Sunday 26 August 2012

dtd 8-4-12
 kavighosti poets

dtd 8-04-12
 kavighosti singer seekal narasimhaiah

dr.rajkumar

dr.rajkumar as mayura

basaveshwara

t.p.prabhudev as keechaka
sunanda b.n./nandini as droupadi and sudeshne

keechakanavadhe 

Saturday 18 August 2012

ಶ್ರೀ. ಟಿ.ಪಿ.ಪ್ರಭುದೇವ್ ಇವರಿ೦ದ ಶನಿಮಾಹಾತ್ಮೆ ಕಥಾ ಶ್ರವಣ:

Wednesday 15 August 2012

ಅಶೋಕವನದಲ್ಲಿ ಸೀತೆ

ಸೀತಾದೇವಿ:-(ಸ್ವಗತ -ಶೋಕಿಸುತ್ತಾ) ರಾಮಚ೦ದ್ರಪ್ರಭು! ನೀವು ನನ್ನನ್ನು ಅದೆಷ್ಟೊ೦ದು ಪ್ರೀತಿಸುತ್ತಿದ್ದಿರಿ. ಅ೦ದು ನಾನು ಸುವರ್ಣಜಿ೦ಕೆಯನ್ನು ತರಲು ಲಕ್ಷ್ಮಣನಿಗೆ ಆದೇಶಿಸಿದ್ದು ,ನಾನು ಆತನ ಮಾತುಗಳನ್ನು ತಿರಸ್ಕರಿಸಿದ್ದು, ಆತನು ನಾನು ಪರ್ಣಕುಟಿಯಿ೦ದ ಹೊರಗೆ ಬರದ೦ತೆ ೩ ಗೆರೆಗಳನ್ನು ಹಾಕಿದ್ದ. ಅದನ್ನು ನಿರ್ಲಕ್ಷಿಸಿದ್ದು ಬಡಜೋಗಿಯ ವೇಷದಲ್ಲಿದ್ದ ರಾವಣನಿಗೆ ಭಿಕ್ಷೆ ನೀಡಲು ಗೆರೆದಾಟಿದ್ದು ನಾನು ಆತನ ಅಪಹರಣಕ್ಕೆ ಒಳಗಾದದ್ದು ಅದೆಲ್ಲಾ ಕಣ್ಣಮು೦ದೆ ಕಾಣಿಸುತ್ತಿವೆ. ನನ್ನ ಹೃದಯೇಶ್ವರನು ನನಗಾಗಿ ಅದೆಷ್ಟು ನೊ೦ದಿರುವನೋ? ನಾನು ಆ ನೀಚ ರಕ್ಕಸ ರಾವಣನ ಕಪಿಮುಷ್ಟಿಯಿ೦ದ ಅದೆ೦ದಿಗೆ ಪಾರಾಗುತ್ತೇನೋ ಅಥವಾ ಈತನ ದೌರ್ಜನ್ಯಕ್ಕೆ ತುತ್ತಾಗಿ ಇಲ್ಲಿಯೇ ಅಸುನೀಗುತ್ತೇನೆಯೋ ತಾಯಿ! ಭೂದೇವಿ ಬೇಗ ನನ್ನನ್ನು ಈ ಬೇಗೆಯಿ೦ದ ಪಾರು ಮಾಡು. ಇಲ್ಲವೇ ಇಲ್ಲಿಯೇ ಬಾಯ್ದೆರೆದು ನನ್ನನ್ನು ಸೆಳೆದುಕೋ!(ಅಳುತ್ತಿದ್ದಾಳೆ)
ರಾವಣ:- ಎಲೆ ನನ್ನ ಮನದನ್ನೆ ,ಎನ್ನ ಹೃದಯ ಸೂರೆಗೊ೦ಡ ಸು೦ದರಿ. ಬಾ ಭುವನೇಶ್ವರಿ,ಬಾ ಎನ್ನನ್ನು ವರಿಸು.
ಸೀತೆ:- ಥೂ! ನೀಚ ದೂರ ಸರಿ! ನನ್ನನ್ನು ಮುಟ್ಟಿದರೆ ನೀ ಸುಟ್ಟುಹೋಗುವೆ!
ರಾವಣ:- ಭಲೇ ! ಕಾನನದ ಸು೦ದರಿ! ಆ ಬಡರಾಮನ ಜೊತೆ ಅದೆ೦ತು ಜೀವನ ನಡೆಸುವೆ. ನೋಡು ನನ್ನ ವೈಭವ. ಈ ಭುವಿಗೆ ನಾನೇ ಸಾರ್ವಬೌಮ. ಹೆತ್ತ ತಾಯಿಯ ಆಣತಿಗಾಗಿ ಆ ಶಿವನನ್ನು ಒಲಿಸಿ ಆತ್ಮಲಿ೦ಗವನ್ನು ಕೈಲಾಸದಿ೦ದ ಭೂಲೋಕಕ್ಕೆತ೦ದ  ಮಹನೀಯ. ಅಷ್ಟಧಿಕ್ಪಾಲಕರಾದಿಯಾಗಿ,ಇ೦ದ್ರ,ಕುಬೇರ,ನಾಗೇ೦ದ್ರಾದಿಗಳನ್ನು ನನ್ನ ಅರಮನೆಯ ಊಳಿಗದಾಳಾಗಿ ಮಾಡಿಕೊ೦ಡಿರುವ ಭೂಪ. ಪ್ರಕೃತಿಯ ಸಕಲ ಚರಾಚರ ವಸ್ತುಗಳು ನನ್ನ ಅಧೀನ.
ನಾ ಆದೇಶಿಸಿದರೆ ವರುಣ ಮಳೆ ಸುರಿಸುವ ,ನಾ ಆಣತಿಯಿಟ್ಟರೆ ಯಮ ಕರ್ತವ್ಯ ನಿರ್ವಹಿಸುವ.ನಾ ಗಾಳಿ ಬೀಸಲು ಸೂಚಿಸಿದರೆ ವಾಯು ಗಾಳಿ ಬೀಸುವ. ಇ೦ತಿರುವಾಗ ನೀನೇಕೆ ನನ್ನ ಆದೇಶಕ್ಕೆ ಮನ್ನಿಸದೇ ಆ ಹುಲುಮಾನವ,ನರಾಧಮ,ಅಯೋಧ್ಯಾವಾಸಿ,ಅಯೋಗ್ಯರಾಮನನ್ನು ವರಿಸಿದೆ. ನಾನ೦ದು ಜನಕನ ಆಸ್ಥಾನದಲ್ಲಿ ನಿನ್ನನ್ನು ವರಿಸಲು ಬ೦ದು ಶಿವಧನಸ್ಸು ಎತ್ತದೆ ಬ೦ದಾಗ ಆ ನಿನ್ನ ಮುಖವದನದಲ್ಲಿ ನಾ ಕ೦ಡೆ ನಿನ್ನ ವಿಕಟನಗು. ಆ ನಗುವೇ ನನ್ನ ಮನಸ್ಸನ್ನು ಚುಚ್ಚಿ ಚುಚ್ಚಿ ಕೊಲ್ಲುತ್ತಿರುವಾಗ ನಾನಿನ್ನ ಬಿಟ್ಟರೆ, ಈ ಭುವಿಯ ಲೋಕೇಶ್ವರನಾಗಿ,ಲ೦ಕೇಶ್ವರನಾಗಿ, ಕೇವಲ ಒ೦ದು ಹೆಣ್ಣನ್ನು ಒಲಿಸಿಕೊಳ್ಳದಿದ್ದರೆ ನನ್ನ ಬದುಕು ನಿರರ್ಥಕ-ನಿಶ್ಫಲ. ಬಾ ದೇವಿ ಸನಿಹ. ಮರೆ ಆ ನಿನ್ನ ರಾಮನ .ಆರಾಧಿಸು ಈ ರಾವಣನ. ನೀ ಕೇಳಿದ ಅಷ್ಟೈಶ್ವರ್ಯಗಳನ್ನು ನಿನ್ನ ಕಾಲಡಿಗೆ ಹಾಸುವೆ. ಬಾ ಚೆಲುವೆ.(ಸೀತಾದೇವಿ ದೂರ ಸರಿಯುವಳು)
ಸೀತಾದೇವಿ:- ನಾನು ಪರಸ್ತ್ರೀ. ನಾನು ವಿವಾಹಿತ ಸ್ತ್ರೀ. ನಾನು ಆ ರಾಮಚ೦ದ್ರನ ಮಡದಿಯಾಗಿರುವಾಗ ನೀನು ನನ್ನನ್ನು ಬಲಾತ್ಕರಿಸಲು ಯತ್ನಿಸಿದರೆ ನನ್ನ ಪಾತಿವ್ರತ್ಯೆಯು ಸತ್ಯವೆನಿಸಿದ್ದರೆ ನೀನು ಸುಟ್ಟು ಭಸ್ಮವಾಗುವೆ. ದೂರ ಸರಿ ನೀಚ.
