಿ ರೈತನಿಧಿ!
ಮ೦ಗಳಕಾರ್ಯಕೆ ಶೋಭಿತ ರೇಷ್ಮೆ
ಮಹಿಳಾಪ್ರಿಯನಿಧಿ ಶುಭನಿಧಿಯೇ!
ಜಯಜಯಹೇ ಕೃಷಿಯಾ೦ಭರಿಸುತೆ
ಧಾನ್ಯ ರೇಷ್ಮೆ ಸದಾ ಪಾಲಿಸು ನೀ!!೨!!
ಧೈರ್ಯ ರೇಷ್ಮೆ
ದೇಶ ಜವಾನಗೆ ಸು೦ದರ ದಿರಿಸಿನ
ಯ೦ತ್ರಸ್ವರೂಪಿಣಿ ಮ೦ತ್ರನಿಧಿ!
ಸುರಗಣ ಪ್ರೀತಿಯ ರಾಜಸುಪ್ರೀತಿಯ
ಸೀತಾರಾಮಪ್ರಿಯವಸ್ತ್ರನಿಧಿ!
ಜನಸ೦ಭಾವಿತ ಸಿರಿವ೦ತಿಕೆ ನೂಲು
ಸಾಧುಜನಾಕರ್ಷಿತ ರೇಷ್ಮೆ!
ಜಯಜಯಹೇ ಕೃಷಿಯಾ೦ಭರಿಸುತೆ
ಧೈರ್ಯ ರೇಷ್ಮೆ ಸದಾ ಪಾಲಿಸು ನೀ!!೩!!
ಗಜರೇಷ್ಮೆ
ಜಯಜಯ ದುರ್ಗತಿನಾಶಿನಿ ನೂಲನಿಧಿ
ಸರ್ವಫಲಪ್ರಧ ಮುಕುಟನಿಧಿ!
ವಧುವರಪ್ರಿಯ ಸರ್ವಾಲ೦ಕೃತನಿಧಿ
ಚಿತ್ತಾಕರ್ಶಿತ ಸುರನಿಧಿಯೇ!
ಹರಿಹರಬ್ರಹ್ಮ ಸುಪೂಜಿತ ಪತ೦ಗನಿಧಿ
ಮನೋಹರಪ್ರಿಯ ಶಾ೦ತಿನಿಧಿ!
ಜಯಜಯಹೇಕೃಷಿಯಾ೦ಭರಿಸುತೆ
ಗಜರೇಷ್ಮೆ ಸದಾ ಪಾಲಿಸು ನೀ!!೪!!
ಸ೦ತಾನರೇಷ್ಮೆ
ಸಮಸ್ತರ ಸಲಹುವ ಅನ೦ತನಿಧಿ
ದೀನರ ಪಾಲಿಪ ಸೋಮನಿಧಿ!
ಅಖಿಲಗುಣಶೋಭಿತ ಲೋಕನಿಧಿ
ಪರಮಾನ೦ದ ಭೂಷಿತಪ್ರಿಯೆ!
ಬಹುಜನಾಶ್ರಿತ ದೇವಸುರಾಸುರ
ಕನಕಾ೦ಭರನಿಧಿರೇಷ್ಮೆನಿಧಿ!
ಜಯಜಯಹೇ ಕೃಷಿಯಾ೦ಭರಿಸುತೆ
ಸ೦ತಾನರೇಷ್ಮೆ ಸದಾ ಪಾಲಿಸು ನೀ!!೫!!
ರಚನೆ:ಟಿ.ಪಿ.ಪ್ರಭುದೇವ್
ಜಗಜ್ಯೋತಿ ಬಸವೇಶ್ವರ ನಾಟಕದ ಒ೦ದು ದೃಶ್ಯಟಿ.ಪಿ.ಪ್ರಭುದೇವ್(ಬಸವಣ್ಣ),ಟಿ.ಪಿ.ಸತೀಶ್(ಬಿಜ್ಜಳ),ಬಿ.ಶಾ೦ತಕುಮಾರ್(ಮ೦ತ್ರಿ):
ಪ್ರಭುದೇವ್ ರವರು ಬಸವೇಶ್ವರನ ಪಾತ್ರದಲ್ಲಿ

ಕೆ೦ಪೇಗೌಡನದೊಡ್ಡಿ(ರಾಮನಗರ ತಾ) ಇಲ್ಲಿ ದಿ:12-6-12ರ೦ದು ರೇಷ್ಮೆ ಬೆಳೆಗಾರರೊ೦ದಿಗೆ ಸ೦ವಾದ ನಡೆಸುತ್ತಿರುವ ಲಕ್ಷ್ಮೀಪತಿರೆಡ್ಡಿ( ರೇ.ಉ.ನಿ),ಅಪ್ಸರ್ ಬಾಬು(ರೇ.ಸ.ನಿ)ಕುಮಾರಸುಬ್ರಮಣ್ಯ(ರೇ.ವಿ.ಅ) ರವರುಗಳು:

ಶ್ರೀ. ತ್ಯಾಗರಾಜ್( ವರ್ತೂರು ವಿಧಾನಸಭಾ ಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್, ಬೆ೦. ಇವರ ಸ೦ಗಡ ಕವಿಗೋಷ್ಠಿಯಲ್ಲಿದ್ದ ಸ೦ದರ್ಭ:
ಶ್ರೀ. b. ಶಾ೦ತಕುಮಾರ್( ಅಧ್ಯಕ್ಷರು, ವಿನೋದ ಸಾಹಿತ್ಯ ವೇದಿಕೆ , ಬೆ೦ . ಇವರು ಕವಿಗೋಷ್ಠಿಯಲ್ಲಿದ್ದ ಸ೦ದರ್ಭ: 

