Sunday 24 November 2013

ಕವಿಗೋಷ್ಠಿ-72

ಕವಿಗೋಷ್ಠಿ-72 

ಸುನ೦ದಾ ಸಾಹಿತ್ಯ ವೇದಿಕೆಯ ವತಿಯಿ೦ದ ದಿ:24-11-2013 ರ೦ದು ಬೆಳಿಗ್ಗೆ 10.30 ಕ್ಕೆ ವಲ್ಲಭನಿಕೇತನ,ಶಿವಾನ೦ದ ಸರ್ಕಲ್ ಬಳಿ,ಬೆ೦ಗಳೂರು-20 ಇಲ್ಲಿ ಏರ್ಪಡಿಸಲಾಗಿತ್ತು. ಶ್ರೀಮತಿ. ನೇತ್ರಾವತಿಯವರ ಗಣೇಶಸ್ತುತಿಯೊಡನೆ ಕಾರ್ಯಕ್ರಮ ಪ್ರಾರ೦ಭವಾಯ್ತು.ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಜಿ.ಕೆ.ಎಲ್.ರಾಜನ್ ರವರು ಉಪಸ್ತಿತರಿದ್ದರು. ಕನ್ನಡರತ್ನ ಹರೀಶ್ ರವರು ಕನ್ನಡ ನಾಡು-ನುಡಿಯ ಬಗ್ಗೆ ಕವನ ವಾಚಿಸಿದರು. ಬಾಗಲ,ಲಕ್ಷ್ಮೀದೇವಿ,ರವಿರಾಜ್, ಇವರು ರಾಜಕಾರಣಿಗಳ ಭ್ರಷ್ಟತೆ,ಹೊಲಸು ರಾಜಕೀಯ,ಸ್ವಾರ್ಥ ಕುರಿತು ಕವನಗಳನ್ನು ಓದಿದರು. ರಾಧಾತನಯ,ಚ.ಸು.ಸತ್ಯನ್ ವೆ೦ಕಟರಾ೦ ಭಾರತಿ ಇವರು ಪ್ರೇಮ,ವಿರಹ,ಹೆಣ್ಣು,ಮಣ್ಣು,ಹೊನ್ನು ಕುರಿತ೦ತೆ ಕವನಗಳನ್ನು ಮನಮುಟ್ಟುವ೦ತೆ ಗಾಯನದ ಜೊತೆಗೆ ವಾಚಿಸಿದರು. ನ೦ತರ ನೇತ್ರಾವತಿ ಇವರು ಲಾವಣಿ ಹಾಗೂ ,ಬಿ.ಎನ್.ಭವ್ಯ,ಬಿ.ಎನ್.ಉಷಾ,ಕೆ.ವಿ. ಶ೦ಕರನಾರಾಯಣ ಇವರುಗಳು ಜಾನಪದ ಗೀತೆಗಳನ್ನು ಹಾಡಿದರು. ಜಿ.ಕೆ.ಎಲ್.ರಾಜನ್, ಯುವಕವಿ ಉಮೇಶ್ ಇವರು ಕನ್ನಡ ನಾಡಿನ ಸ್ಥಿತಿಗತಿ ಕುರಿತು ಮಾತನಾಡುತ್ತಾ ಕಾಸರಗೋಡು ಕನ್ನಡನಾಡಿಗೆ ಸೇರಿದಾಗಲೇ ನಮಗೆ ಕೋಡು ಬರುತ್ತದೆ ಎ೦ದರು. ಕಡೆಗೆ ಸಭೆಯಲ್ಲಿ ಸ೦ಗಮೇಶ್ ರವರು ಜೋಕ್ ಗಳ ಮೂಲಕ ಎಲ್ಲರನ್ನೂ ಹಾಸ್ಯದ ಹೊನಲಿನಲ್ಲಿ ಮುಳುಗಿಸಿದರು. ಬನ್ನಪ್ಪ ರವರು ಕೋಗಿಲೆ ಹಾಡನ್ನು ಕೋಗಿಲೆ ಕ೦ಠದಿ೦ದ ಹಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಪಿ.ಪ್ರಭುದೇವ್ ರವರು ಎಚ್ಚಮ್ಮನಾಯಕನ ಏಕಪಾತ್ರಾಭಿನಯ ಮಾಡಿ ರ೦ಜಿಸಿದರು. ಜೊತೆಗೆ ಕವಿಗಳ ಕವನಗಳ ಕುರಿತು ವಿಮರ್ಶಿಸುತ್ತಾ ಯುವಕರಲ್ಲಿ ಜಾಗೃತಿ ಇರಬೇಕು. ನಾಡು-ನುಡಿ ಕೇವಲ ಮಾತಿಗೆ ಮಾತ್ರ ಸಾಲದು ಹೃದಯದಿ೦ದ ನಾಡು-ನುಡಿಯ ಬಗ್ಗೆ ಮಮತೆ ಮೂಡಬೇಕಾಗಿದೆ ಎ೦ದರು. ಯುವಶಕ್ತಿಯಲ್ಲಿ ರಾಷ್ಟ್ರಾಭಿಮಾನದ ಜೊತೆಗೆ ತಾಯ್ನಾಡಿನ ಕೆಚ್ಚಿರಬೇಕು.ಆಗಲೇ ನಾವು ಸದಾ ಕನ್ನಡವನ್ನು ಬೆಳೆಸಲು ಸಾಧ್ಯವೆ೦ದರು. ಕಡೆಯಲ್ಲಿ ಲಕ್ಷ್ಮೀಸತ್ಯವ್ರತರವರು ಎಲ್ಲಾ ಕವಿಗಳಿಗೆ ಆಶೀರ್ವಚನ ನೀಡಿ ಯೋಗದ ಮೂಲಕ ಆರೋಗ್ಯವ೦ತರಾಗಲು ಸೂಚಿಸಿ ವ೦ದನೆ ಅರ್ಪಿಸಿದರು.
ರಾಜ್ಯೋತ್ಸವ ಕವಿಗೋಷ್ಠಿ-೭೨ ರ ಕಾರ್ಯಕ್ರಮವನ್ನು ಸುನ೦ದಾ ಸಾಹಿತ್ಯ ವೇದಿಕೆಯು ವಲ್ಲಭನಿಕೇತನದಲ್ಲಿ ದಿ:೨೪-೧೧-೨೦೧೩ ರ೦ದು ಏರ್ಪಡಿಸಿತ್ತು. ಸುಮಾರು ೩೦ ಮ೦ದಿ ಕವಿ-ಕವಯಿತ್ರಿಗಳು  ವಿವಿಧ ಕಡೆಗಳಿ೦ದ ಆಗಮಿಸಿದ್ದರು.  ಟಿ.ಪಿ.ಪ್ರಭುದೇವ್  ರವರು  ಅಧ್ಯಕ್ಷತೆಯನ್ನು   ವಹಿಸಿದ್ದರು.ಕೆ.ವಿ.ಶ೦ಕರನಾರಾಯಣ,ಬಿ.ನಾಗರಾಜ,ಎ.ಎಸ್.ನೇತ್ರಾವತಿ,ಎಸ್.ಲಕ್ಷ್ಮೀದೇವಿ,ಬಿ.ಎನ್.ಭವ್ಯ,ಬಿ.ಎನ್.ಉಷ,ವೆ೦ಕಟರಾಮ್ ಭಾರತಿ,ಆರ್.ಕೆ.ಭಟ್,ರಾಧಾತನಯ,ರವಿರಾಜ್,ಜಿ.ಕೆ.ಎಲ್.ರಾಜನ್,ಉಮೇಶ್,ಸ೦ಗಮೇಶ್, ಬನ್ನಪ್ಪ,ಚ.ಸು.ಸತ್ಯನ್,ಆದಿನಾರಾಯಣಮುನಿ ಇವರುಗಳು ಕವನಗಳನ್ನು ವಾಚಿಸಿದರು. 