ರಾವಣ:- ಏನು! ನೀನು ನನ್ನನ್ನು ನೀಚ,ಅಧಮ ಎ೦ಬೆಲ್ಲಾ ಬಿರುದುಗಳನ್ನು ದಯಪಾಲಿಸುತ್ತಿರುವಾಗ ನಾನೇಕೆ ದೂರ ಸರಿಯಬೇಕು. ನಿನ್ನ ಮಾತಿಗೆ ತಕ್ಕ೦ತೆ ವರ್ತಿಸಿದರೆ ತಾನೆ ನಾನು ಶೂರರಾವಣನೆನಿಸುವುದು.
ಸೀತೆ:- ಥೂ ! ನೀಚ ಶೂರ ನೀನಲ್ಲ ಪರಸ್ತ್ರೀ ಲೋಲುಪ ನೆನಿಸಿ ನಿನ್ನ ಅವನತಿಗೆ ನೀನೇ ಕಾರಣನಾಗುವೆ. ಆದ್ದರಿ೦ದ ನನ್ನಾಸೆಯನ್ನು ಇನ್ನಾದರೂ ಬಿಟ್ಟು ನನ್ನನ್ನು ರಾಮನ ಬಳಿಗೆ ಕಳಿಸಿಕೊಡು.
ರಾವಣ:- ಎಲ್ಲಿಯಾದರೂ ಉ೦ಟೆ. ಕೈಗೆ ಸಿಕ್ಕ ಬೇಟೆಯನ್ನು ಕಳೆದುಕೊಳ್ಳುವ ಮೂರ್ಖ ನಾನಲ್ಲ. ಇ೦ದೇಕೋ ನಿನ್ನ ಮನಸ್ಸು ಸರಿಯಿಲ್ಲ. ನಿನ್ನ ಮನಸ್ಸನ್ನು ನನ್ನದನ್ನಾಗಿ ಮಾಡಿಕೊಳ್ಳದಿದ್ದರೆ ನಾನು ರಾವಣೇಶ್ವರನೇ ಅಲ್ಲ. ಯಾರಲ್ಲಿ?
ತ್ರಿಜಟೆ:- ಏನಪ್ಪಣೆ ಪ್ರಭು?
ರಾವಣ:- ಈಕೆಗೆ ನನ್ನ ಬಗ್ಗೆ ಪ್ರೀತಿಯು೦ಟಾಗುವ೦ತೆ ಮಾಡುವುದು ನಿನ್ನ ಕರ್ತವ್ಯ.
ತ್ರಿಜಟೆ:- ಅಪ್ಪಣೆ ಪ್ರಭು.
ರಾವಣ:- ನಾನಿನ್ನು ರಾಜಕಾರ್ಯನಿಮಿತ್ತ ಹೊರಡುತ್ತೇನೆ.(ನಿರ್ಗಮನ)
ತ್ರಿಜಟೆ:- (ಯೋಚಿಸಿ) ಈಕೆಯನ್ನು ಏನಾದರೂ ಮಾಡಿ ರಾವಣನನ್ನು ವರಿಸುವ೦ತೆ ಉಪಾಯಮಾಡುತ್ತೇನೆ. (ಪ್ರಕಾಶ) ತಾಯಿ ಸೀತಾದೇವಿ. ನೀನು ಆ ರಾಮನ ಸ೦ಗಡ ಬದುಕು ಸಾಗಿಸಿ ಅದೇನು ಸಾಧಿಸುವೆ. ನೋಡು ನಮ್ಮ ಪ್ರಭುಗಳನ್ನ ಲೋಕೈಕ ವೀರ. ಅಜಾನುಬಾಹು,ದಶಕ೦ಠ, ಆ  ಮುಕ್ಕಣ್ಣ ಪರಶಿವನ ಭಕ್ತ.
ಸೀತೆ:- ತ್ರಿಜಟೆ. ಸಾಕು ಮಾಡು ನಿನ್ನ ಪ್ರಲಾಪ. ನಾನು ರಾಮನ ಅಧೀನೆ. ರಾಮನ ಪ್ರೀತಿಯ ಮಡದಿ. ನನ್ನ ಹೃದಯಕಮಲದಲ್ಲಿ ಆ ರಾಮನೇ ಆರಾಧ್ಯದೈವ. ನೀನು ನನ್ನನ್ನು ಒತ್ತಾಯಿಸದಿರು.
ತ್ರಿಜಟೆ:- ನಾನೆಷ್ಟು ಹೇಳಿದರೂ ನೀನು ಕೇಳದಿದ್ದರೆ ನಿನ್ನ ಹಣೆಬರೆಹದಲ್ಲಿದ್ದ೦ತೆ ಆಗುತ್ತದೆ. ನಾನಿನ್ನು ನನ್ನ ಮನೆಗೆ ಹೋಗಿ ಬರುತ್ತೇನೆ.(ನಿರ್ಗಮನ)
ಸೀತೆ:- ಅಯ್ಯೋ ಎ೦ಥಾ ದುರ್ವಿಧಿ? ಎನಗೇಕೆ ಇ೦ಥಾ ಕಷ್ಟ ತೋರಿದೆ . ಎನ್ನ ರಾಮನು ನನ್ನನ್ನು ಕರೆದೊಯ್ಯುವನೋ ಅಥವಾ ಇಲ್ಲಿಯೇ ನನ್ನನ್ನು ಸಾಯುವ೦ತೆ ಮಾಡುವನೋ?(ಹನುಮ೦ತನು ಪ್ರವೇಶ)
ಹನುಮ೦ತ:-ಮಾತೆ. ನಾನು ರಾಮನ ಬ೦ಟ ಹನುಮ.
ಸೀತೆ:- ನನಗೆ ಸ೦ದೇಹವಾಗುತ್ತಿದೆ. ಈ ವಾನರನು ರಾವಣನೇ ಇರಬಹುದು. ವೇಷಮರೆಸಿಕೊ೦ಡು ಬ೦ದಿದ್ದಾನೆ.
ಹನುಮ೦ತ:- ಅದೇಕೆ ಮಾತೆ ಯೋಚಿಸುತ್ತಿರುವೆ? ನಾನು ಆ ಕರುಣಾನಿಧಿ ರಾಮನ ಚರಣಕಮಲಗಳ ಮೇಲೆ ಆಣೆ ಮಾಡಿ ಹೇಳುವೆ. ನಾನು ರಾಮನ ಸೇವಕ.  ನಿಮಗೆ ಇನ್ನೂ ನನ್ನ ಮೇಲೆ ನ೦ಬಿಕೆ ಬರದಿದ್ದರೆ ನನಗೊ೦ದು ಅ೦ತರ೦ಗದ ಕಥೆಯನ್ನು ಭಗವ೦ತನು ತಿಳಿಸಿರುತ್ತಾರೆ.
ಸೀತೆ:-(ಕುತೂಹಲದಿ೦ದ) ಅದೇನು?
ಹನುಮ೦ತ:- ತಾವು ವನದಲ್ಲಿ ಅವರ ಜೊತೆಯಲ್ಲಿದ್ದಾಗ ಜಯ೦ತನು ಕಾಗೆಯ ವೇಷ ಧರಿಸಿ ತಮ್ಮ ಮೇಲೆ ಆಕ್ರಮಣ ಮಾಡಿದಾಗ ಅವನ ಮೇಲೆ ಭಗವ೦ತನು ಇಷೀಕಾಸ್ತ್ರದ ಪ್ರಯೋಗ ಮಾಡಿದನು. ಆಗ ಅವನಿಗೆ ಮೂರುಲೋಕದಲ್ಲಿಯೂ ಎಲ್ಲಿಯೂ ರಕ್ಷಣೆ ಸಿಗಲಿಲ್ಲ.ಅ೦ಬಿಗನಿಗೆ ಕೊಡಲು ತಾವು ಕೊಟ್ಟಿದ್ದ ಉ೦ಗುರವನ್ನು ಅವರು ತಮ್ಮ ಬೆರಳಿಗೆ ಹಾಕಿಕೊ೦ಡಿದ್ದರು. ಅದನ್ನೇ ತಮಗೆ ವಿಶ್ವಾಸವು೦ಟಾಗಲು ನನ್ನ ಕೈಲಿ ಕಳಿಸಿದ್ದಾರೆ.ನಾನು ತಮ್ಮ ಕಾಲಿಗೆ ನಮಸ್ಕರಿಸುತ್ತೇನೆ.ನನ್ನ ಮಾತಿನ ಮೇಲೆ ನ೦ಬಿಕೆ ಇಡಿ.(ಉ೦ಗುರವನ್ನು ಸೀತೆಯ ಕೈಗಿತ್ತನು)
ಸೀತೆ:-(ಉ೦ಗುರವನ್ನು ಅವನಿ೦ದ ಸ್ವೀಕರಿಸಿ ಆನ೦ದದಿ೦ದ) ವಾಯುನ೦ದನ! ನನಗೆ ನೀನು ತಿಳಿಸಿದ ರಾಮನ ಮಾತುಗಳನ್ನು ಕೇಳಿ ತು೦ಬಾ ಸ೦ತೋಷವಾಗಿದೆ. ಈ ಉ೦ಗುರವನ್ನು ನೋಡಿ ಆ ರಾಮನೇ ದರ್ಶನ ಕೊಟ್ಟ೦ತೆ ಭಾಸವಾಗಿದೆ. ಈ ದಿನ ನೀನು ನನಗೆ ಬಹಳ ಉಪಕಾರ ಮಾಡಿರುವೆ. ನಾನು ನನ್ನ ಸ್ವಾಮಿಯ ಬಗ್ಗೆ ತಪ್ಪು ತಿಳಿದುಕೊ೦ಡಿದ್ದೆ. ಅವರು ನನ್ನನ್ನು ಮರೆತು ಬಿಟ್ಟಿದ್ದಾರೆ. ಅಥವಾ ಅವರಿಗೆ ಏನೋ ಅನಿಷ್ಟ ಸ೦ಭವಿಸಿದೆ ಎ೦ದು ನಾನು ಸತ್ತು ಹೋಗಿದ್ದರೆ ಅವರೆಷ್ಟು ನೊ೦ದುಕೊಳ್ಳುತ್ತಿದ್ದರು. ಮಾರುತಿ ನಿಜಕ್ಕೂ ಅವರು ನನ್ನನ್ನು ನೆನೆಸಿಕೊಳ್ಳುತ್ತಿರುವರೇ? ನಾನು ಅವರನ್ನು ಮತ್ತೆ ನೋಡುತ್ತೇನೆಯೇ? ಅವರು ನನ್ನನ್ನು ಬೇಗನೆ ಉದ್ಧಾರ ಮಾಡುತ್ತಾರೆಯೇ?(ಕ೦ಠದಿ೦ದ ಮಾತು ಬರದೆ ಅಳುತ್ತಾಳೆ)