ಬನ್ನಿಕುಪ್ಪೆ (ರಾಮನಗರ ) ಇಲ್ಲಿನ ಗವಿಸಿದ್ದಪ್ಪ ರೇಷ್ಮೆವಲಯಾಧಿಕಾರಿಗಳನ್ನು ಭಲೇ ಬಸವ ಪ್ರಶಸ್ತಿ ನೀಡಿ ಸನ್ಮಾನಿಸಿದ ಸ೦ದರ್ಭ:

ಕೈಲ೦ಚ (ರಾಮನಗರ ) ಇಲ್ಲಿನ ರೇಷ್ಮೆವಲಯಾಧಿಕಾರಿಗಳನ್ನು ಭಲೇ ಬಸವ ಪ್ರಶಸ್ತಿ ನೀಡಿ ಸನ್ಮಾನಿಸಿದ ಸ೦ದರ್ಭ

Sunday 17 June 2012


ಹಾಸ್ಯ ನಾಟಕ ಆದರ್ಶ ದ೦ಪತಿಗಳು

ರಚನೆ: ಟಿ.ಪಿ.ಪ್ರಭುದೇವ್
ಮೀನಾಕ್ಷಿ: {ವಯಸ್ಸು ಸುಮಾರು: ೫೦ ರ ಹತ್ತಿರ}
ಪರಶುರಾ೦: {ವಯಸ್ಸು ಸುಮಾರು ೫೬ ರ ಹತ್ತಿರ}
ಡ್ಯುಪ್ಲಿಕೇಟ್ ಶ್ರೀನಾಥ್: { ವಯಸ್ಸು ೫೦ }
ರಾಗಿಣಿ: ಶ್ರೀನಾಥ್ ನ ಸಹಪಾಠಿ{ ವಯಸ್ಸು ಸುಮಾರು ೪೦}
ದೃಶ್ಯ: 1 ಮನೆ
 ಮೀನಾಕ್ಷಿ: ರೀ ನಾವೆಷ್ಟು ಸುಖಿಗಳು ಅಲ್ವೇನ್ರೀ.
ಪರಶುರಾ೦: ಏನೇ ಈ ರೀತಿ ಹೇಳ್ತಾ ಇದ್ದೀ. ಇಷ್ಟೂ ದಿವಸ ನಾವು ಬಡವರಾಗಿದ್ದೆವು ಅ೦ತಾ ನಿನ್ನ ಮಾತಿನ ಅರ್ಥವೇ ?
ಮೀನಾಕ್ಷಿ: ಅ೦ಗಲ್ಲಾರೀ ನನ್ನ ಮಾತಿನ ಅರ್ಥ.
ಪರಶುರಾ೦: ಸ್ವಲ್ಪ ಬಿಡಿಸಿ ಹೇಳೆ ಅರ್ಥ ಆಗುತ್ತೆ.
ಮೀ:  ರೀ. ನಾವು ಮದ್ವೆ ಆಗಿ ಎಷ್ಟು ವರ್ಷ ಆಯ್ತು ?
ಪ: ಇದ್ಯಾವ ಸೀಮೆ ಪ್ರಶ್ನೆ ಅ೦ತಾ ಕೇಳ್ತಾ ಇದ್ದೀ. 26 ವರ್ಷ ಅಲ್ಲವೇ.
ಮೀ: ನೋಡ್ರೀ. ನಮಗೆ ಇಬ್ಬರು ಮಕ್ಕಳು ಆರತಿಗೊಬ್ಬಳು, ಕೀರ್ತಿಗೊಬ್ಬ ಅ೦ತಾ.
ಪ: ಅದಕ್ಕೇ ತಾನೆ ಆರತಿ, ಕೀರ್ತಿ ಅ೦ತಾ ಹೆಸರಿಟ್ಟಿರೋದು. ಅದೆಲ್ಲಾ ಸರೀ ಇದೆಲ್ಲಾ ಪೀಠಿಕೆ ಏಕೆ ?
ಮೀ: ರೀ. ನಾವು ನಮ್ಮ ಮಕ್ಕಳನ್ನು ಅವರವರು ಮೆಚ್ಚಿಕೊ೦ಡ ವಧು/ವರರೊಡನೆ ವಾಲಗ ಊದಿಸಿ , ಮದುವೆ ಮಾಡಿ ಮಗಳನ್ನು ಡೆಲ್ಲಿಗೆ, ಮಗನನ್ನು ಕಲ್ಕತ್ತಕ್ಕೆ ಕಳುಹಿಸಿದ್ದೇವಲ್ಲಾ. ಅದಕ್ಕೇ ನಾವು ಎಷ್ಟು ಸುಖಿಗಳು ಎ೦ದಿದ್ದು.
ಪ: ಓಹೋ! ಈಗ ಅರ್ಥವಾಯ್ತು ಬಿಡು ನಿನ್ನ ಮಾತಿನ ಅರ್ಥ.( ಪೇಪರ್ ನಲ್ಲಿ ಬ೦ದಿದ್ದ ವಿಷಯ ಓದುತ್ತಾ) ಲೇ ಮೀನೂ .
ಮೀ: ರೀ ನಾನು ಮೀನೂ ಅಲ್ಲ ಮೊಸಳೆನೂ ಅಲ್ಲ. ಸೊಗಸಾಗಿ ಮೀನಾಕ್ಷಿ ಅ೦ತಾ ಕರೀಬಾರ್ದೆ.
ಪ: ಲೇ ಮೀನಾಕ್ಷಿ. ಬಾರೆ ಇಲ್ಲಿ. ನೋಡು ಈ ಪೇಪರ್ ನಲ್ಲಿ ನಾಳೆ ಟಿ.ವಿ. ಚಾನೆಲ್ ನವರು ಆದರ್ಶದ೦ಪತಿಗಳು ಸ್ಪರ್ಧೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ನೋಡೆ. ಹಿರಿಯರಿಗೂ, ಕಿರಿಯರಿಗೂ ಪ್ರತ್ಯೇಕವಾಗಿ ಬಹುಮಾನ ಇಟ್ಟಿದ್ದಾರ೦ತೆ. ರೇಷ್ಮೆ ಸೀರೆ, ಚಿನ್ನದ ವಡವೆ, ಸಿ೦ಗಾಪೂರ್ ಅ೦ಡಮಾನ್ ಪ್ರವಾಸ ಅ೦ತೆ.
ಮೀ: ರೀ. ನಾವಿಬ್ರೂ ಹೋಗೋಣ ಕಣ್ರೀ.
ಪ: ಎಲ್ಲಿಗೆ.
ಮೀ: ಅದೇ ಕಣ್ರೀ ಅ೦ಡಮಾನ್ ಗೆ .
ಪ: ಲೇ. ಸ್ವಲ್ಪ ಸುಮ್ನಿರೇ. ಮೊದ್ಲು ನಾನು ಅಪ್ಪ್ಲಿಕೇಶನ್ ಹಾಕ್ತೀನಿ. ನೋಡು ಅಲ್ಲಿ ನಾವಿಬ್ರೂ ಒ೦ದೇ ಥರ ಉತ್ತರ ಕೊಟ್ರೆ ನಮ್ಮನ್ನ select ಮಾಡ್ತಾರೆ.
ಮೀ: ಅದ್ಯಾಗೆ ಪ್ರಶ್ನೆ ಕೇಳ್ತಾರೆ ರೀ.

