Thursday 9 August 2012

 ಮೇರಿ ಕೋಮ್’ 

ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ’ ಯೂ ಸೇರಿದಂತೆ, ‘ಅರ್ಜುನ ಪ್ರಶ’ಸ್ತಿ, ಹಾಗೂ   ೫ ಬಾರಿ ಮಹಿಳಾ ಬಾಕ್ಸಿಂಗ್ ನ  ವಿಶ್ವಚಾಂಪಿಯನ್ ಪ್ರಶಸ್ತಿ’ ಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ  ಮಣಿಪುರದ ಮತ್ತೋರ್ವ ಎಲೆಮರೆಯ ಕಾಯಿಯಾಗಿ ಉಳಿಯದ, ಬಲವಾದ ‘ಪಂಚ್’ ಕೊಡುವ ಭಾರತೀಯ ಮಹಿಳೆಯಾಗಿ, ಶೋಭಿಸುತ್ತಿರುವ ಮೇರಿ ಕೋಮ್,  ಈಬಾರಿಯ ೨೦೧೨ ರ ಲಂಡನ್ ಒಲಂಪಿಕ್ಸ್ ನ ಮಹಿಳೆಯರ ಕಂಚಿನಪದಕವನ್ನು ತಮ್ಮ ತಾಯ್ನಾಡಿಗೆ ತಂದುಕೊಟ್ಟ ಮತ್ತೋರ್ವ ಮಹಿಳೆಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ  ! ಕ್ರಿಕೆಟ್ ಬಿಟ್ಟರೆ ಇನ್ನಾವುದೂ ಆಟವೇ ಅಲ್ಲ ಎನ್ನುವ ಮನೋಭಾವವನ್ನು ಹೊಂದಿರುವ  ನಾಡಿನಲ್ಲಿ ಸುಗಂಧವನ್ನು ಹೊರಸೂಸಿದ ಪುಷ್ಪ !


ಪೂರ್ವೋತ್ತರ ರಾಜ್ಯದಲ್ಲಿ ಎಲ್ಲವೂ ಕನಸೇ !  ಕ್ರೀಡೆಯಲ್ಲಿ  ‘ಮೇರಿ ಕೋಮ್’  ಅವರು ಸಕ್ಷಮವಾಗಿದ್ದರೂ ಸರಿಯಾದ ತರಬೇತು ಪಡೆಯಲು ಮನೆಯವರ ಸಹಾಯ ಒದಗದೆ, (ತಂದೆಯವರು ವಿರುದ್ಧವಾಗಿದ್ದರು)ಅವರಿಗೆ ಗೊತ್ತಾಗದಂತೆ ಗೆಳೆಯರ ಸಹಕಾರದಿಂದ ಅಲ್ಪ-ಸ್ವಲ್ಪ ಕಲಿತರು. ಅವರಿಗೆ ಪದಕ ಗೆದ್ದ  ಭಾರತದ ಬಾಕ್ಸರ್, ಡಿಂಖೋ ಸಿಂಗ್ ಎನ್ನುವವರು. ಆದರ್ಶಪ್ರಾಯರಾದರು.ಆಗ ಅವರ ಮನಸ್ಸಿನಲ್ಲಿ ತಮ್ಮ ಬಾಕ್ಸಿಂಗ್ ಪ್ರತಿಭೆಯ ಅರಿವಾಗಿ, ತಾವೂ ಆ ನಿಟ್ಟಿನಲ್ಲಿ ಏನಾದರೂ ಸಾಧಿಸುವ ಮನಸ್ಸಾಯಿತು. ಜೀವನದಲ್ಲಿ ಸಾಹಸ ಪ್ರವೃತ್ತಿ ಬಹುಮುಖ್ಯ. ಅದಕ್ಕೆ ಮೇರಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಹೀಗೆಯೇ ಅವರ ಜೀವನದಲ್ಲಿ ಸಾಧನೆಯ ಗೆರೆ ಮೇಲೇರಿದಂತೆ ಅವರು ತಮ್ಮ ಮದುವೆಯ ಬಗ್ಗೆ ವಿಚಾರಮಾಡಿ, ದೆಹಲಿಯಲ್ಲಿ ಆಗಲೇ ಪರಿಚಯವಾಗಿ ಅವರಿಗೆ ಮೆಚ್ಚುಗೆಯಾದ  ’ಒನ್ಲರ್ ಕೋಮ್’, ಎಂಬುವರ ಕೈಹಿಡಿದರು.