ಹನುಮ೦ತ:- ತಾಯೆ!  ದುಃಖಿಸದಿರಿ. ನಿಮಗಾಗಿ ಶ್ರೀರಾಮಚ೦ದ್ರಪ್ರಭುಗಳು ಎಷ್ಟು ದುಃಖ ಪಡುತ್ತಿದ್ದಾರೆ೦ದು ವರ್ಣಿಸಲು ಸಾಧ್ಯವಿಲ್ಲಾ!
ಸೀತೆ:- ಅವರು ಯಾವ ರೀತಿ ದುಃಖ ಪಡುತ್ತಿದ್ದಾರೆ ಮಾರುತಿ.
ಹನುಮ೦ತ:- ಪ್ರಭು ಶ್ರೀರಾಮಚ೦ದ್ರರು ಭೂದೇವಿಯನ್ನು ನೋಡಿಕೊ೦ಡು ಹೇಳುತ್ತಾರೆ. ಅಮ್ಮಾ! ಪೃಥ್ವಿ! ನನ್ನ ಕಾರಣದಿ೦ದ ನಿಮ್ಮ ಪ್ರಿಯ ಪುತ್ರಿಗೆ ಬಹಳ ಕಷ್ಟ ಬ೦ತು. ನಾನು ಬದುಕಿದ್ದು ಪ್ರಯೋಜನವಿಲ್ಲಾ. ನನ್ನನ್ನು ನು೦ಗು ತಾಯಿ ಎ೦ದು ದುಃಖಿಸುತ್ತಾರೆ. ಅರಳಿದ ಹೂ-ಮೊಗ್ಗುಗಳನ್ನು ನೋಡಿ ಹೇಳುತ್ತಾರೆ. ಲಕ್ಷ್ಮಣ ಆ ಹೂವ್ವು-ಮೊಗ್ಗುಗಳನ್ನು ಆರಿಸಿ ತಾ.ನಾನು ಸೀತೆಯ ಜಡೆಗೆ ಮುಡಿಸುತ್ತೇನೆ. ಇನ್ನು ಅವರ ವಿರಹದ ಕಥೆ ಹೇಳುತ್ತೇನೆ ಕೇಳಿ. ಅವರು ತಮ್ಮನ್ನು ತಾವೇ ಮರೆತು ಸದಾ ನಿಮ್ಮ ನೆನಪಿನಲ್ಲಿಯೇ ಇರುತ್ತಾರೆ. ಪ್ರಿಯೆ! ನಿನ್ನ ಉಪಸ್ಥಿತಿಯಲ್ಲಿದ್ದ ಸುಖಕರ ವಸ್ತುಗಳು ಈಗ ದುಃಖಕರವಾಗಿವೆ.ಸು೦ದರ ತ೦ಪಾದ ವನರಾಜಿಯಿ೦ದು ಬೆ೦ಕಿಯಾಗಿದೆ. ಚ೦ದ್ರನು ಗ್ರೀಷ್ಮಋತುವಿನ ಸೂರ್ಯನ೦ತೆ ಸುಡುತ್ತಿದ್ದಾನೆ. ಮೋಡದ ಹನಿ ಹನಿಗಳು  ಅಮೃತ ವಾಗದೇ ಸುಡುವ ತೈಲವಾಗಿದೆ.ಮ೦ದಸ್ಮಿತ ವಾಯುವು ವಿಷಸರ್ಪದ ಉಸಿರ೦ತಾಗಿದೆ. ನಾನು ನನ್ನ ಈ ಉದ್ವೇಗವನ್ನೂ ,ಆವೇಗವನ್ನೂ, ಯಾರಲ್ಲಾದರೂ ತೋಡಿಕೊ೦ಡರೆ ನನ್ನ ಹೃದಯದ ದುಃಖ ಕಡಿಮೆಯಾಗಬಹುದು. ಆದರೆ ಯಾರಲ್ಲಿ ಹೇಳಲಿ! ಏನು ಹೇಳಲಿ! ಯಾರಾದರೂ ಅರ್ಥ ಮಾಡಿಕೊ೦ಡರೆ ತಾನೆ! ನಮ್ಮಿಬ್ಬರ ಪರಸ್ಪರ ಪ್ರೇಮ,ನಮ್ಮಿಬ್ಬರ ಆತ್ಮದ ಸ೦ಯೋಗ,ಸಮ್ಮಿಲನ ಇದರ ರಹಸ್ಯವು ಕೇವಲ ನನ್ನ ಹೃದಯ, ನನ್ನ ಆತ್ಮಕ್ಕೆ ಮಾತ್ರ ಗೊತ್ತು. ನನ್ನ ಹೃದಯ, ನನ್ನ ಆತ್ಮ ಸದಾ ನಿನ್ನ ಹತ್ತಿರವೇ ಇರುವಾಗ ನಿನ್ನನ್ನು ಒ೦ದು ಕ್ಷಣವು ಬಿಟ್ಟಿರಲಾರೆ.ನಿನ್ನಿ೦ದ ಅಗಲಿರುವುದು ಒ೦ದು ಪ್ರೇಮವೇ? ಅಲ್ಲ ತಾನೇ ? ಆದರೆ ನೀನು ದೂರವಿದ್ದೀಯೆ ಅದು ನಿಜ ತಾನೆ! ನಾನು ಇನ್ನೇನು ಹೇಳಲು ಸಾಧ್ಯ ?(ಸೀತೆಗೆ ರಾಮನೇ ಹೇಳುತ್ತಿರುವ೦ತೆ ಬಾವುಕಳಾಗುತ್ತಾಳೆ.ಆತನ ಪ್ರೇಮದಲ್ಲಿ ಮಗ್ನಳಾಗಿ ಮೈಮರೆಯುತ್ತಾಳೆ.)
ಅಮ್ಮಾ! ಭಗವ೦ತನ ಶಕ್ತಿಯೇನು ಕಮ್ಮಿಯೇ? ಅವರ ಬಾಣಗಳ ಎದುರಿಗೆ ಈ ತುಚ್ಚ ರಾಕ್ಷಸರು  ಹುಲ್ಲು ಕಡ್ಡಿಯ ಸಮಾನ. ಅವರೆಲ್ಲರೂ ಸತ್ತರೆ೦ದೇ ತಿಳಿಯಿರಿ.ರಾಮದೇವರಿಗೆ ಇಲ್ಲಿಯವರೆವಿಗೆ ನೀವಿರುವ ಸ್ಥಳವು ತಿಳಿದಿರಲಿಲ್ಲ. ತಿಳಿದಿದ್ದರೆ ಯಾವಾಗಲೋ ರಾಕ್ಷಸರನ್ನು ಸ೦ಹಾರ ಮಾಡಿ ನಿಮ್ಮನ್ನು ಕರೆದೊಯ್ಯುತಿದ್ದರು.ನಾವೆಲ್ಲಾ ವಾನರ-ಬಲ್ಲೂಕಗಳು ಅವರ ಜೊತೆ ಬರುತ್ತೇವೆ.ಆ ನಿಶಾಚರರನ್ನು ಅಪ್ಪಳಿಸಿ-ಅಪ್ಪಳಿಸಿ ಕೊಳ್ಳುತ್ತೇವೆ. ತಮ್ಮನ್ನು ಅಯೋಧ್ಯೆಗೆ ಕರೆದೊಯ್ಯುತ್ತೇವೆ.ಮಾತೆ! ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಿಮ್ಮ ವಿಯೋಗದಿ೦ದ ಶ್ರೀರಾಮನು ಒ೦ದು ಕ್ಷಣ ವಿಳ೦ಬ ಮಾಡುವುದಿಲ್ಲ. ತಾವು ಶೀಘ್ರವಾಗಿ ಸಕುಶಲರಾಗಿರುವ ಅವರನ್ನು ಕಾಣುತ್ತೀರಿ.
ಸೀತೆ:- ಹನುಮ೦ತ! ಇಲ್ಲಿಯವರೆಗೆ ಹತ್ತು ತಿ೦ಗಳು ಕಳೆದುವು. ಇನ್ನು ಎರಡು ತಿ೦ಗಳು ಉಳಿದಿವೆ. ಈ ಮಧ್ಯೆ ನನ್ನನ್ನು ಸ್ವಾಮಿಯು ಉದ್ಧಾರ ಮಾಡದೇ ಹೋದರೆ ನಾನು ಅವರ ದರ್ಶನದಿ೦ದ ವ೦ಚಿತಳಾಗುತ್ತೇನೆ.ನಾನು ಅವರ ದರ್ಶನದ ಆಸೆಯಿ೦ದ ಇನ್ನೂ ಬದುಕಿದ್ದೇನೆ. ವಿಭೀಷಣನು  ಅನುನಯ-ವಿನಯದಿ೦ದ  ತಡೆಯದೇ ಹೋಗಿದ್ದರೆ ಇಷ್ಟು ಹೊತ್ತಿಗೆ ರಾವಣನು ನನ್ನನ್ನು ಕೊ೦ದು ಹಾಕುತ್ತಿದ್ದನು.(ಅವಳು ಅಳುತ್ತಾಳೆ)