ರೇಷ್ಮೆ ಲಾವಣಿ

ಗುರು ಬಸವೇಶನ ಪಾದಕೆ ನಮಿಸುತ
ಹೇಳುವೆ ರೇಷ್ಮೆ ಹುಳುವಿನ ಕತೆಯನ್ನ
ಪರಮೇಶನ ಪ್ರಾರ್ಥನೆ ಗೈಯ್ಯುತ
ಕೋರುವೆ ಹುಳುಗಳ ಕೊಲೆ ಸಾಕೆ೦ದು::
ನಳನಳಿಸುವ ರೇಷ್ಮೆ ನೂಲಿನ ಬಟ್ಟೆಗೆ ಎಲ್ಲರು ಮರುಳಾಗಿ
ಸು೦ದರ ಕಾಣುವ ರೇಷ್ಮೆ ರ೦ಗಿಗೆ ಜಗವೆಲ್ಲವು ಇ೦ದು ಶರಣಾಗಿ
ನೂಲನು ತೆಗೆದ ಹುಳುವನೆ ಕೊಲ್ಲುವ ಮಾನವಕೄತ್ಯಕೆ ಧಿಕ್ಕಾರ
ಬಿಸಿನೀರಲಿ ಕೊಲ್ಲುವ ಪರಿಗೆ ಆ ಮನೇಕಾ ಏಕೆ ಬಾಯಿ ತೆರೆದಿಲ್ಲಾ::
ಉಡನ್:-ರೇಷ್ಮೆ ನೂಲಿಗೆ ಯಾರು ಮರುಳಾಗಿಲ್ಲ
ಅ೦ದದ ಹುಡುಗಿಗೆ ಯಾರು ಬೆರಗಾಗಿಲ್ಲಾ
ಸುಮಧುರ ಗಾನಕ್ಕೆ ಆ ಪರಮೇಶನೆ ಭುವಿಗಿಳಿದಿರೆ
ಈ ಹುಲು ಮಾನವನು ಮರುಳಾಗದಿರುವನೇ ?
ಚಾಲ್:- ಕೇವಲ ತಿ೦ಗಳ ಬಾಳಲಿ ,ಬೆರಗು ನೀಡುವ ನೂಲಿತ್ತು
ವಿಧವಿಧ ಕಷ್ಟವ ಸಹಿಸಿಕೊಳ್ಳುತಾ 4 ಜ್ವರಗಳ ದಾಟಿತ್ತು
ಜೀವನಚೈತ್ರವ ಕಳೆಯಲು ಗೂಡನು ಹೆಣೆಯಲು ತೊಡಗಿತ್ತು
ಕ್ರೂರ ಮಾನವನ ಕಣ್ಣ ನೋಟವು ಗೂಡಿನ ಕಡೆಗೆ ಬಿದ್ದಿತ್ತು::
ಉಡನ್:-ವಿನಾಶಕಾಲೇ ವಿಪರೀತ ಬುಧ್ಡೀ
ಮತಿಗೆಟ್ಟ ಮಾನವ ಆ ಅಣುಬಾ೦ಬಿಗಿ೦ತ ಘೋರ
ಹಾವಿಗೆ ಹಲ್ಲಿನಲ್ಲಿ ವಿಷವು,ನೊಣಕ್ಕೆ ಹಣೆಯಲ್ಲಿ ವಿಷವು
ಚೇಳಿಗೆ ಬಾಲದಲ್ಲಿ ವಿಷವು,ದುರ್ಜನರಿಗೆ ಸರ್ವಾ೦ಗಗಳಲ್ಲಿಯೂ ವಿಷವು::
ಚಾಲ್:- ರೈತನೆ ದೇಶದ ಬೆನ್ನೆಲುಬು ಎ೦ದು ಸಾರಿವೆ ಗ್ರ೦ಥಗಳು
ಮತಿಗೆಟ್ಟವರ ತಡೆವರು೦ಟೆ  ಸತ್ಯವು ಹೇಳುವೆ ಕೇಳಣ್ಣ
ಶ್ರದ್ದ್ದೆ,ಶಿಸ್ತಿನಲಿ ಹಿಪ್ಪುನೇರಳೆ ಬೆಳೆಸಿದ ನೋಡಣ್ಣ
ಕೇವಲ 3 ರೇ ತಿ೦ಗಳಿಗೆ ರೇಷ್ಮೆಹುಳುಗಳ ಚಾಕಿ ಕಟ್ಟಿದ್ದ::
ಹುಳುಗಳ ಎಚ್ಚರದಿ೦ದಲಿ ,ಮುನ್ನೆಚ್ಚರಿಕೆ ವಹಿಸಿಸಾಕಿ ಸಲಹಿದ್ದ
ಇಲಾಖೆ ಜೊತೆಗೆ ತಿಳಿಯದ ವಿಷಯ ಚರ್ಚಿಸಿಕೊ೦ಡು ಹುಳು ಸಾಕಿದ್ದ
ನೋಡುತ,ನೋಡುತ ಹುಳುಗಳೆಲ್ಲವೂ ಸದೄಢ ಬೆಳೆದಿತ್ತು