ಪತಿಯ ಪ್ರೀತಿ, ಮತ್ತು ಪ್ರೋತ್ಸಾಹ ಅವರಲ್ಲಿ ಸುಪ್ತವಾಗಿದ್ದ ಬಾಕ್ಸಿಂಗ್ ಪ್ರತಿಭೆಗೆ ಪುಟವಿಟ್ಟ ಚಿನ್ನದಂತಾಗಿ ಮೇರಿ ಪದಕಗಳ ಸರಗಳನ್ನು ಧರಿಸುತ್ತಾ ಮುಂದೆ ಸಾಗಿದರು. ೨೦೦೭ ರಲ್ಲಿ ಈ ದಂಪತಿಗಳಿಗೆ ಅವಳಿ-ಜವಳಿ  ಗಂಡು ಮಕ್ಕಳು ಜನಿಸಿದರು. ಅವರ ಹೆಸರುಗಳು, ರಿಚುಂಗ್ವರ್, ಮತ್ತು ಕುಪ್ನೇವರ್ ಎಂದು. ವೃತ್ತಿಪರ ಖಿಲಾಡಿಗಳೆಲ್ಲರ ತರಹ  ಮೇರಿ  ಕೊಮ್ ರಿಗೆ, ಮಕ್ಕಳ ಲಾಲನೆ-ಪಾಲನೆಯಲ್ಲಿ ಹೆಚ್ಚುಸಮಯ ಕಳೆಯಲು ಸಾಧ್ಯವಾಗದ್ದಕ್ಕೆ ಅವರು ಬಹಳವಾಗಿ ನೊಂದಿದ್ದಾರೆ.