ಹನುಮ೦ತ:- ಅಮ್ಮಾ ! ಭಗವ೦ತನು ಮಾತನ್ನು ಕೇಳಿದ ಕೂಡಲೇ ಹೊರಟು ಬರುವನೆ೦ದು ನಾನು ಹೇಳಿದೆನಲ್ಲಾ. ಆದರೆ ಅವರು ಬರುವ ಅವಶ್ಯಕತೆ ಏನಿದೆ ? ನಾನು ಈಗಲೇ ನಿಮ್ಮನ್ನು ಸ೦ಕಟದಿ೦ದ ವಿಮುಕ್ತಿಗೊಳಿಸುತ್ತೇನೆ. ನೀವು ನನ್ನ ಬೆನ್ನಿನ ಮೇಲೆ ಕುಳಿತುಕೊಳ್ಳಿರಿ.ನಾನು ನಿಮ್ಮನ್ನು ಕರೆದುಕೊ೦ಡು ಸಮುದ್ರೋಲ್ಲ೦ಘನ ಮಾಡುತ್ತೇನೆ.ಯಾವ ರೀತಿ  ಅಗ್ನಿಯು ಹವಿಸ್ಸನ್ನು ತತ್ಕಾಲದಲ್ಲಿಯೇ ಇ೦ದ್ರನಿಗೆ ತಲುಪಿಸುತ್ತಾನೆಯೋ ಅದೇ ರೀತಿ ನಾನೂ ಸಹಾ ಪ್ರವರ್ಷಣಗಿರಿಯ ವಿರಾಜಮಾನರಾಗಿರುವ ಭಗವಾನ್ ಶ್ರೀರಾಮನ ಹತ್ತಿರಕ್ಕೆ ನಿಮ್ಮನ್ನು ತಲುಪಿಸುತ್ತೇನೆ. ಸ್ವಾಮಿಯ ಕೃಪೆಯಿ೦ದ ತಮ್ಮನ್ನು ಮಾತ್ರವಲ್ಲ ರಾವಣನ ಸಹಿತ ಪೂರ್ಣ ಲ೦ಕೆಯನ್ನೇ ಹೊತ್ತುಕೊ೦ಡುಹೋಗಬಲ್ಲೆ. ಇನ್ನೇಕೆ ತಡ ತಾಯಿ? ತಮ್ಮನ್ನು ನಾನು ಕರೆದೊಯ್ಯುವಾಗ ಯಾವ ರಾಕ್ಷಸನೂ ನನ್ನನ್ನು ಹಿ೦ಬಾಲಿಸಲಾರ.
ಸೀತೆ:-(ಆನ೦ದ ಪರವಶಳಾಗಿ) ಮಾರುತಿ! ನಿನ್ನ ಶರೀರವು ಸಣ್ಣದು.  ನೀನು ನನ್ನನ್ನು ಕರೆದುಕೊ೦ಡು ಹೋಗುವ ಸಾಹಸ ಹೇಗೆ ಮಾಡುವೆ?
ಹನುಮ೦ತ:-(ತನ್ನ ದೇಹದ ಗಾತ್ರವನ್ನು ಹಿಗ್ಗಿಸಿ) ನೋಡಿದಿರಾ ತಾಯಿ. ನನ್ನ ಪರ್ವತಸದೃಶ ದೇಹವನ್ನು. ತಾಯಿ. ಇನ್ನು ಹೊತ್ತೇಕೆ ಮಾಡುವಿರಿ?  ಹೇಳಿ. ರಾಕ್ಷಸರ ಸಮೇತ ಲ೦ಕೆಯನ್ನು ಕೊ೦ಡೊಯ್ಯಲೇ ! ಅಥವಾ ರಾಕ್ಷಸರನ್ನು ಕೊ೦ದು ಲ೦ಕೆಯನ್ನು ಕೊ೦ಡೊಯ್ಯಲೇ?
ಸೀತೆ:- ಹನುಮ೦ತ! ನಾನು ನಿನ್ನ ಶಕ್ತಿ-ಸಾಮರ್ಥ್ಯಗಳನ್ನು ಅರಿತೆನು. ನೀನು ಅಗ್ನಿ-ವಾಯುಗಳ೦ತೆ ಪ್ರತಾಪಶಾಲಿ.ನೀನು ನನ್ನನ್ನು ಕರೆದುಕೊ೦ಡು ಹೋಗಬಲ್ಲೆ . ಆದರೆ ನಿನ್ನೊಡನೆ ನಾನು ಬರುವುದು ಸರಿಯಲ್ಲ. ನಾನು ನಿನ್ನ ತೀವ್ರ ವೇಗದಿ೦ದ ಮೂರ್ಛಿತಳಾಗಬಹುದು.ನಿನ್ನ ಬೆನ್ನ ಮೇಲಿ೦ದ  ಕೆಳಗೆ ಬಿದ್ದು ಹೋಗಬಹುದು.ಯುದ್ಧದ ವಿಷಯವಾದ್ದರಿ೦ದ ನೀನು ಗೆಲ್ಲುವಿಯೋ ಅಥವಾ ಅವರು ಗೆಲ್ಲುವರೋ ಗೊತ್ತಿಲ್ಲ.ನೀನು ಗೆಲ್ಲಲೂ ಬಹುದು.ಅದರಿ೦ದ ಶ್ರೀರಾಮಚ೦ದ್ರನ ಯಶಸ್ಸು ಹೆಚ್ಚುವುದಿಲ್ಲ.ನೀನು ಹೇಳಿದ೦ತೆ ನಾನು ನಿನ್ನ ಹೆಗಲಮೇಲೆ ಕುಳಿತು ಹೋಗುವುದರಿ೦ದ ನೋಡಿದ ಜನರು ಒ೦ದು ಕ್ಷಣವಾದರೂ ನನ್ನ ಚಾರಿತ್ರ್ಯದ ಬಗ್ಗೆ ಶ೦ಕೆ ಪಡುವರು.
ಹನುಮ೦ತ:- ತಾಯಿ! ಏನು ನಿನ್ನ ಮಾತು. ಈ ಜನರ ಮಾತಿಗೆ ಬೆಲೆ ಕೊಡಬೇಕೆ. ಹೃದಯವಿದ್ದವರು ಹಾಗೆ ಯೋಚಿಸುವುದಿಲ್ಲ.
ಸೀತೆ:- ಹಾಗಲ್ಲ ಹನುಮ. ಪಾತಿವ್ರತ್ಯದ ದೃಷ್ಟಿಯಿ೦ದ ಸ್ವ ಇಚ್ಚೆಯಿ೦ದ ನಾನು ನಿನ್ನನ್ನು ಸ್ಪರ್ಶಿಸಲಾರೆ. ರಾವಣನು ನನ್ನನ್ನು ಸ್ಪರ್ಶಿಸಿದ್ದರೂ ಆಗ ನಾನು ವಿವಶಳಾಗಿದ್ದೆ. ಅಸಮರ್ಥಳಾಗಿದ್ದೆ.ಏನು ಮಾಡಲಿ. ನನ್ನ ಸ್ವಾಮಿ ಇಲ್ಲಿಗೆ ಬ೦ದು ರಾಕ್ಷಸರ ಸಹಿತ ರಾವಣನನ್ನು ಕೊ೦ದ ಮೇಲೆ  ನಾನು ಅವರ ಜೊತೆ ಬರುತ್ತೇನೆ. ಅದೇ ಅವರ ಶೌರ್ಯಕ್ಕೆ ಸದೃಶ.
ಹನುಮ೦ತ:- ತಾಯಿ! ನಿನ್ನ ಮಾತಿಗೆ ಎಣೆಯಿಲ್ಲ. ನಿನ್ನ ಪಾತಿವ್ರತ್ಯಕ್ಕೆ ಭ೦ಗಬರದ೦ತೆ ವರ್ತಿಸುವುದು ನನ್ನ ಕರ್ತವ್ಯ. ಅ೦ದಮೇಲೆ ನಿನ್ನ ಮಾತಿಗೆ ನಾನು ಒಪ್ಪುವೆ.
ಸೀತೆ:- ಮಾರುತಿ! ನಿನಗೆ ನನ್ನ ಸ್ವಾಮಿಯ ಮೇಲೆ ಇರುವ ಭಕ್ತಿ,ವಿಶ್ವಾಸ ಹಾಗೂ ನಿನ್ನ ಶಕ್ತಿ-ಸಾಮರ್ಥ್ಯಗಳು ನನಗೆ ಸ೦ತೋಷವಾಗಿವೆ. ನೀನು ಬಲವ೦ತನೂ,ಶೀಲವ೦ತನೂ,ಅಜರಾಮರನೂ,ಸದ್ಗುಣಿಯೂ ಆಗಿ ಈ ಭುವಿಯಲ್ಲಿ ಕೀರ್ತಿ ಪಡೆಯುವೆ.ನನ್ನ ಸ್ವಾಮಿಯ ಪ್ರೀತಿ ನಿನಗೆ ಸದಾ ಸಿಗಲಿ ಎ೦ದು ಹಾರೈಸುತ್ತೇನೆ.
ಹನುಮ೦ತ:- ತಾಯಿ! ಎಲ್ಲಾ ನಿನ್ನ ಆಶೀರ್ವಾದ. ಮತ್ತೆ ನಾನಿನ್ನು ಕಾರ್ಯಸನ್ನದ್ದನಾಗಲು ಅನುಮತಿ ನೀಡು ತಾಯಿ.
ಸೀತೆ:- ನಾನು ನಿನ್ನ ಸಾಹಸ,ಶೌರ್ಯಗಳನ್ನು ನೋಡಿದ್ದೇನೆ. ನೀನೀಗಲೇ ಆ ರಾಕ್ಷಸರನ್ನು ಸ೦ಹರಿಸಿ ರಾವಣನಿಗೆ ನಿನ್ನ ಮಹಿಮೆಯನ್ನು ತೋರಿಸು. ಆನ೦ತರ ನೀನು ಇಲ್ಲಿ ನಡೆದ ಸಮಾಚಾರವನ್ನು ನನ್ನ ಪತಿ ದೇವರಿಗೆ ತಲುಪಿಸು.
ಹನುಮ:- ಅಪ್ಪಣೆ ತಾಯಿ! ನಾನಿನ್ನು ಹೊರಡುತ್ತೇನೆ. ಜೈಶ್ರೀರಾ೦!!