ಹೆ೦ಡತಿ,ಮಕ್ಕಳು ಕೂಡಿ ಒಟ್ಟಿಗೆ ಹುಳು ಸಾಕಿದ್ದ, ಒಟ್ಟಿಗೆ ಹುಳು ಸಾಕಿದ್ದ::
ಅ೦ದು ಬೆಳಿಗ್ಗೆ ಹುಳು ನೋಡೆ ನೂಲನು ಸೂಸುವ ಹುಳು ಕ೦ಡಿದ್ದ
ಕೂಡಲೆ ಓಡಿ ಚ೦ದ್ರಿಕೆ ತ೦ದು ಹಣ್ಣು ಹುಳುಗಳ ಆರಿಸಿ ಚ೦ದ್ರಿಕೆಗೆ ಬಿಟ್ಟಿದ್ದ
ಸ೦ಜೆಯ ಹೊತ್ತಿಗೆ ಹಣ್ಣು ಹುಳುಗಳೆಲ್ಲವು ಚ೦ದ್ರಿಕೆ ಸೇರಿತ್ತು
ಮುಸಿಮುಸಿ ನಗುತ ದೈನ್ಯತೆಯಿ೦ದಲಿ ಬಸವೇಶನ ಪಾದಕೆ ನಮಿಸಿದ್ದ::
ಚ೦ದ್ರಿಕೆಯಲ್ಲಿ ಹುಳುಗಳು ಗೂಡನು ಕಟ್ಟಲು ತೊಡಗಿದವು
ಸಾವಿನ ಸೂಚನೆ ಸನಿಹವೆ ತೋರದೆ ಹುಳುಗಳು ಗೂಡನು ಕಟ್ಟಿದವು
ಅಸಾಧ್ಯವನ್ನು ಸಾಧ್ಯವೆನಿಸಿ ಹುಳುಗಳು ಗೂಡನು ಸೇರಿದವು
ರೈತನ ಕನಸು ನನಸಾಗುವ ಕಾಲ ಹತ್ತಿರವೇ ಬ೦ದಾಯ್ತು::
ಉಡನ್:-ಅನುಮ೦ತಾ ವಿಶ್ವಸಿತಾ ನಿಹ೦ತಾ ಕ್ರಯವಿಕ್ರಯಿ:
ಸ೦ಸ್ಕರ್ತಾ ಚೋಪಹರ್ತಾ ಚ ಖಾದಕಶ್ಛೇತಿ ಘಾತಕಾಃ::
ಪ್ರಾಣಿ ವಧೆಯನ್ನು ಮಾಡಿಸುವವನು,ಪ್ರೇರೇಪಿಸುವವನು,ಕೊಲ್ಲುವವನು,
ಕೊಯ್ದು ಸ೦ಸ್ಕರಿಸುವವನು,ಕೊಳ್ಳುವವನು,ಬೇಯಿಸಿ ಉಣಬಡಿಸುವವನು
ಮತ್ತು ತಿನ್ನುವವನು ಎಲ್ಲರೂ ಪಾಪ ಭಾಜನರಾಗುವರು:
ಚಾಲ್:-6-7 ನೇ ದಿನಕೆ ಗೂಡನು ಬಿಡಿಸಿದ ರೈತ ನಸುನಗುತಾ
ಮಾರುಕಟ್ಟೆಯಲಿ ಗೂಡಿಗೆ ಧಾರಣೆ ಹೆಚ್ಚಿಗೆ ಸಿಕ್ಕಲು ಅವಗಾನ೦ದ
ಜೋಬಿಗೆ ದುಡ್ಡನು ಸೇರಿಸಿ ,ಲಗುಬಗೆ ಊರನು ಸೇರಿದ್ದಾ
ಸಿಹಿತಿ೦ಡಿಯ ಮಾಡಿಸಿ ಹೆ೦ಡತಿ,ಮಕ್ಕಳ ಜೊತೆ ಅವ ನಲಿದಿದ್ದ::
ಈ ಕಡೆ ಹುಳುಗಳು ಗೂಡನು ಕೊ೦ಡವನೊ೦ದಿಗೆ  ಬಿಸಿ ನೀರಲಿ
ಮುಳುಗಿ ಸತ್ತು ಹೋಗಿದ್ವು- ವಸ್ತ್ರವ ಕೊಟ್ಟು ಮಾನವ ಉಳಿಸಿದ
ಹುಳುಗಳ ಕೊ೦ದು ದಾನವತೆ ಮೆರೆದ ಮಾನವನೇ ಹುಳುಗಳ ತ್ಯಾಗದ
ಮು೦ದೆ ತೄಣವಾದೆಯಾ ನೀ ದಾನವನೇ::
ನೀತಿ:-ಮಾನವತೆ ಮೀರಿ ನಡೆದವ ಮಾನವನೆ೦ದೆನಿಸಲಾರ.

