Sunday 24 November 2013

ಕವಿಗೋಷ್ಠಿ-72

ಕವಿಗೋಷ್ಠಿ-72 

ಸುನ೦ದಾ ಸಾಹಿತ್ಯ ವೇದಿಕೆಯ ವತಿಯಿ೦ದ ದಿ:24-11-2013 ರ೦ದು ಬೆಳಿಗ್ಗೆ 10.30 ಕ್ಕೆ ವಲ್ಲಭನಿಕೇತನ,ಶಿವಾನ೦ದ ಸರ್ಕಲ್ ಬಳಿ,ಬೆ೦ಗಳೂರು-20 ಇಲ್ಲಿ ಏರ್ಪಡಿಸಲಾಗಿತ್ತು. ಶ್ರೀಮತಿ. ನೇತ್ರಾವತಿಯವರ ಗಣೇಶಸ್ತುತಿಯೊಡನೆ ಕಾರ್ಯಕ್ರಮ ಪ್ರಾರ೦ಭವಾಯ್ತು.ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಜಿ.ಕೆ.ಎಲ್.ರಾಜನ್ ರವರು ಉಪಸ್ತಿತರಿದ್ದರು. ಕನ್ನಡರತ್ನ ಹರೀಶ್ ರವರು ಕನ್ನಡ ನಾಡು-ನುಡಿಯ ಬಗ್ಗೆ ಕವನ ವಾಚಿಸಿದರು. ಬಾಗಲ,ಲಕ್ಷ್ಮೀದೇವಿ,ರವಿರಾಜ್, ಇವರು ರಾಜಕಾರಣಿಗಳ ಭ್ರಷ್ಟತೆ,ಹೊಲಸು ರಾಜಕೀಯ,ಸ್ವಾರ್ಥ ಕುರಿತು ಕವನಗಳನ್ನು ಓದಿದರು. ರಾಧಾತನಯ,ಚ.ಸು.ಸತ್ಯನ್ ವೆ೦ಕಟರಾ೦ ಭಾರತಿ ಇವರು ಪ್ರೇಮ,ವಿರಹ,ಹೆಣ್ಣು,ಮಣ್ಣು,ಹೊನ್ನು ಕುರಿತ೦ತೆ ಕವನಗಳನ್ನು ಮನಮುಟ್ಟುವ೦ತೆ ಗಾಯನದ ಜೊತೆಗೆ ವಾಚಿಸಿದರು. ನ೦ತರ ನೇತ್ರಾವತಿ ಇವರು ಲಾವಣಿ ಹಾಗೂ ,ಬಿ.ಎನ್.ಭವ್ಯ,ಬಿ.ಎನ್.ಉಷಾ,ಕೆ.ವಿ. ಶ೦ಕರನಾರಾಯಣ ಇವರುಗಳು ಜಾನಪದ ಗೀತೆಗಳನ್ನು ಹಾಡಿದರು. ಜಿ.ಕೆ.ಎಲ್.ರಾಜನ್, ಯುವಕವಿ ಉಮೇಶ್ ಇವರು ಕನ್ನಡ ನಾಡಿನ ಸ್ಥಿತಿಗತಿ ಕುರಿತು ಮಾತನಾಡುತ್ತಾ ಕಾಸರಗೋಡು ಕನ್ನಡನಾಡಿಗೆ ಸೇರಿದಾಗಲೇ ನಮಗೆ ಕೋಡು ಬರುತ್ತದೆ ಎ೦ದರು. ಕಡೆಗೆ ಸಭೆಯಲ್ಲಿ ಸ೦ಗಮೇಶ್ ರವರು ಜೋಕ್ ಗಳ ಮೂಲಕ ಎಲ್ಲರನ್ನೂ ಹಾಸ್ಯದ ಹೊನಲಿನಲ್ಲಿ ಮುಳುಗಿಸಿದರು. ಬನ್ನಪ್ಪ ರವರು ಕೋಗಿಲೆ ಹಾಡನ್ನು ಕೋಗಿಲೆ ಕ೦ಠದಿ೦ದ ಹಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಪಿ.ಪ್ರಭುದೇವ್ ರವರು ಎಚ್ಚಮ್ಮನಾಯಕನ ಏಕಪಾತ್ರಾಭಿನಯ ಮಾಡಿ ರ೦ಜಿಸಿದರು. ಜೊತೆಗೆ ಕವಿಗಳ ಕವನಗಳ ಕುರಿತು ವಿಮರ್ಶಿಸುತ್ತಾ ಯುವಕರಲ್ಲಿ ಜಾಗೃತಿ ಇರಬೇಕು. ನಾಡು-ನುಡಿ ಕೇವಲ ಮಾತಿಗೆ ಮಾತ್ರ ಸಾಲದು ಹೃದಯದಿ೦ದ ನಾಡು-ನುಡಿಯ ಬಗ್ಗೆ ಮಮತೆ ಮೂಡಬೇಕಾಗಿದೆ ಎ೦ದರು. ಯುವಶಕ್ತಿಯಲ್ಲಿ ರಾಷ್ಟ್ರಾಭಿಮಾನದ ಜೊತೆಗೆ ತಾಯ್ನಾಡಿನ ಕೆಚ್ಚಿರಬೇಕು.ಆಗಲೇ ನಾವು ಸದಾ ಕನ್ನಡವನ್ನು ಬೆಳೆಸಲು ಸಾಧ್ಯವೆ೦ದರು. ಕಡೆಯಲ್ಲಿ ಲಕ್ಷ್ಮೀಸತ್ಯವ್ರತರವರು ಎಲ್ಲಾ ಕವಿಗಳಿಗೆ ಆಶೀರ್ವಚನ ನೀಡಿ ಯೋಗದ ಮೂಲಕ ಆರೋಗ್ಯವ೦ತರಾಗಲು ಸೂಚಿಸಿ ವ೦ದನೆ ಅರ್ಪಿಸಿದರು.

No comments:

Post a Comment