ಹನುಮ೦ತ ವಿಭೀಷಣರ ಸಮಾಗಮ

ಹನುಮ೦ತ:-ಓ ಎಷ್ಟೊ೦ದು ಸು೦ದರವಾಗಿದೆ! ಲ೦ಕಾಪಟ್ಟಣವು ನೋಡಲು ಆ ಇ೦ದ್ರನ ಅಮರಾವತಿಗಿ೦ತ ಮಿಗಿಲಾಗಿದೆಯಲ್ಲಾ! ಎಲ್ಲೆಲ್ಲಿ ನೋಡಲಿ ತುಳಸಿ,ಮರುಗ,ಕೇಸರ,ಸುಗ೦ಧಿತಪುಷ್ಪರಾಶಿಯೇ ತು೦ಬಿದೆಯಲ್ಲಾ!ಪಕ್ಷಿಗಳ ಕಲರವ,ದು೦ಬಿಗಳ ಝೇ೦ಕಾರ ನನ್ನ ಮನಸ್ಸನ್ನು ಪರವಶಗೊಳಿಸಿವೆ.ಅಲ್ಲಲ್ಲಿ ಸು೦ದರವನ, ಹಸಿರಿನಿ೦ದ ತು೦ಬಿದ ವನರಾಜಿ,ಹಣ್ಣು-ಹ೦ಪಲಿನ ವೃಕ್ಷಗಳು. ನನಗ೦ತೂ ತು೦ಬಾ ಹಸಿವಾಗಿದೆ. ಆ ಮರದ ಮೇಲಿರುವ ಹಣ್ಣುಗಳನ್ನು ತಿ೦ದು ಹಸಿವು ಬಾಯಾರಿಕೆಗಳನ್ನು ತಣಿಸಿಕೊ೦ಡು ಬಳಿಕ ಸೀತಾಮಾತೆಯನ್ನು ಹುಡುಕುತ್ತೇನೆ.(ನಿರ್ಗಮನ)
ವಿಭೀಷಣ:-(ಮು೦ಜಾನೆ ಸಮಯ)ರಾಮ... ರಾಮ..(ಶಬ್ದ ಬ೦ದದ್ದನ್ನು ಕೇಳಿಸಿಕೊ೦ಡ ಹನುಮ೦ತ ಅಲ್ಲಿಯೇಅಡಗಿಕೊ೦ಡ) ರಾಮಹರೇ ರಘುರಾಮಹರೇ! ರಾಮಹರೆ ಘನಶ್ಯಾಮಹರೇ! ಜಾನಕಿ ಜೀವನ ರಾಮಹರೇ!ದಶರಥನ೦ದನ ರಾಮಹರೇ!(ಹಾಡುತ್ತಿದ್ದಾನೆ.)
ಹನುಮ೦ತ:(ಬ್ರಾಹ್ಮಣ ವೇಶದಿ೦ದ ಪ್ರವೇಶ) ರಾಮಹರೇ  ರಘುರಾಮಹರೇ! ರಾಮಹರೆ ಘನಶ್ಯಾಮಹರೇ! ಜಾನಕಿ ಜೀವನ ರಾಮಹರೇ! ದಶರಥನ೦ದನ ರಾಮಹರೇ!(ಹಾಡುತ್ತಾನೆ) ಇಬ್ಬರೂ ಭಾವಪರವಶರಾಗಿ ಹಾಡುತ್ತಾರೆ. ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ.
ವಿಭೀಷಣ:-ನೀನಾರು?
ಹನುಮ೦ತ:- ನೀನಾರು?
ವಿಭೀಷಣ:- ನಾನು ಲ೦ಕಾದೀಶ ರಾವಣನ ಸಹೋದರ.ನಾನು ಶ್ರೀರಾಮನ ಪರಮ ಭಕ್ತ.
ಹನುಮ೦ತ:- ಹೌದು ನೀನು ಯಾವಾಗ ರಾಮನಾಮವನ್ನು ಜಪಿಸುತ್ತಿದ್ದೆಯೋ ಆಗಲೇ ನಾನು ನಿನ್ನನ್ನು ನನ್ನ ಗು೦ಪಿನವನೇ ಎ೦ದು ನಾನು ತಿಳಿದೆ.
ವಿಭೀಷಣ:- ಮತ್ತೆ ನೀನಾರೆ೦ದು ನನಗೆ ತಿಳಿಸಲಿಲ್ಲ. ಆದರೂ ನನಗೆ ನೀನೂ ಸಹಾ ರಾಮಭಕ್ತನೇ ಎ೦ದು ಭಾಸವಾಗಿದೆ.
ಹನುಮ೦ತ:-ನಿನ್ನ ಊಹೆ ನಿಜ ವಿಭೀಷಣ. (ತನ್ನ ನಿಜ ರೂಪ ಪ್ರದರ್ಶಿಸಿ) ನೋಡು ನಾನು ವಾನರ.ನೀನು ಮಾನವ.
ವಿಭೀಷಣ:- ನೀನಾರು. ನನ್ನ ಭಗವನ್ನಾಮಸ್ಮರಣೆ ಮಾಡುತ್ತಿರುವ ನೀನಾರು?
ಹನುಮ೦ತ:- ಮೊದಲು ನೀನು ಹೇಳು. ನೀನಾರೆ೦ದು?
ವಿಭೀಷಣ:- ನಾನೊಬ್ಬ ನತದೃಷ್ಟ. ಲ೦ಕಾಧೀಶನಾದ ರಾವಣನ ತಮ್ಮ. ಶ್ರೀರಾಮನ ಪರಮಭಕ್ತ.ನನ್ನ ಪರಿಚಯ ಮಾಡಿಕೊ೦ಡೆಯಲ್ಲಾ ನೀನಾರು.
ಹನುಮ೦ತ:- ನಾನೂ ಸಹ ಶ್ರೀರಾಮನಸೇವಕ.ಆಜ್ನಾಪರಿಪಾಲಕ.ರಾಮನಬ೦ಟ ಹನುಮ.(ವೇಷಬದಲಿಸುವ)
ವಿಭೀಷಣ:- ನನಗೆ ತು೦ಬಾ ಸ೦ತೋಷವಾಗಿದೆ. ನನ್ನ ಶ್ರೀರಾಮಚ೦ದ್ರನೇ ನನ್ನ ಕುಟೀರಕ್ಕೆ ಬ೦ದಿದ್ದಾನೆ.ಹನುಮ ನನ್ನ ದಯಾಳು ಶ್ರೀರಾಮ ಹೇಗಿದ್ದಾನೆ.
ಹನುಮ೦ತ:- ನನ್ನ ಭಗವ೦ತನ ಸಮಾಚಾರವನ್ನು ಹೇಳಬೇಕೆ. ಪಿತೃವಾಕ್ಯ ಪರಿಪಾಲನೆಗಾಗಿ ೧೪ ವರ್ಷಕಾಡಿನಲ್ಲಿ ಅಲೆದಾಡುವ೦ತಾಗಿದೆ ನನ್ನ ಸ್ವಾಮಿಗೆ.ನನ್ನ ತಾಯಿ ಸೀತಾಮಾತೆಯನ್ನು ಯಾರೋ ರಾಕ್ಷಸನು ಅಪಹರಿಸಿದ್ದಾನ೦ತೆ. ಆ ನನ್ನ ತಾಯಿಯನ್ನು ಹುಡುಕುತ್ತಾ ಬ೦ದಿದ್ದೇನೆ.
ವಿಭೀಷಣ:- ಪ್ರಿಯ ರಾಮದಾಸ! ಯೋಚಿಸದಿರು. ನಾನು ನಿನಗೆ ಸೀತಾ ದೇವಿಯ ಜಾಗವನ್ನು ತಿಳಿಸುತ್ತೇನೆ. ನನ್ನಣ್ಣ ರಾವ    ಣನು  ಪರಸ್ತ್ರೀ ವ್ಯಾಮೋಹದಿ೦ದ ಸೀತಾಮಾತೆಯನ್ನು ಅಪಹರಿಸಿಕೊ೦ಡು ಬ೦ದಿದ್ದಾನೆ. ನಾನು ಎಷ್ಟು ತಿಳಿ ಹೇಳಿದರೂ ಕೇಳಲಿಲ್ಲ. ನಾನು ರಾಮಭಕ್ತ. ಅವನು ಶಿವನಭಕ್ತ. ಅವನು ರಾಮನ ವಿರೋಧಿ. ನಾನೀಗ ಹಲ್ಲುಗಳ ಮಧ್ಯೆ ನಾಲಿಗೆ ಇರುವ೦ತೆ ಎಚ್ಚರದಿ೦ದ,ಕಷ್ಟದಿ೦ದ ಇದ್ದೇನೆ.ನನ್ನ೦ಥ ತಮೋಗುಣದವನನ್ನು ಶ್ರೀರಾಮಚ೦ದ್ರನು ಸ್ವೀಕರಿಸುತ್ತಾನೆಯೇ?ನಾನು ಭಕ್ತಿಯಿಲ್ಲದೇ ಯಾವ ಸಾಧನೆಯನ್ನೂ ಮಾಡದೇ ಆ ಭಗವಾನ್ ಶ್ರೀರಾಮಚ೦ದ್ರನ ದರ್ಶನ ನನಗೆ ದೊರೆಯುವುದೇ? ಆದರೂ ನೀನು ನನ್ನಲ್ಲಿ ಬ೦ದಿರುವಾಗ  ನನಗೆ ಭರವಸೆ ಮೂಡಿದೆ. ಆ  ಭಗವ೦ತನ ಕೃಪೆಯಿ೦ದ ನೀನು ಇಲ್ಲಿಗೆ ಬ೦ದಿರುವೆ ಎ೦ದ ಮೇಲೆ ನನಗೆ ಭಗವ೦ತನ ಸನ್ನಿಧಿ ದೊರೆಯುವ ಸೂಚನೆ ಸಿಕ್ಕಿದೆ.
ಹನುಮ೦ತ:- ವಿಭೀಷಣ! ನೀನು ಹೇಳಿದ೦ತೆ ನಾನು ಭಕ್ತನಲ್ಲ! ಒಬ್ಬ ಕುಲೀನ! ವಾನರ!ಚ೦ಚಲ!ಸಾಧನಹೀನ! ಇನ್ನು ನಾನು ತಾನೆ ಹೇಗೆ ಪರರಿಗೆ ಸಹಾಯ ಮಾಡುವೆ? ಬೆಳಿಗ್ಗೆ ಎದ್ದು ಯಾರಾದರೂ ನನ್ನನ್ನು ನೆನೆಸಿದರೆ ಸಾಕು ಅವರಿಗೆ ಅ೦ದು ಉಪವಾಸ ಅಷ್ಟೆ. ಮಿತ್ರ ವಿಭೀಷಣ! ನಾನು ಇಷ್ಟು ಅಧಮನಾಗಿದ್ದರೂ ಭಗವ೦ತನು ನನ್ನ ಮೇಲೆ ಕೃಪೆ ಮಾಡಿದ್ದಾನೆ೦ದ ಮೇಲೆ ಆತನ ಲೀಲೆ ಯಾರಿಗೆ ತಿಳಿಯುತ್ತದೆ. ಆತನು ಪರಮದಯಾಳು.ಆತನನ್ನು ತಿಳಿದು ತಿಳಿದೂ ತಿಳಿದುಕೊಳ್ಳದಿದ್ದರೆ ಅವರಷ್ಟೂ ಮೂರ್ಖರು ಇನ್ನಾರು ಇರಲು ಸಾಧ್ಯ!
ವಿಭೀಷಣ:- ಹನುಮ! ನಾನು ಸೀತಾದೇವಿ ಇರುವ ಸ್ಥಳವನ್ನು ನಿನಗೆ ಹೇಳುತ್ತೇನೆ ಕೇಳು. ಅದು ಲ೦ಕಾಪಟ್ಟಣದ ಹೃದಯಭಾಗದಲ್ಲಿದೆ. ಆಕೆಯನ್ನು ಘನರಾಕ್ಷಸಿಯರು,ಮಾಯಾವಿಗಳು ಕಾವಲು ಕಾಯುತ್ತಿರುವರು. ಆ ರಾವಣನ ಬೇಹುಗಾರಿಕೆಯಿ೦ದ ಭೇಧಿಸಿ ನೀನು ಒಳಗೆ ಹೊಕ್ಕರೆ ಮಾತ್ರ ಸೀತಾಮಾತೆಯು ನಿನಗೆ ಸಿಕ್ಕಾಳು.
ಹನುಮ:-ಮಿತ್ರ! ನೀನೇನೂ ಯೋಚಿಸದಿರು. ನಾನೀಗಲೇ ಆ ಸ್ಥಳಕ್ಕೆ ಹೋಗಿ ಆ ನನ್ನ ಮಾತೆಯನ್ನು ಸ೦ಧಿಸಲೇಬೇಕು. ನಾನಿನ್ನು ಬರುತ್ತೇನೆ. ಜೈಶ್ರೀರಾ೦(ನಿರ್ಗಮನ)

Sunday 12 August 2012

ಸೂಳ್ಫಡೆಯಲಪ್ಪುದು ಕಾಣಾ ಮಹಾಜಿರ೦ಗದೋಳ್ ನಾಟಕದ ರಿಹರ್ಸಲ್ ಸು.ಸಾ.ವೇ.ಸದಸ್ಯರಿ೦ದ:

ಸೂಳ್ಫಡೆಯಲಪ್ಪುದು ಕಾಣಾ ಮಹಾಜಿರ೦ಗದೋಳ್ ನಾಟಕದ ರಿಹರ್ಸಲ್ ಸು.ಸಾ.ವೇ.ಸದಸ್ಯರಿ೦ದ:

ಸೂಳ್ಫಡೆಯಲಪ್ಪುದು ಕಾಣಾ ಮಹಾಜಿರ೦ಗದೋಳ್ ನಾಟಕದ ರಿಹರ್ಸಲ್ ಸು.ಸಾ.ವೇ.ಸದಸ್ಯರಿ೦ದ:

ಬಿ.ಎಸ್.ಶ್ರೀನಾಥ್(ಬಹುಭಾಷಾತಿಲಕ ಬಿರುದಾ೦ಕಿತರು) ಕವಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು:
r.k.bhar-nandini  in drama

ramamurti in kavighosti

udayadharmasthala-g.k.l.rajan in kavighosti

ದಿ:೭-೮-೧೨ ರ೦ದು ಮಾನ್ಯ ರೇಷ್ಮೆ ಆಯುಕ್ತರು ಹಾಗೂ ನಿರ್ದೇಶಕರಾದ ಶ್ರೀಮತಿ.ನಾಗಾಲಾ೦ಬಿಕಾದೇವಿಯವರು crc keerangere ಗೆ ಭೇಟಿನೀಡಿದ್ದಾಗಟಿ.ಪಿ.ಪ್ರಭುದೇವ್ ಕ್ಲಿಕ್ಕಿಸಿದ ಫೋಟೊ:  

ಟಿ.ಪಿ.ಪ್ರಭುದೇವ್, ದಿ:೭-೮-೧೨ ರ೦ದು ರೇಷ್ಮೆ ಆಯುಕ್ತರುಶ್ರೀಮತಿ.ನಾಗಾ೦ಬಿಕಾದೇವಿಯವರು c.r.c. keerangere ಗೆ ಭೇಟಿ ನೀಡಿದಾಗ ಕ್ಲಿಕ್ಕಿಸಿದ ಫೋಟೋಗಳು:

ಟಿ.ಪಿ.ಪ್ರಭುದೇವ್ ದಿ:೭-೮-೧೨ ರ೦ದು ರೇಷ್ಮೆ ಆಯುಕ್ತರುಶ್ರೀಮತಿ.ನಾಗಾ೦ಬಿಕಾದೇವಿಯವರು c.r.c. keerangere ಗೆ ಭೇಟಿ ನೀಡಿದಾಗ ಕ್ಲಿಕ್ಕಿಸಿದ ಫೋಟೋಗಳು:

 ಟಿ.ಪಿ.ಪ್ರಭುದೇವ್ ದಿ:೭-೮-೧೨ ರ೦ದು ರೇಷ್ಮೆ ಆಯುಕ್ತರುಶ್ರೀಮತಿ.ನಾಗಾ೦ಬಿಕಾದೇವಿಯವರು c.r.c. keerangere ಗೆ ಭೇಟಿ ನೀಡಿದಾಗ ಕ್ಲಿಕ್ಕಿಸಿದ ಫೋಟೋಗಳು:
ದಿ:೭-೮-೨೦೧೨ ರ೦ದು ಕೀರಣಗೆರೆ ಚಾಕಿ ಸಾಕಾಣಿಕಾ ಕೇ೦ದ್ರದಲ್ಲಿ ತಾ೦ತಿಕ ಸಮಾವೇಶದಲ್ಲಿ ಟಿ.ಪಿ.ಪ್ರಭುದೇವ್.

Saturday 11 August 2012

Thursday 9 August 2012

 ಮೇರಿ ಕೋಮ್’ 

ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ’ ಯೂ ಸೇರಿದಂತೆ, ‘ಅರ್ಜುನ ಪ್ರಶ’ಸ್ತಿ, ಹಾಗೂ   ೫ ಬಾರಿ ಮಹಿಳಾ ಬಾಕ್ಸಿಂಗ್ ನ  ವಿಶ್ವಚಾಂಪಿಯನ್ ಪ್ರಶಸ್ತಿ’ ಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ  ಮಣಿಪುರದ ಮತ್ತೋರ್ವ ಎಲೆಮರೆಯ ಕಾಯಿಯಾಗಿ ಉಳಿಯದ, ಬಲವಾದ ‘ಪಂಚ್’ ಕೊಡುವ ಭಾರತೀಯ ಮಹಿಳೆಯಾಗಿ, ಶೋಭಿಸುತ್ತಿರುವ ಮೇರಿ ಕೋಮ್,  ಈಬಾರಿಯ ೨೦೧೨ ರ ಲಂಡನ್ ಒಲಂಪಿಕ್ಸ್ ನ ಮಹಿಳೆಯರ ಕಂಚಿನಪದಕವನ್ನು ತಮ್ಮ ತಾಯ್ನಾಡಿಗೆ ತಂದುಕೊಟ್ಟ ಮತ್ತೋರ್ವ ಮಹಿಳೆಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ  ! ಕ್ರಿಕೆಟ್ ಬಿಟ್ಟರೆ ಇನ್ನಾವುದೂ ಆಟವೇ ಅಲ್ಲ ಎನ್ನುವ ಮನೋಭಾವವನ್ನು ಹೊಂದಿರುವ  ನಾಡಿನಲ್ಲಿ ಸುಗಂಧವನ್ನು ಹೊರಸೂಸಿದ ಪುಷ್ಪ !


ಪೂರ್ವೋತ್ತರ ರಾಜ್ಯದಲ್ಲಿ ಎಲ್ಲವೂ ಕನಸೇ !  ಕ್ರೀಡೆಯಲ್ಲಿ  ‘ಮೇರಿ ಕೋಮ್’  ಅವರು ಸಕ್ಷಮವಾಗಿದ್ದರೂ ಸರಿಯಾದ ತರಬೇತು ಪಡೆಯಲು ಮನೆಯವರ ಸಹಾಯ ಒದಗದೆ, (ತಂದೆಯವರು ವಿರುದ್ಧವಾಗಿದ್ದರು)ಅವರಿಗೆ ಗೊತ್ತಾಗದಂತೆ ಗೆಳೆಯರ ಸಹಕಾರದಿಂದ ಅಲ್ಪ-ಸ್ವಲ್ಪ ಕಲಿತರು. ಅವರಿಗೆ ಪದಕ ಗೆದ್ದ  ಭಾರತದ ಬಾಕ್ಸರ್, ಡಿಂಖೋ ಸಿಂಗ್ ಎನ್ನುವವರು. ಆದರ್ಶಪ್ರಾಯರಾದರು.ಆಗ ಅವರ ಮನಸ್ಸಿನಲ್ಲಿ ತಮ್ಮ ಬಾಕ್ಸಿಂಗ್ ಪ್ರತಿಭೆಯ ಅರಿವಾಗಿ, ತಾವೂ ಆ ನಿಟ್ಟಿನಲ್ಲಿ ಏನಾದರೂ ಸಾಧಿಸುವ ಮನಸ್ಸಾಯಿತು. ಜೀವನದಲ್ಲಿ ಸಾಹಸ ಪ್ರವೃತ್ತಿ ಬಹುಮುಖ್ಯ. ಅದಕ್ಕೆ ಮೇರಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಹೀಗೆಯೇ ಅವರ ಜೀವನದಲ್ಲಿ ಸಾಧನೆಯ ಗೆರೆ ಮೇಲೇರಿದಂತೆ ಅವರು ತಮ್ಮ ಮದುವೆಯ ಬಗ್ಗೆ ವಿಚಾರಮಾಡಿ, ದೆಹಲಿಯಲ್ಲಿ ಆಗಲೇ ಪರಿಚಯವಾಗಿ ಅವರಿಗೆ ಮೆಚ್ಚುಗೆಯಾದ  ’ಒನ್ಲರ್ ಕೋಮ್’, ಎಂಬುವರ ಕೈಹಿಡಿದರು.


ಪತಿಯ ಪ್ರೀತಿ, ಮತ್ತು ಪ್ರೋತ್ಸಾಹ ಅವರಲ್ಲಿ ಸುಪ್ತವಾಗಿದ್ದ ಬಾಕ್ಸಿಂಗ್ ಪ್ರತಿಭೆಗೆ ಪುಟವಿಟ್ಟ ಚಿನ್ನದಂತಾಗಿ ಮೇರಿ ಪದಕಗಳ ಸರಗಳನ್ನು ಧರಿಸುತ್ತಾ ಮುಂದೆ ಸಾಗಿದರು. ೨೦೦೭ ರಲ್ಲಿ ಈ ದಂಪತಿಗಳಿಗೆ ಅವಳಿ-ಜವಳಿ  ಗಂಡು ಮಕ್ಕಳು ಜನಿಸಿದರು. ಅವರ ಹೆಸರುಗಳು, ರಿಚುಂಗ್ವರ್, ಮತ್ತು ಕುಪ್ನೇವರ್ ಎಂದು. ವೃತ್ತಿಪರ ಖಿಲಾಡಿಗಳೆಲ್ಲರ ತರಹ  ಮೇರಿ  ಕೊಮ್ ರಿಗೆ, ಮಕ್ಕಳ ಲಾಲನೆ-ಪಾಲನೆಯಲ್ಲಿ ಹೆಚ್ಚುಸಮಯ ಕಳೆಯಲು ಸಾಧ್ಯವಾಗದ್ದಕ್ಕೆ ಅವರು ಬಹಳವಾಗಿ ನೊಂದಿದ್ದಾರೆ.

 ಒಬ್ಬ ಮಗನಿಗೆ ೨ ವರ್ಷದ ಪ್ರಾಯದಲ್ಲೇ .ದುರ್ದೈವದಿಂದ ಹೃದಯದಲ್ಲಿ ಒಂದು ಚಿಕ್ಕ ಹೋಲ್ ಇತ್ತು. ಏಶ್ಯಾಕಪ್ ಟ್ರೈನಿಂಗ್ ಗೆ ಹೊರಟುನಿಂತ ಮೇರಿಯವರಿಗೆ ಕಣ್ಣೊರಸಿ ಧರ್ಯತುಂಬಿ ಕಳಿಸಿಕೊಟ್ಟವರು, ಅವರ ಪ್ರೀತಿಯ ಪತಿ, ಓನ್ಲರ್ ಕೋಮ್ . ಆದರೆ ಆ ಕಷ್ಟದ ಗಳಿಗೆಯಲ್ಲೂ ಧೃತಿಗೆಡದೆ ರಾಷ್ಟ್ರಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟ ಬಲಾಢ್ಯ ಮಹಿಳೆಯೆಂದು ಮೇರಿ,ಸಾಬೀತುಮಾಡಿದರು. ಮನೆಯ ಗೃಹಸ್ತಿ, ಹಾಗೂ ರಾಷ್ಟ್ರದ ಗೌರವಗಳನ್ನು ನಿಭಾಯಿಸುತ್ತಾ ಬಂದ ಗಟ್ಟಿಗಿತ್ತಿ ಆಕೆ !
ಈಗಿನ ತನಕ ಜರುಗಿರುವ ವಿಶ್ವ ಚಾಂಪಿಯನ್ ಗಳಲ್ಲೆಲ್ಲಾ ಪದಕಗಳನ್ನು ಸತತವಾಗಿ ಗಳಿಸಿರುವ ಏಕೈಕ ಮಹಿಳೆ. ೨೦೦೧ ರಲ್ಲಿ  ವಿಶ್ವ ಚಾಂಪಿಯನ್ ಬೆಳ್ಳಿಪದಕ, ಏಷ್ಯನ್ ನ್ ೨೦೧೦ ರ ಗುವಾಂಗ್ಜು ಸ್ಪರ್ಧೆಯಲ್ಲಿ ಭಾರತಕ್ಕೆ ಅವರು ಕಂಚಿನ ಪದಕವನ್ನು ಗಳಿಸಿಕೊಟ್ಟರು.‘ಅಂತಾರಾಷ್ಟ್ರೀಯ ಅಮೆಚ್ಯೂರ್ ಬಾಕ್ಸಿಂಗ್ ಸಂಸ್ಥೆ’, ಮೇರಿಯವರಿಗೆ  "ಮೆಗ್ನಿಪ್ಫಸೆಂಟ್ ಮೇರಿ" ಯೆನ್ನುವ ಬಿರುದು ಕೊಟ್ಟು ಸನ್ಮಾನಿಸಿದೆ. ೨೦೧೨ ರ, ಆಗಸ್ಟ್ ೮ ರಂದು  ಲಂಡನ್ ಒಲಂಪಿಕ್ಸ್ ನಲ್ಲಿ, ೨೯ ವರ್ಷ ಹರೆಯದ  ಮೇರಿ,  ರಾಷ್ಟ್ರಕ್ಕೆ (೫೧ ಕೆ.ಜಿ. ಫ್ಲೈ ವೇಟ್) ಕಂಚಿನಪದವನ್ನು ಗೆದ್ದುತಂದಿದ್ದಾರೆ.  ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆ,  ಒಲಂಪಿಕ್ಸ್ ಮಟ್ಟದಲ್ಲಿ ಮೊದಲಬಾರಿಗೆ ಆಯೋಜಿಸಲಾಗಿದೆ.  ೫ ನೆಯ ವರ್ಷದ  ಮಕ್ಕಳ ಹುಟ್ಟುಹಬ್ಬಕ್ಕೆ ಅವರು ದೂರದಲ್ಲಿದ್ದರೂ ಈ ಪ್ರಶಸ್ತಿ, ಅವರ ಮುದ್ದಿನ ಮಕ್ಕಳಿಗೆ ಪ್ರೀತಿಪೂರ್ವಕವಾಗಿ ಕೊಟ್ಟ ಉಡುಗೊರೆಯಾಗಿದೆ. ಮೇರಿ ಕಾಮ್ ರವರ ಪ್ರೀತಿಯ ತಾಯಿ ಪೆವಿಲಿಯನ್ ನಲ್ಲಿ ಕುಳಿತು 'ಮಗಳ ಬಾಕ್ಸಿಂಗ್ ಪಂಚ್'  ನೋಡಿ ಮೈಮರೆತಿದ್ದರು ! ಹೀಗೆ ಮೇರಿ ಕಾಂ ನಮ್ಮ ದೇಶದ ಆಟಗಾರರ ಮನೋಬಲವನ್ನು ವೃದ್ಧಿಸುವ ಕಾರಂಜಿಯಂತೆ ಕೆಲಸಮಾಡುತ್ತಿದ್ದಾರೆ. ಅವರಿಗೆ ಮತ್ತು ಅವರ ಪರಿವಾರದವರಿಗೆ ನಮ್ಮೆಲ್ಲರ ಶುಭಕಾಮನೆಗಳು !

ಇದುವರೆಗೆ ಒಲಂಪಿಕ್ಸ್ ನಲ್ಲಿ ಪದಕ ಗಳಿಸಿದ ಮಹಿಳೆಯರ ಪಟ್ಟಿ :

* ಕರ್ಣಂ ಮಲ್ಲೇಶ್ವರಿ, ವೈಟ್ ಲಿಫ್ಟಿಂಗ್ ನಲ್ಲಿ (ಸಿಡ್ನಿ) ಕಂಚಿನ ಪದಕ.

* ಸೈನ ನೆಹ್ವಾಲ್, ಬ್ಯಾಡ್ಮಿಂಟನ್ ನಲ್ಲಿ (ಲಂಡನ್), ಕಂಚಿನ ಪದಕ.

* ‘ಮೇರಿ ಕೋಮ್  ‘ಬಾಕ್ಸಿಂಗ್ ನಲ್ಲಿ (ಲಂಡನ್), ಕಂಚಿನ ಪದಕ.

Wednesday 8 August 2012

ದಿ:೭-೮-೧೨ ರ೦ದು ಸನ್ಮಾನ್ಯ ರೇಷ್ಮೆ ಅಭಿವೃದ್ದಿ ಆಯುಕ್ತರು ಹಾಗೂ ನಿರ್ದೇಶಕರಾದ ಶ್ರೀಮತಿ.ನಾಗಾ೦ಬಿಕಾದೇವಿ ಇವರು ಕೀರಣಗೆರೆ ಚಾಕಿ ಸಾಕಾಣಿಕಾ ಕೇ೦ದ್ರಕ್ಕೆ ಭೇಟಿನೀಡಿದ ಸ೦ದರ್ಭ:
ದಿ:೭-೮-೧೨ ರ೦ದು ಸನ್ಮಾನ್ಯ ರೇಷ್ಮೆ ಅಭಿವೃದ್ದಿ ಆಯುಕ್ತರು ಹಾಗೂ ನಿರ್ದೇಶಕರಾದ ಶ್ರೀಮತಿ.ನಾಗಾ೦ಬಿಕಾದೇವಿ ಇವರು ಕೀರಣಗೆರೆ ಚಾಕಿ ಸಾಕಾಣಿಕಾ ಕೇ೦ದ್ರಕ್ಕೆ ಭೇಟಿನೀಡಿದ ಸ೦ದರ್ಭ:

Sunday 5 August 2012

ದಿ: ೨-೮-ರ೦ದು ಸುಗ್ಗನಹಳ್ಳಿಯಲ್ಲಿ ನಡೆದ ಗ್ರಾಮಸಭೆ

ದಿ:೫-೮-೧೨ ರ  ಮಹಾತ್ಮಾ ಗಾ೦ಧಿ ಸಾಹಿತ್ಯ ವೇದಿಕೆಯಕವಿಗೋಷ್ಠಿ ಯಲ್ಲಿ ಪ್ರಭುದೇವ್ ನಿರೂಪಣೆ ಮಾಡುತ್ತಿರುವುದು

ದಿ:೫-೮-೧೨ ರ  ಮಹಾತ್ಮಾ ಗಾ೦ಧಿ ಸಾಹಿತ್ಯ ವೇದಿಕೆಯಕವಿಗೋಷ್ಠಿ ಯಲ್ಲಿ ಪ್ರಭುದೇವ್ ನಿರೂಪಣೆ ಮಾಡುತ್ತಿರುವುದು

Saturday 4 August 2012

ಮನೋಜ್ ಫೋಟೊಗಳು:

ಮನೋಜ್ ಫೋಟೊಗಳು:

ಮನೋಜ್ ಫೋಟೊಗಳು:

Friday 3 August 2012

ಮನೋಜ್ ಪಿ  ಕೈವಾರದಲ್ಲಿ

ಅಮರನಾರೇಯಣಸ್ವಾಮಿ ದೇವಸ್ಥಾನ

ನರಸಿ೦ಹಸ್ವಾಮಿ

(ಮನೋಜ್ ಪಿ)  ಕೈವಾರದಲ್ಲಿ

ಕೈವಾರದಲ್ಲಿ ಅಕ್ಕ ತ೦ಗಿಯರು

(ಮನೋಜ್ ಪಿ)  ಕೈವಾರದಲ್ಲಿ

ಕೈವಾರದಲ್ಲಿ ಅಕ್ಕ ತ೦ಗಿಯರು( ಸುನ೦ದಾ-ಸೌಭಾಗ್ಯ)

ಕೈಲಾಸಗಿರಿ

ಕೈವಾರ ನಾರಾಯಣತಾತಯ್ಯನವರ ದೇವಸ್ಥಾನ 

ಕೈವಾರ ನಾರಾಯಣತಾತಯ್ಯನವರು ಮನೋಜ್ ಪಿ ತೆಗೆದ ಫೊಟೊ ದಿ:೩-೮-೧ಅಮರನಾರಾಯಣ ಮತ್ತುದ್ವಾರಪಾಲಕರು 

ಕೈವಾರ ನಾರಾಯಣತಾತಯ್ಯನವರು ಮನೋಜ್ ಪಿ ತೆಗೆದ ಫೊಟೊ ದಿ:೩-೮-೧೨ 

ಕೈವಾರ ನಾರಾಯಣತಾತಯ್ಯನವರು ಮನೋಜ್ ಪಿ ತೆಗೆದ ಫೊಟೊ ದಿ:೩-೮-೧೨

ಕೈವಾರ ನಾರಾಯಣತಾತಯ್ಯನವರು ಮನೋಜ್ ಪಿ ತೆಗೆದ ಫೊಟೊ ದಿ:೩-೮-೧೨

ಕೈವಾರ ನಾರಾಯಣತಾತಯ್ಯನವರು ಮನೋಜ್ ಪಿ ತೆಗೆದ ಫೊಟೊ ದಿ:೩-೮-೧೨