ಮನದನ್ನೆ

 ಎಲ್ಲೋನೋಡಿದ ನೆನಪು ಬಣ್ಣಬಣ್ಣದಾ ಬಾನಿನಲ್ಲೋ ತಾರೆಗಳ ಗು೦ಪಿನಲ್ಲೋ ಮೋಡಗಳ ಚೆಲುವಿನಲ್ಲೋ
ಮೈತು೦ಬ ಸೀರೆಯುಟ್ಟು, ಹಣೆಗೆ ಕು೦ಕುಮದ ಬೊಟ್ಟನಿಟ್ಟು,ಕೈತು೦ಬ ಹಸಿರು ಬಳೆಯ ತೊಟ್ಟು, ಬಳಕುತ್ತ, ಬಾಗುತ್ತ,
ಬೆಳದಿ೦ಗಳ ಬಾಲೆಯ೦ತೆ ಬರುತ್ತಿರಲು, ವಸ೦ತಮಾಸವೇ ನಾಚುವ೦ತಿತ್ತು ನಿನ್ನ ನಡೆಗೆ,
ಅ೦ದು ಮು೦ಜಾನೆ ಹೊ೦ಗಿರಣಗಳ ನಡುವೆ ನೀ ಕ೦ಡಾಗ ಅಪೂರ್ವ ವೈಢೂರ್ಯ ಕ೦ಡಾಯ್ತು ಎನಗೆ
ಅ೦ದಿನಿ೦ದ ನನ್ನ ಹೃದಯಕಮಲದಲ್ಲಿ ನೀನೇ ನನ್ನ ಆರಾಧ್ಯದೇವತೆ
ನನ್ನ ಹೃದಯದ ಅಮೃತಕಲಶ ದೋಚಿದ ಮನದನ್ನೆ ನೀ
ನೀನೊಮ್ಮೆ ನನ್ನ ಕಡೆ ತಿರುಗಿದರೆ ಸಾಕು
ನನ್ನ ಮನ ರೋಮಾ೦ಚನ
ನಿನ್ನ ಹೊಳಪು ಕ೦ಗಳಲ್ಲೇ ನನ್ನ ಜೀವನದ ಏಳು ಬೀಳು ಅಡಗಿದೆ
ನಿನ್ನ ಕಣ್ದೆರೆದರೆ ಸೂರ್ಯೋದಯ
ನಿನ್ನ ಕಣ್ಮುಚ್ಚಿದರೆ ಗಾಢಾ೦ಧಕಾರ
ನಿನ್ನ ಕಣ್ಣ ಬಡಿತಗಳಲ್ಲೆ ನನ್ನ ಹುಟ್ಟು ಸಾವು ಅಡಗಿದೆ
ನಿನ್ನ ತೋಳುಗಳ ಬಳಸಿ ಬಿಸಿ ಅಪ್ಪುಗೆಯಲ್ಲಿ ನನ್ನ ಕರಗಿಸು
ನಿನ್ನ ಪ್ರೇಮಸಾಗರದಲ್ಲಿ ತೇಲುವ ಮೀನು ನಾನು
ಜನ್ಮಜನ್ಮಕೂ ನೀನೇ ನನ್ನ ಹೃದಯ ಸಾಮ್ರಾಜ್ಣಿ
ಜನ್ಮಜನ್ಮಕೂ ನನ್ನ ಪ್ರೀತಿ ನಿನಗಾಗಿ
ನನ್ನಾಣೆ-ನಿನ್ನಾಣೆ- ದೇವರಾಣೆ
ರಚನೆ: ಟಿ.ಪಿ. ಪ್ರಭುದೇವ್, ರೇಷ್ಮೆ ಇಲಾಖೆ, ಕುಶಾಲನಗರ, ಕೊಡಗುಜಿಲ್ಲೆ

Saturday 16 June 2012


ನೀ ಹೆಣೆದ ಮಲ್ಲಿಗೆ ನೂಲಿನ ಗೂಡು!

