Sunday 25 May 2014


ಸುನಂದಾ ಸಾಹಿತ್ಯ ವೇದಿಕೆ
78 ನೇ ಕವಿಗೋಷ್ಠಿ
    ಸುನಂದಾ ಸಾಹಿತ್ಯ ವೇದಿಕೆಯು ದಿ:25-5-2014ರಂದು ಬೆಳಿಗ್ಗೆ 11 ಕ್ಕೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ವಲ್ಲಭನಿಕೇತನದಲ್ಲಿ 78 ನೇ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.ಈ ಕವಿಗೋಷ್ಠಿಗೆ ಸುಮಾರು 35 ಮಂದಿ ಕವಿಗಳು ಹಾಜರಾಗಿದ್ದರು. ಮುಖ್ಯ ಅತಿಥಿಗಳಾಗಿ ಗಂಗಾಧರಸ್ವಾಮಿ,ಅಂಭುಜಾಕ್ಷಿ, ಗೌರಮ್ಮ ಭಾಗವಹಿಸಿ ಗೀತಗಾಯನವನ್ನು ನಡೆಸಿಕೊಟ್ಟರು.ಕನ್ನಡಗೀತೆಗಳು,ಜಾನಪದ ಗೀತೆ,ಮಹದೇಶ್ವರನ ಕಂಸಾಳೆಪದಗಳು,ಕನ್ನಡಚಲನಚಿತ್ರಗೀತೆಗಳನ್ನು ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದರು. ನಂತರ ಕವಿಗಳಾದ ದೇವಕೀಸುತ,ಕೃಷ್ಣಮೂರ್ತಿ,ಶಂಕರನಾರಾಯಣ ಕೆ.ವಿ.,ರಮ್ಯಾ,ಶೃಂಗೇಶ್ವರ,ರಂಗನಾಥ್ ಎಸ್.ಸಿ.,ಅಬ್ದುಲ್ ಖಾದರ್,ಸಿರಾಜ್ ಅಹಮದ್ ಸೊರಬ,ಪ್ರಕಾಶ್ ಶಿಲ್ಪಿ,ಹರೀಶ್ ಬಿ.ಎನ್.,ಶಾಂತಕುಮಾರ್ ಬಿ.,ಕೋಳಾಲಪ್ಪ,ಸಂಗಮೇಶ್ ಹುನಗುಂದ್,ಮಧುಸೂಧನ್ ಗೌಡ,ಉಮೇಶ್ ಸಿ.ಎನ್.,ಬನಪ್ಪ,ಶಿವಪ್ರಸಾದ್,ಜಿ.ಕೆ.ಎಲ್.ರಾಜನ್,ಲಕ್ಷ್ಮೀನಾರಾಯಣ ಇನ್ನೂ  ಮುಂತಾದವರು ಕವನಗಳನ್ನು ವಾಚಿಸಿದರು. ಕವನಗಳಲ್ಲಿ ಪ್ರಸ್ತುತ ಸಮಸ್ಯೆಗಳಾದ ಬಸ್ ದರ ಏರಿಕೆ,ಕಾರ್ಮಿಕರ ಶೋಷಣೆ,ಕಪ್ಪು ಹಣ ಬಳಕೆ,ಶಿಸ್ತಿನ ಸಿಪಾಯಿಗಳು,ಪ್ರೀತಿ-ಪ್ರೇಮ,ಬದಲಾದ ಸಂಸ್ಕೃತಿ,ರಾಜಕೀಯ ಅರಾಜಕತೆ,ಜೊತೆಗೆ ಹಾಸ್ಯ ಚಟಾಕಿಗಳು ಮೂಡಿಬಂದವು.ಕವಿಗೋಷ್ಠಿಯ ನಿರೂಪಣೆಯನ್ನು ವೇದಿಕೆಯ ಸಂಸ್ಥಾಪಕಿಯಾದ ಸುನಂದಾ ಬಿ.ಎನ್. ರವರು ಅಚ್ಚುಕಟ್ಟಾಗಿ ನೆರವೇರಿಸಿದರು.ಅಧ್ಯಕ್ಷತೆಯನ್ನು ವಹಿಸಿದ ಟಿ.ಪಿ.ಪ್ರಭುದೇವ್ ರವರು ಅಧ್ಯಕ್ಷೀಯ ಭಾಷಣದಲ್ಲಿ ದೇಶದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಯುವಕರ ಪಾತ್ರ ಮುಖ್ಯ. ತಂದೆ ತಾಯಿಯರಲ್ಲಿ ಮಕ್ಕಳನ್ನು ಶಿಸ್ತಿನಿಂದ ಬೆಳೆಸುವ ಗುಣವಿದ್ದಲ್ಲಿ ಸಮಾಜದ ಗುಣಮಟ್ಟವು ಸುಧಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕವಿಗಳೆಲ್ಲರ ಕವನಗಳನ್ನು ವಿಮರ್ಶಿಸಿ ಕವನಗಳು ಬಾವಪೂರ್ಣತೆಯಿಂದಿದ್ದವು.ಲಯ,ಪ್ರಾಸದ ಕೊರತೆ ಇದ್ದರೂ ಸಾಮಾಜಿಕ ಕಳಕಳಿಯುಳ್ಳ ಅಂಶಗಳಿದ್ದುದರಿಂದ ಸಹ್ಯವೆನಿಸಿದ್ದವು ಎಂದರು. ಅ೦ತ್ಯದಲ್ಲಿ ಅತಿಥಿಗಳಿಗೆ,ಕವಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ವಂದನೆಗಳೊಡನೆ ಕಾರ್ಯಕ್ರಮ ಮುಕ್ತಾಯಗೊಂಡಿತು.

                                                       ಪ್ರಭುದೇವ್ ಟಿ.ಪಿ.
                                                          ಅಧ್ಯಕ್ಷರು,

No comments:

Post a Comment