Wednesday 25 June 2014

ಸುನಂದಾ ಸಾಹಿತ್ಯ ವೇದಿಕೆಯ ೭೯ ನೇ ಕವಿಗೋಷ್ಠಿ ಕಾರ್ಯಕ್ರಮ


ಸುನಂದಾ ಸಾಹಿತ್ಯ ವೇದಿಕೆಯ ೭೯ ನೇ ಕವಿಗೋಷ್ಠಿ ಕಾರ್ಯಕ್ರಮ


           ಸುನಂದಾ ಸಾಹಿತ್ಯ ವೇದಿಕೆಯ ೭೯ ನೇ ಕವಿಗೋಷ್ಠಿ ಕಾರ್ಯಕ್ರಮವು ಬೆಂಗಳೂರಿನ ವಲ್ಲಭನಿಕೇತನದಲ್ಲಿ ದಿ:೨೨-೦೬-೨೦೧೪ ರಂದು ನಡೆಯಿತು.ಈ ಕವಿಗೋಷ್ಠಿಗೆ ಮುಖ್ಯ ಅತಿಥಿಗಳಾಗಿ   ಶ್ರೀ.ನಂಜೇಗೌಡ(ರಂಗಭೂಮಿಕಲಾವಿದರು)  ಮತ್ತು ಶ್ರೀ.ಸಂಗಮೇಶ್ ಹುನಗುಂದ್(ಹಾಸ್ಯ ನಟರು) ಇವರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಟಿ.ಪಿ.ಪ್ರಭುದೇವ್(ಸಹಾಯಕ ಕೃಷಿ ಅಧಿಕಾರಿಗಳು)ಇವರು ವಹಿಸಿದ್ದರು. ನಿರೂಪಣೆಯನ್ನು ವೇದಿಕೆಯ ಸಂಸ್ಥಾಪಕಿ ಬಿ.ಎನ್.ಸುನಂದಾ ಇವರು ಮಾಡಿದರು.

        ಕವಿಗೋಷ್ಠಿಗೆ ಸುಮಾರು ೩೦ ಜನ ಕವಿ,ಕವಿಯಿತ್ರಿಗಳು ಹಾಜರಿದ್ದರು. ಅವರಲ್ಲಿ ಮುಖ್ಯವಾಗಿ     ಎಸ್.ಜಿ.ಮಾಲತಿಶೆಟ್ಟಿ,ದೇವಕೀಸುತ,ಜಿ.ಕೆ.ಎಲ್.ರಾಜನ್,ಸಿ.ಎನ್.ಉಮೇಶ್,ಶಿವಪ್ರಸಾದ್,ಅಂಭುಜಾಕ್ಷೀ,ಕೆ.ವಿ.ಶಂಕರನಾರಾಯಣ,ಗಂಗಾಧರಸ್ವಾಮಿ,ಆನಂದ್ ಕೆ,ಬಾಗಲ ಎಸ್.ಎಂ.,ಎಂ.ಆರ್.ಅನಂತಮೂರ್ತಿ,ರಾಧಾತನಯ,ಶೈಲಜ,ಬನಪ್ಪ ಆರ್.,ಮಹಾಂತೇಶ್ ಎಂ.ಬಡಿಗೇರ ಸಾ::ನಾಗೂರ್.,ಕೃಷ್ಣಾ.ಶ್ರೀ.ದೇವಾಂಗಮಠ್., ಪ್ರಕಾಶ್ ಎಸ್. ಶಿಲ್ಪಿ.,ಕೋಳಾಲಪ್ಪ ಹೆಚ್., ಮಧುಸೂಧನ್ ಎನ್.ಹೆಚ್.,ಯು.ಸಿರಾಜ್ ಅಹಮದ್ ಸೊರಬ., ಕಾರ್ಯಕ್ರಮದಲ್ಲಿ ನಂಜೇಗೌಡರು ಕುರುಕ್ಷೇತ್ರದಲ್ಲಿನ ದ್ರೌಪದಿ ವಸ್ತ್ರಾಪಹರಣದಲ್ಲಿ ದ್ರೌಪದಿಯು ಶ್ರೀಕೃಷ್ಣನನ್ನು ನೆನೆಯುವ ಹಾಡನ್ನು ಹಾಡಿದರು. ಜೊತೆಗೆ ದುರ್ಯೊಧನನ ದರ್ಭಾರ್ ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು. ಶ್ರೀ.ಸಂಗಮೇಶ್ ಹುನಗುಂದ್ ಇವರು ಹಾಸ್ಯ ಚಟಾಕಿಗಳನ್ನು ಹಾರಿಸಿ ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸಿದರು. ಅದರಲ್ಲಿಯೂ ವಾಂತೀವಿಲಾಸದ ಸವಿಯನ್ನು ಎಷ್ಟು ಸವಿದರೂ ಕಡಿಮೆಯೇ ಸರಿ. ಸುಳ್ಳು ವಾರ್ತೆಗಳನ್ನು ಸಭೆಯಲ್ಲಿ ವಾಚಿಸಿ ಎಲ್ಲರ ಮನಸೆಳೆದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಟಿ.ಪಿ.ಪ್ರಭುದೇವ್(ಸಹಾಯಕ ಕೃಷಿ ಅಧಿಕಾರಿಗಳು)ಇವರು  ಎಲ್ಲರ ಕವನಗಳ ಕುರಿತು ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಕವನಗಳಲ್ಲಿ ವಾಸ್ತವತೆ, ಪ್ರಾಸ,ಲಯಗಾರಿಕೆ ಇದ್ದಲ್ಲಿ ಇನ್ನೂ ಶೋಭೆ ಹೆಚ್ಚು ಎಂದರು. ಜೊತೆಗೆ ಮುಖ್ಯ ಅತಿಥಿಗಳಿಗೆ ನೆನಪಿನಪತ್ರ,ಕಾಣಿಕೆಗಳನ್ನು ನೀಡಿದರು.ಕಡೆಯಲ್ಲಿ ಎಲ್ಲರನ್ನೂ ಸುನಂದಾರವರು ವಂದಿಸಿದರು.ಈ ಕವಿಗೋಷ್ಠಿಗೆ ಆಕಾಶವಾಣಿ ಕಲಾವಿದರು,ಪತ್ರಕರ್ತರು ಭಾಗವಹಿಸಿದ್ದದ್ದು ವಿಶೇಷವಾಗಿತ್ತು.

No comments:

Post a Comment