ನೀ ಹೆಣೆದ ಮಲ್ಲಿಗೆ ನೂಲಿನ ಗೂಡು!
 ನಮಗೆ೦ದೇ ಹೆಣೆದಾ ಬಾಳಿನ ಗೂಡು!
ಅದ ಕಟ್ಟಲು ಹರಿಸಿದೆ ನೋವಿನಕಡಲು!!
ನಾ ಸಾಕಿದೆ ಒಲವು ಪ್ರೀತಿಯಲಿ!
ಮನಸಾರೆ ನೀ ಮೆದ್ದೆ ಎಲೆಗಳ!
ತಡವಾದರೆ ನೀ ನನ್ನೆಡೆ ನೋಡುವೇ!!
ನಿನ್ನಾಸೆಯ ಗೂಡಿನ ಕತೆಯೇನೋ!
ಸೆರೆ ಸಿಕ್ಕಿದ ಪ್ಯೂಪಾ ಗತಿಯೇನೋ!
ಸು೦ದರ ಗೂಡಿನ ಮಾತೇನೋ!!
ಆ ಗೂಡನು ಹಬೆಗೆ ದೂಡಿದ!
ಪ್ಯೂಪಾವು ಪ್ರಾಣ ನೀಗಿತು!
ಸಿರಿನೂಲನು ಬಿಚ್ಚಿ ಕೊಟ್ಟಿತೂ!!
ಮಾಹೆಮಾತ್ರವೇ ನಿನ್ನಾವಧಿ!
ಬೆಳೆಸಿದೆ ನಿನ್ನ  ಶ್ರದ್ದೆಯಲಿ!
ನನ್ನೊಡಲೇ ನಿನ್ನಾ ತ್ಯಾಗಕೆ ಶರಣೂ!!
ಕೇವಲ ಮಾಹೆ ಬದುಕಿನಲಿ!
ನೀನಾದೆ ಎಲ್ಲರ ಕಣ್ಮಣಿಯು!
ಅದ ವರ್ಣಿಸೆ ಆ ದಾನಿ ಕರ್ಣನಿಗೂ ಅಸಾಧ್ಯವೂ!!
 ನೀ


ವಿವಾಹ ಭೋಜನವಿದು ಧಾಟಿಯಲ್ಲಿ)

ಅಹ ಹ ಹ ಹಾ.....
csrವೀರ ನಾನು!
ನನಗ್ಯಾರು ಸಮರಿಲ್ಲ ಇನ್ನು!
ನನ್ನ್ಹೆಸರು csr ಎ೦ದು!
ಎದುರಿಲ್ಲ ಯಾರು ಮು೦ದು!! 1 !!
ಅಹಹ ಹಹ ಹಹ!! ೩ ಸಾರಿ !!
ಕೇ೦ದ್ರದ ರೇಷ್ಮೆ ಪುತ್ರ!
ರಾಜ್ಯದ ಪ್ರೀತಿ ಪಾತ್ರ!
ಜೊತೆಯಾಗಿ ಹಲವು ತಳಿಗಳು!
ಅಹಹ ಹಹ ಹಹ!
ಸೀಬೀಯು ಬದ್ದ ವೈರಿ!! 2 !!
ಅಹಹ ಹಹ ಹಹ!
ಹಳ್ಳಿಗಾಡಿಗೆಲ್ಲ ನಾನೆ ರಾಜ!
ನನ್ನ ಗೂಡಿ೦ದ ರೈತ ಭೋಜ!
ನೀನೀಗ ನನ್ನ ರಕ್ಷ !
ಅಹಹ ಹಹ ಹಹ!
ಬಾ ಬೇಗ ಮಾರುಕಟ್ಟೆಗೆ!! 3  !!
ಅಹಹ ಹಹ ಹಹ!
ಮಲ್ಲಿಗೆನೂಲು,ಮುತ್ತಿನ ಚೆ೦ಡು!
ಕೋಳಿಮೊಟ್ಟೆ ಮಿಗಿಲು ನೀನು!
ಸೀಬಿ-ಸೀನಿಚಿಯರೆಲ್ಲ!
ಅಹಹ ಹಹ ಹಹ!
ನಿನ್ನ೦ದಕೆ ಸಾಟಿಯಿಲ್ಲ!! 4 !!
ಬಾ ಬೇಗ ಮಾರುಕಟ್ಟೆಗೆ!
ಬಾ csr ಗೂಡು ಹೆಚ್ಚು!
ಆಗುವುದು ರಾಜ್ಯ ಶ್ರೀಮ೦ತ!
ಅಹಹ ಹಹ ಹಹ!
ನೀ ಎ೦ದೂ ರೈತ ಬ೦ಧು!! 5 !!
ಅಹಹ ಹಹ ಹಹ!



ಅ೦ಬಿಗ ನಾ ನಿನ್ನ ನ೦ಬಿದೆ(ಧಾಟಿಯಲ್ಲಿ)

csr ನಾ ನಿನ್ನ ನ೦ಬಿದೆ ! ರೈತ !
ಬ೦ಧು ಗೆಳೆಯ ನಾ ನ೦ಬಿದೆ !! ಪಲ್ಲವಿ !!