 ಒಬ್ಬ ಮಗನಿಗೆ ೨ ವರ್ಷದ ಪ್ರಾಯದಲ್ಲೇ .ದುರ್ದೈವದಿಂದ ಹೃದಯದಲ್ಲಿ ಒಂದು ಚಿಕ್ಕ ಹೋಲ್ ಇತ್ತು. ಏಶ್ಯಾಕಪ್ ಟ್ರೈನಿಂಗ್ ಗೆ ಹೊರಟುನಿಂತ ಮೇರಿಯವರಿಗೆ ಕಣ್ಣೊರಸಿ ಧರ್ಯತುಂಬಿ ಕಳಿಸಿಕೊಟ್ಟವರು, ಅವರ ಪ್ರೀತಿಯ ಪತಿ, ಓನ್ಲರ್ ಕೋಮ್ . ಆದರೆ ಆ ಕಷ್ಟದ ಗಳಿಗೆಯಲ್ಲೂ ಧೃತಿಗೆಡದೆ ರಾಷ್ಟ್ರಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟ ಬಲಾಢ್ಯ ಮಹಿಳೆಯೆಂದು ಮೇರಿ,ಸಾಬೀತುಮಾಡಿದರು. ಮನೆಯ ಗೃಹಸ್ತಿ, ಹಾಗೂ ರಾಷ್ಟ್ರದ ಗೌರವಗಳನ್ನು ನಿಭಾಯಿಸುತ್ತಾ ಬಂದ ಗಟ್ಟಿಗಿತ್ತಿ ಆಕೆ !
ಈಗಿನ ತನಕ ಜರುಗಿರುವ ವಿಶ್ವ ಚಾಂಪಿಯನ್ ಗಳಲ್ಲೆಲ್ಲಾ ಪದಕಗಳನ್ನು ಸತತವಾಗಿ ಗಳಿಸಿರುವ ಏಕೈಕ ಮಹಿಳೆ. ೨೦೦೧ ರಲ್ಲಿ  ವಿಶ್ವ ಚಾಂಪಿಯನ್ ಬೆಳ್ಳಿಪದಕ, ಏಷ್ಯನ್ ನ್ ೨೦೧೦ ರ ಗುವಾಂಗ್ಜು ಸ್ಪರ್ಧೆಯಲ್ಲಿ ಭಾರತಕ್ಕೆ ಅವರು ಕಂಚಿನ ಪದಕವನ್ನು ಗಳಿಸಿಕೊಟ್ಟರು.‘ಅಂತಾರಾಷ್ಟ್ರೀಯ ಅಮೆಚ್ಯೂರ್ ಬಾಕ್ಸಿಂಗ್ ಸಂಸ್ಥೆ’, ಮೇರಿಯವರಿಗೆ  "ಮೆಗ್ನಿಪ್ಫಸೆಂಟ್ ಮೇರಿ" ಯೆನ್ನುವ ಬಿರುದು ಕೊಟ್ಟು ಸನ್ಮಾನಿಸಿದೆ. ೨೦೧೨ ರ, ಆಗಸ್ಟ್ ೮ ರಂದು  ಲಂಡನ್ ಒಲಂಪಿಕ್ಸ್ ನಲ್ಲಿ, ೨೯ ವರ್ಷ ಹರೆಯದ  ಮೇರಿ,  ರಾಷ್ಟ್ರಕ್ಕೆ (೫೧ ಕೆ.ಜಿ. ಫ್ಲೈ ವೇಟ್) ಕಂಚಿನಪದವನ್ನು ಗೆದ್ದುತಂದಿದ್ದಾರೆ.  ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆ,  ಒಲಂಪಿಕ್ಸ್ ಮಟ್ಟದಲ್ಲಿ ಮೊದಲಬಾರಿಗೆ ಆಯೋಜಿಸಲಾಗಿದೆ.  ೫ ನೆಯ ವರ್ಷದ  ಮಕ್ಕಳ ಹುಟ್ಟುಹಬ್ಬಕ್ಕೆ ಅವರು ದೂರದಲ್ಲಿದ್ದರೂ ಈ ಪ್ರಶಸ್ತಿ, ಅವರ ಮುದ್ದಿನ ಮಕ್ಕಳಿಗೆ ಪ್ರೀತಿಪೂರ್ವಕವಾಗಿ ಕೊಟ್ಟ ಉಡುಗೊರೆಯಾಗಿದೆ. ಮೇರಿ ಕಾಮ್ ರವರ ಪ್ರೀತಿಯ ತಾಯಿ ಪೆವಿಲಿಯನ್ ನಲ್ಲಿ ಕುಳಿತು 'ಮಗಳ ಬಾಕ್ಸಿಂಗ್ ಪಂಚ್'  ನೋಡಿ ಮೈಮರೆತಿದ್ದರು ! ಹೀಗೆ ಮೇರಿ ಕಾಂ ನಮ್ಮ ದೇಶದ ಆಟಗಾರರ ಮನೋಬಲವನ್ನು ವೃದ್ಧಿಸುವ ಕಾರಂಜಿಯಂತೆ ಕೆಲಸಮಾಡುತ್ತಿದ್ದಾರೆ. ಅವರಿಗೆ ಮತ್ತು ಅವರ ಪರಿವಾರದವರಿಗೆ ನಮ್ಮೆಲ್ಲರ ಶುಭಕಾಮನೆಗಳು !

ಇದುವರೆಗೆ ಒಲಂಪಿಕ್ಸ್ ನಲ್ಲಿ ಪದಕ ಗಳಿಸಿದ ಮಹಿಳೆಯರ ಪಟ್ಟಿ :

* ಕರ್ಣಂ ಮಲ್ಲೇಶ್ವರಿ, ವೈಟ್ ಲಿಫ್ಟಿಂಗ್ ನಲ್ಲಿ (ಸಿಡ್ನಿ) ಕಂಚಿನ ಪದಕ.

* ಸೈನ ನೆಹ್ವಾಲ್, ಬ್ಯಾಡ್ಮಿಂಟನ್ ನಲ್ಲಿ (ಲಂಡನ್), ಕಂಚಿನ ಪದಕ.

* ‘ಮೇರಿ ಕೋಮ್  ‘ಬಾಕ್ಸಿಂಗ್ ನಲ್ಲಿ (ಲಂಡನ್), ಕಂಚಿನ ಪದಕ.

No comments:

Post a Comment