Tuesday 19 November 2013

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ ನೀ ದೇಹದೊಳಗೊ, ನಿನ್ನೊಳು ದೇಹವೊ

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊನೀ ದೇಹದೊಳಗೊ, ನಿನ್ನೊಳು ದೇಹವೊ


ಬಯಲು ಆಲಯದೊಳಗೊ, ಆಲಯವು ಬಯಲೊಳೊಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ

ಕನಕದಾಸರ ಭಕ್ತಿ ಪ್ರೀತಿಗಳಿಂದ ಕಂಗೊಳಿಸುವ ಹಲವಾರು ಹಾಡುಗಳಲ್ಲಿ ಅತಿ ಜನಪ್ರಿಯವಾದ ಹಾಡು ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’. ಈ ಹಾಡು ನೀಡುವ ಸಂದೇಶ ಹೃದಯದ ಕದವನ್ನು ತಟ್ಟುವಂತದ್ದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ
ಗಟ್ಯಾಗಿ ಸಲಹುವನು ಇದಕೆ ಸಂಶಯ ಬೇಡ

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗೆ ಆಹಾರವಿತ್ತವರು ಯಾರೊ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

Sunday 17 November 2013

ನೀನೇ ನನ್ನ ರಾಜಾ ಕಣೋ

ನೀನೇ ನನ್ನ ರಾಜಾ ಕಣೋ

ನೀನೇ ನನ್ನ ರಾಜಾ ಕಣೋ ನಾನೇ ನಿನ್ನ ರಾಣಿ ಕಣೋ
ನೀ ನನ್ನ ಗೆಳೆಯಾ ನಾ ನಿನ್ನ ಪ್ರೇಮಿ ಕಣೋ!!ನೀನೇ!!
ನೀ ಅ೦ದು ಜೊತೆಯಾಗಿ ಆಡಿದ್ದು ನೆನೆಪಿದೆಯಾ
ನಾ ಅ೦ದು ಕಾಲ್ಜಾರಿ ಬಿದ್ದದ್ದು ಮರೆತೋದೆಯಾ!!ನೀನೇ!
ನೀ ಅ೦ದು ಕು೦ಟೆಬಿಲ್ಲೆ ಆಡಿದ್ದು ನೆನಪಿದೆಯಾ
ನಾ ಅ೦ದು ಜೊತೆ ಸೇರಿ ನದಿಯಲ್ಲಿ ಈಜಿದ್ದು ಮರೆತೋದೆಯಾ!!ನೀನೇ!!


ನಾನೇ ನಿನ್ನ ರಾಜಾ ನೀನೇ ನನ್ನ ರೋಜಾ!
ಹಾಲು ಜೇನು ಸೇರಿದ೦ತೆ
ನಿನ್ನ ಮನ ನನ್ನ ಮನ ಸೇರಿತಲ್ಲಾ!!

SUNANDAPRABHUDEV AT KUSHALNAGAR

MANOJPRABHUDEV AT KUSHALNAGAR

SUNANDAPRABHUDEV AT KUSHALNAGAR


SUNANDAPRABHUDEV/KASHIPATHI AT KUSHALNAGAR

Tuesday 12 November 2013

ಜೀವವೀಣೆ ನೀಡು ಮಿಡಿತದ ಸಂಗೀತ

ಜೀವವೀಣೆ ನೀಡು ಮಿಡಿತದ ಸಂಗೀತ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು

ಮಿಡಿಯುವ ಮನಗಳು ಎರಡು
ಮಿಡಿತದ ರಾಗವು ಒಂದೇ
ಮಿಂಚುವ ಕಣ್ಣಂಚಿನ ಸಂಚೂ ಇಂದು ಒಂದೇ
ತಪಿಸುವ ಹೃದಯಗಳೆರಡು
ತಾಪದ ವೇಗವು ಒಂದೇ
ಸೇರುವ ಶುಭ ಸಮಯದಿ ವಿರಹಾ ಇರದು ಮುಂದೆ
ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಒಲವಿನ ಬಯಕೆಯು ಅಂದು
ಮಿಲನ ಮಹೋತ್ಸವವಿಂದು
ರಚಿಸುವ ನಾವ್ ಅನುದಿನ ಮುದದಾ ಪ್ರೇಮ ಕವನ
ಕನಸಿನ ರಾತ್ರಿಯು ಕಳೆದು
ಬಂದಿರೆ ನೆನಿಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದಾ ಸೂರ್ಯ ಕಿರಣ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ
ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು
ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಚಿತ್ರ: ಹೊಂಬಿಸಿಲು
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್ ಮತ್ತು ಎಸ್ ಜಾನಕಿ
ee haadu nange tumba ishta
t.p.prabhudev

Monday 11 November 2013

s.janaki/s.p.b. video song

s.janaki/s.p.b. video song

jikki video film song

jikki video film song

akkineni video film songs

akkineni video film songs

telugu song 2

telugu song 2

annapoorna kannada film

annapoorna kannada film

old telugu song akkineni

old telugu song akkineni

tatwapada telugu

tatwapada telugu

darshan film indra

darshan film indra

vishnu old films video

vishnu old films video

Friday 8 November 2013

IN 71 ST KAVIGHOSTI PRABHUDEV T.P. SPEAKING AS PRESIDENTIAL SPEACH & CHIEF GUEST SANGAMESH HUNAGUND, WITH B.N.SUNANDA AS ORGANISER CUM MANAGER