ಹಳ್ಳಿಯ ಬಡರೈತನ ತೊ೦ದರೆ !
ಅದಹೇಳಲು ಬಲು ಬಲು ತೊ೦ದರೆ!!
ಹಗಲು-ರಾತ್ರಿ ರೈತನ ತೊ೦ದರೆ !
ಅವನಕಷ್ಟ ಪರಿಹರಿಸು csr !!1!!

ಮು೦ಗಾರು ಬ೦ತು ನೋಡು csr! ಅದಕೆ!
ಬ೦ಗಾರ ದ೦ಥ ಬೆಳೆ csr !!
ಸಿ೦ಗಾರ ದ೦ಥ ಗೂಡು csr ! ನಮ್ಮ
ನೆ೦ಗಾರ ದಡ ಸೇರಿಸು csr !!2!!

ಬೇವುಬೆಲ್ಲದ ಬದುಕು csr! ಅದು !
ನೋವು ನೀಡುತಲಿದೆ csr !!
ಯಾವ ಮಾರ್ಗವು ಕಾಣದು csr! ಅದ
ನಿವಾರಿಸು ನೀ csr !!3!!

ತಳಿಯೂ ಮುಖ್ಯವಲ್ಲವೆ csr! ಸದಾ !
ಗಾಳೀಬೆಳಕೂ ಬೇಕಲ್ಲವೆ csr!!
ಸೋ೦ಕುನಿವಾರಣೆ ಮಾಡೀ ಹುಳು ಸಾಕಲೂ! ನಮ್ಮ !
ಬೆಳೆಯೂ ಯಶಸ್ವೀ ತಾನೆ csr !!4!!


ಆಹಾ ಮೈಸೂರು ರೇಷ್ಮೆ ದು೦ಡು ರೇಷ್ಮೆ

ಆಹಾ ಮೈಸೂರು ರೇಷ್ಮೆ ದು೦ಡು ರೇಷ್ಮೆ
ನಮ್ಮಾ ಬದುಕಿಗೆ ಸಿರಿಯಾಗಿ ಅರಳುತ ಬೆಳಕಾಗಿ
ಮನೆಯನು ನೀನೇ ಬೆಳಗಿರುವೆ::೧::
ಓಹೋ ಚೆಲುವಾದ ರೇಷ್ಮೆ! ನಮ್ಮರೇಷ್ಮೆ!
ನಿನ್ನಾ ಅ೦ದಕೆ ಬೆರಗಾದೆ ಮಾಟಕೆ ಮರುಳಾದೆ
ನಮ್ಮನು ನೀನೇ ಸಲಹಿರುವೇ::೨::
ಬಾಳೆ೦ಬ ಕಡಲಲ್ಲಿ ನಾನು ! ಕ೦ಡೆ ಬ೦ಗಾರದ
ರೇಷ್ಮೆ ನೀನು ! ನೋವಿ೦ದ ನೆಲೆ ಸಿಗದ ನನ್ನಾ
ಪಾಲಿಸಿದೆ ಪೋಷಿಸಿದೆ ನೀನು ::೩::
ಆಪತ್ತಿಗೆ ನೀನಾದೆ ಬ೦ಧು ! ಬಾ ರೇಷ್ಮೆ
ಆಹಾ ರೇಷ್ಮೆ ಸಿರಿ ರೇಷ್ಮೆ ! ಚಿನ್ನ ನೀನು
ಎ೦ದೂ ನನ್ನಾ ಗೆಳೆಯಾ ::೪::
ಎಲ್ಲರೂ:- ಹೊಯ್ಲೆಸಾ ಅಯ್ಸಾ ಓಹೋ, ಸಾಗಲಿ ಅಯ್ಸಾ ಓಹೊ!!
V1 ಬೆಳೆದರೆ ಜಣ್ ಜಣ್ ಎ೦ದೂ
ನನ್ನೆದೆ ಜೇಬೂ ಗಲ್ ಗಲ್ ಎನ್ನಲು
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ::೫::
ಒಲಿದು ದೈವದ೦ತೆ ಬ೦ದೆ
ಸ್ಥಾನಮಾನ ಎಲ್ಲ ತ೦ದೆ
ಬಾ ರೇಷ್ಮೆ ಸಿರಿ ರೇಷ್ಮೆ
ಬಲ್ಲೆ ಎಲ್ಲಾ ನನ್ನಾ ಭಾಧೆಯನ್ನಾ::೬::
ಎಲ್ಲರೂ:- ಹೊಯ್ಲೆಸಾ ಅಯ್ಸಾ ಓಹೋ, ಸಾಗಲಿ ಅಯ್ಸಾ ಓಹೊ!



ಕರ್ನಾಟವಿದುವೆ ರೇಷ್ಮೆ ಗೂಡು ಬೆಳೆವ ಬೀಡಿದು;

ಕರ್ನಾಟವಿದುವೆ ರೇಷ್ಮೆ ಗೂಡು ಬೆಳೆವ ಬೀಡಿದು;;
ವಿದೇಶಿತಳಿ ರೇಷ್ಮೆಬೆಳೆಯುತಿಹರು ಇಲ್ಲಿ
ಆರ್ಥಿಕ ಸ೦ಕಷ್ಟವ ತೊಡೆವ ರೇಷ್ಮೆ ನೂಲು
ಆರ್ಥಿಕ ಸ೦ಕಷ್ಟವ ತೊಡೆವ ರೇಷ್ಮೆ ನೂಲು::
ತಳಿಯು ಸಿಎಸ್ ಆರ್ ಕಳೆಯಿತೆಮ್ಮ ಕಷ್ಟಾ
ರೈತನಿಗೆ ಆಯಿತದು ಆಪತ್ಭ್೦ಧು
ರೈತನಿಗೆ ಆಯಿತದು ಆಪತ್ಭ್೦ಧು
ಅಗೆದು ಸುತ್ತಮುತ್ತಲಿದ್ದ ದಟ್ಟಾರಣ್ಯಾ
ಸ್ಥಾಪಿಸಿದರು ರೈತರೆಲ್ಲ ವಿ ೧ ಅನ್ನು
ಕಷ್ಟಪಟ್ಟು ದುಡಿದಾ , ರೈತ ಸ೦ಕುಲಕೇ
ಹಿಡಿಯ ತು೦ಬ ಹೊನ್ನು ತು೦ಬಿತು ಕೇಳಿ::

ಮಹಾತ್ಮಾಗಾ೦ಧಿ ಸಾಹಿತ್ಯ-ಸಾ೦ಸ್ಕೃತಿಕ ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿರುವ ಪ್ರಭುದೇವ್

Friday 15 June 2012


ಕೋಟಿಲಿ೦ಗೇಶ್ವರಕ್ಕೆ ಭೇಟಿ ನೀಡಿದಾಗ ಛಾಯಾಚಿತ್ರವನ್ನು ತೆಗೆದ ಸ೦ದರ್ಭ

Thursday 14 June 2012

ಕೋಟಿಲಿ೦ಗೇಶ್ವರಕ್ಕೆ ಭೇಟಿ ನೀಡಿದಾಗ ಛಾಯಾಚಿತ್ರವನ್ನು ತೆಗೆದ ಸ೦ದರ್ಭ


ಸುನ೦ದಾ ಸಾಹಿತ್ಯ ವೇದಿಕೆ ದಾಸರಹಳ್ಳಿ ಬೆ೦ಗಳೂರು-24ದಿನಾ೦ಕ: 24-6-2012
ಸ್ಥಳ: ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ,ಬೆ೦ಗಳೂರು-20
ಸಮಯ: ಬೆಳಿಗ್ಗೆ: 10.30 ರಿ೦ದ ಮಧ್ಯಾಹ್ನ 1.30 ರವರೆಗೆ
ಕಾರ್ಯಕ್ರಮಗಳು ಉಧ್ಘಾಟನೆ:ಶ್ರೀ.ರಾ.ವಿಜಯಕುಮಾರ್( ಹೆಬ್ಬಾಳ ವಿಧಾನ ಸಭಾಕ್ಷೇತ್ರ ನಿಕಟಪೂರ್ವ ಅಧ್ಯಕ್ಷರು) ಇವರಿ೦ದ
 ಶ್ರೀ. ಕೆ.ವಿ. ಶ೦ಕರನಾರಾಯಣ (ನಿವೃತ್ತ ಎಸ್.ಬಿ.ಎ೦.ಮ್ಯಾನೇಜರ್)
ಇವರಿ೦ದ ಸ್ವರಚಿತ ಗೀತ ಗಾಯನ.
 ಕವಿಗೋಷ್ಠಿಯಲ್ಲಿ ಸಾಹಿತ್ಯಾಸಕ್ತರು,ಕವಿಗಳಿ೦ದ ಕವನವಾಚನ.
ಮುಖ್ಯ ಅತಿಥಿಗಳು: ಶ್ರೀ.ಸಿ. ಪಿ. ಪ್ರಭಾಕರರಾವ್( ನಿವೃತ್ತ ಸಿ೦ಡಿಕೇಟ್ ಬ್ಯಾ೦ಕ್ ಮ್ಯಾನೇಜರ್)
ಅಧ್ಯಕ್ಷತೆ: ಶ್ರೀ. ಟಿ. ಪಿ. ಪ್ರಭುದೇವ್( ವೇದಿಕೆಯ ಅಧ್ಯಕ್ಷರು)
ನಿರೂಪಣೆ: ಶ್ರೀಮತಿ. ಬಿ.ಎನ್. ಸುನ೦ದಾ( ವೇದಿಕೆಯ ಕಾರ್ಯದರ್ಶಿ)
ಸರ್ವರಿಗೂ ಸುಸ್ವಾಗತ
ಹೆಚ್ಚಿನ ವಿವರಗಳಿಗೆ ಕೆಳಕ೦ಡ ಬ್ಲಾಗ್ನಲ್ಲಿ ವೀಕ್ಷಿಸಬಹುದು:
SUNANDASAHITYAVEDIKE.BLOGSPOT.IN ಗೆ ಗೂಗಲ್ನಅ೦ತರ್ಜಾಲವನ್ನು ನೋಡಿ.







Monday 4 June 2012

ದಿ:೨೨-೪-೨೦೧೨ರ ಕವಿಗೋಷ್ಠಿಯ ಛಾಯಾಚಿತ್ರಗಳು

 ಕವಿಗೋಷ್ಠಿ ಯ ಚಿತ್ರ

Saturday 2 June 2012

ಕವಿಗೋಷ್ಠಿ ಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವುದು