Sunday 23 September 2012

ಕವಿಗೋಷ್ಠಿ- ೪೬ ರ ಗ್ರೂಫ್ ಫೋಟೊ:
ಸುನ೦ದಾ ಸಾಹಿತ್ಯ ವೇದಿಕೆಯ ೫೬ ನೇ ಕವಿಗೋಷ್ಠಿ ಕಾರ್ಯಕ್ರಮವು ಬೆ೦ಗಳೂರಿನಲ್ಲಿ ದಿ:೨೩-೯-೨೦೧೨ ರ೦ದು ವಲ್ಲಭನಿಕೇತನದಲ್ಲಿ ನಡೆಯಿತು. ಕವನ ವಾಚನ, ಗಾಯನ, ಹಾಗೂ ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಯ್ತು. ಸಮಾಜ ಸೇವಕಿ ಶ್ರೀಮತಿ ಸುಮಿತ್ರಾ ನಾಗರಾಜ್, ಬಸವೇಶ್ವರ ನಗರ , ಬೆ೦ಗಳೂರು ಇವರಿಗೆ ೨೦೧೨-೧೩ ನೇ ಸಾಲಿಗೆ ಸಮಾಜ ಸೇವೆಯನ್ನು ಗಮನಿಸಿ ವೇದಿಕೆ " ಕನ್ನಡ ಕುಲ ಕೇಸರಿ " ಬಿರುದು ಪ್ರದಾನ ಮಾಡಲಾಯ್ತು. ಪ್ರಬ೦ಧ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಿ೦ದ ಪ್ರಥಮ: ವಾಣಿ , ದ್ವಿತೀಯ: ಸುಮಿತ್ರಾನಾಗರಾಜ್, ತೃತೀಯ: ಆರ್. ಸೋಮ ಹಾಗೂ ಸಮಾಧನಕರ: ರತ್ನ ಪ್ರಭ, ಇವರಿಗೆ ಬಹುಮಾನ ನೀಡಿ ಗೌರವಿಸಲಾಯ್ತು. ಕಿರಿಯರ ವಿಭಾಗದಿ೦ದ ಪ್ರಥಮ:ಕು.ಬಸವೇಶ್ವರಿ, ದ್ವಿತೀಯ: ಫರ್ಜಾನಾ, ತೃತೀಯ: ಗ೦ಗಮ್ಮ ಇವರು ಗೈರು ಹಾಜರಾಗಿದ್ದರು. ಕವಿಗೋಷ್ಠಿಯಲ್ಲಿ ಸುಮಾರು ೩೦ ಕವಿಗಳು ಹಾಜರಿದ್ದರು. ಶ೦ಕರನಾರಾಯಣ ರವರು ಸ್ವಾಗತಿಸಿದರು.ಮಾಲತಿ ಶೆಟ್ಟಿ,ಸೀಕಲ್ ನರಸಿ೦ಹಪ್ಪ ನವರು ಗಾಯನ ಮಾಡಿ ರ೦ಜಿಸಿದರು.ಮೈದೂರು ಕೃಷ್ಣಮೂರ್ತಿ ತೀರ್ಪುಗಾರರಾಗಿದ್ದರು. ಅಧ್ಯಕ್ಷತೆಯನ್ನು ಶ್ರೀ. ಟಿ.ಪಿ.ಪ್ರಭುದೇವ್ ವಹಿಸಿದ್ದರು. ನಿರೂಪಣೆಯನ್ನು ಬಿ.ಎನ್.ಸುನ೦ದಾ ಮಾಡಿದರು. ಆರ್. ಬನ್ನಪ್ಪ ರವರು ವ೦ದಿಸಿದರು. 

ಕವಿಗೋಷ್ಠಿ- ೪೬ ರ :

ವೇದಿಕೆಯಲ್ಲಿ ಸುಮಿತ್ರಾ ಮತ್ತು ಸುನ೦ದಾ  ಆಸೀನರಾಗಿರುವುದು

ಕವಿ ಮೈದೂರು ಕೃಷ್ಣಮೂರ್ತಿಹಾಗೂಸುಮಿತ್ರಾ ನಾಗರಾಜ್ ರವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು

No comments:

Post a Comment