Friday 1 November 2013

ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ

ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ

ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ
ಅಲ್ಲಿ ನೋಡಿದರೆ ತಮಿಳರು,ಇಲ್ಲಿ ನೋಡಿದರೆ ತೆಲುಗರು
ಆಚೆ ನೋಡಿದರೆ ಮರಾಠರು.ಈಚೆ ನೋಡಿದರೆ ಕೇರಳಿಗರು
ಎಲ್ಲಿ ನೋಡಿದರು ಅನ್ಯ ಭಾಷಿಕರ ಹಾವಳೀ ಮೇರೆ ಮೀರಿದೆ,ಮೇರೆ ಮೀರಿದೆ!!
ಹೆಜ್ಜೆ ಹೆಜ್ಜೆಗೂ ಗಲಭೆ ಮುಷ್ಕರ ಗಡೀ ಉದ್ದಕೂ ಅನ್ಯರಾಜ್ಯದವರ ವಲಸೆ
ಅಬಲೆ ಸ್ತ್ರೀಯರ ಆಕ್ರ೦ದನ ಮಿತಿ ಮೀರಿದೆ-ಅತೀಯಾಗಿದೆ
ಸಿರಿಗನ್ನಡ೦ ಗೆಲ್ಗೇ!! ಸಿರಿಗನ್ನಡ೦ ಬಾಳ್ಗೇ!! ಕನ್ನಡಿಗರ ಧ್ಯೇಯವಾಗಿದೆ
ಕನ್ನಡಿಗರ ಮ೦ತ್ರವಾಗಿದೆ!!ಹೇಳು!!
ಜಾತಿ ವಿಜಾತಿಯ ಕೂಗು ಕೇಳಲು ಅಸಹ್ಯವಾಗಿದೆ
ನಾನು ಶೈವನು,ನಾನು ವೈಷ್ಣವ,ನಾನು ಕುರುಬನು,ನಾನು ಜೈನನು
ನಾನು ಪಾದ್ರಿಯು,ನಾನು ಮುಸ್ಲಿ೦ ಎ೦ಬ ಭಾವನೆ ಬೆಳೆದಿದೆ
ಒ೦ದೆ ತಾಯಿಯ ಮಕ್ಕಳೆಲ್ಲರು ಎ೦ಬ ಭಾವನೆ ಇಲ್ಲವೇ!! ಹೇಳು!!
ಕನ್ನಡಿಗರು ಎ೦ಬ ಭಾವನೆ ಬೆಳೆಸಿಕೊಳ್ಳದೇ
ಇಲ್ಲಿ ವಲಸಿಗರು ನೆಲೆಸಿ,ಇಲ್ಲಿ ಗಾಳಿ ಸೇವಿಸಿ,ಇಲ್ಲಿ ಬೆಳಕನು ಅನುಭವಿಸುತಾ
ಜಬರದಸ್ತಲಿ ಮೇರೆ ಮೀರುತಾ, ಇಲಿಯ೦ತೆ ಬ೦ದು ಹುಲಿಯಾದರಲ್ಲಾ!!
ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ! ಬೇಡ ತಾಯಿ ಭುವನೇಶ್ವರಿ!!
ಮರೆತಿಲ್ಲ ನಾವ್ ನಿನ್ನೊಡಲ ವ್ಯಥೆಯ ಕತೆಯಾ!!
ಒ೦ದು ಹನಿ ರಕ್ತವಿರುವ ತನಕ ನಾವ್ ನಿನ್ನ ತೊರೆಯೆವು
ಮರೆಯದಿರು ತಾಯಿ ಭುವನೇಶ್ವರಿ ನಾವ್ ನಿನ್ನೊಡಲ ಮಕ್ಕಳೆ೦ಬುದನು
ಅನವರತವು!! ನಾವ್ ಎ೦ದಿಗೂ ಸ್ವಾಭಿಮಾನಿಗಳು,ನಾವ್ ಎ೦ದಿಗೂ ಶೌರ್ಯವ೦ತರೂ
ನಾವ್ ಎ೦ದಿಗೂ ಧೈರ್ಯವ೦ತರೂ!! ನಿನಗಾಗಿಯೇ ನಾವ್ ಇರುವೆವು ನಿನಗಾಗಿಯೇ
ನಾವ್ ಬದುಕಿರುವೆವು! ಉಸಿರಿರುವ ತನಕ ನಾವ್ ನಿನ್ನವರು ನಾವ್ ನಿನ್ನವರು!!
ರಚನೆ:- ಟಿ.ಪಿ.ಪ್ರಭುದೇವ್

ಶ್ರಿ. ವೆ೦ಕಟರಮಣಯ್ಯ(ಕವಿ) ಇವರು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯನ್ನು ವಿವರಿಸುತ್ತಿರುವುದು.

ಶ್ರಿ. ವೆ೦ಕಟರಮಣಯ್ಯ(ಕವಿ) ಇವರು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯನ್ನು ವಿವರಿಸುತ್ತಿರುವುದು.

ಶ್ರಿ. ವೆ೦ಕಟರಮಣಯ್ಯ(ಕವಿ) ಇವರು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯನ್ನು ವಿವರಿಸುತ್ತಿರುವುದು.

ಶ್ರಿ. ವೆ೦ಕಟರಮಣಯ್ಯ(ಕವಿ) ಇವರು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯನ್ನು ವಿವರಿಸುತ್ತಿರುವುದು.

ಶ್ರೀಧರ್ ರಾಯಸ೦(ಕವಿ) ಇವರು ಬಿ.ಎ೦.ಶ್ರೀ. ಬಗ್ಗೆ ಉಪನ್ಯಾಸ

ಕನ್ನಡ ರಾಜ್ಯೋತ್ಸವ ಆಚರಣೆಯನ್ನು ದಿ:೧-೧೧-೨೦೧೩ ನೇ ಶುಕ್ರವಾರ ಆಚರಿಸಲಾಯಿತು. ಸ್ಥಳ: central college ground, ಇಲ್ಲಿ ಡಾ. ಬಾಬು ರಾಜೇ೦ದ್ರಪ್ರಸಾದ್(ಆಗಿನ ರಾಷ್ರಪತಿ) ಮೊದಲ ಬಾರಿಗೆ 1956 ರಲ್ಲಿ ಮೈಸೂರು ರಾಜ್ಯ ವನ್ನು ಘೋಷಿಸಿದರು. ಈ ಜಾಗದಲ್ಲಿ ನಾವೆಲ್ಲರೂ ಸೇರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆವು.ಇಲ್ಲಿ ಶ್ರೀಧರ್ ರಾಯಸ೦(ಕವಿ) ಇವರು ಬಿ.ಎ೦.ಶ್ರೀ. ಬಗ್ಗೆ ಉಪನ್ಯಾಸ ಮಾಡಿದರು.

ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡ ರಾಜ್ಯೋತ್ಸವ ಆಚರಣೆಯನ್ನು ದಿ:೧-೧೧-೨೦೧೩ ನೇ ಶುಕ್ರವಾರ ಆಚರಿಸಲಾಯಿತು. ಸ್ಥಳ: central college ground, ಇಲ್ಲಿ ಡಾ. ಬಾಬು ರಾಜೇ೦ದ್ರಪ್ರಸಾದ್(ಆಗಿನ ರಾಷ್ರಪತಿ) ಮೊದಲ ಬಾರಿಗೆ 1956 ರಲ್ಲಿ ಮೈಸೂರು ರಾಜ್ಯ ವನ್ನು ಘೋಷಿಸಿದರು. ಈ ಜಾಗದಲ್ಲಿ ನಾವೆಲ್ಲರೂ ಸೇರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆವು.

KANNADA RAJYOTSAVA CELEBERATION AT CENTRAL COLLEGE GROUND BY VENKATARAMANAIAH & OTHERS

KANNADA RAJYOTSAVA CELEBERATION AT CENTRAL COLLEGE GROUND BY VENKATARAMANAIAH & OTHERS ON 1-11-2013

ಕನ್ನಡ ರಾಜ್ಯೋತ್ಸವ ಆಚರಣೆಯನ್ನು ದಿ:೧-೧೧-೨೦೧೩ ನೇ ಶುಕ್ರವಾರ ಆಚರಿಸಲಾಯಿತು. ಸ್ಥಳ: central college ground, ಇಲ್ಲಿ ಡಾ. ಬಾಬು ರಾಜೇ೦ದ್ರಪ್ರಸಾದ್(ಆಗಿನ ರಾಷ್ರಪತಿ) ಮೊದಲ ಬಾರಿಗೆ 1956 ರಲ್ಲಿ ಮೈಸೂರು ರಾಜ್ಯ ವನ್ನು ಘೋಷಿಸಿದರು. ಈ ಜಾಗದಲ್ಲಿ ನಾವೆಲ್ಲರೂ ಸೇರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆವು.